ಬೆಂಗಳೂರು:
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ರೌಡಿಗಳ ಮನೆ, ಪಬ್ ಮತ್ತು ಬಾರ್ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಳಗ್ಗೆ 5 ಗಂಟೆ ಸುಮಾರಿಗೆ ವಿಜಯನಗರ, ಕಾಮಾಕ್ಷಿಪಾಳ್ಯ, ಜಯನಗರದಲ್ಲಿ 14 ಕಡೆಗಳಲ್ಲಿ ಸಿಸಿಬಿ ದಾಳಿ ನಡೆಸಿದೆ, ದಂದೆಕೋರರಿಂದ 1 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ಕೆ.ಆರ್.ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ 15 ಮಂದಿ ದಂಧೆಕೋರರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಸಿಸಿಬಿಯ 100ಕ್ಕೂ ಅಧಿಕ ಸಿಬ್ಬಂದಿ ಮಿಂಚಿನ ದಾಳಿ ನಡೆಸಿ ದಂಧೆಯಲ್ಲಿ ತೊಡಗಿದ್ದ ಹಲವರನ್ನು ಬಂಧಿಸಿದ್ದಾರೆ.
ಮೀಟರ್ ಬಡ್ಡಿ ವ್ಯವಹಾರವನ್ನು ನಿಯಂತ್ರಿಸಲು ಮುಂದಾಗಿರುವ ಸಿಸಿಬಿ ಪೊಲೀಸರು ದಾಳಿ ವೇಳೆ ಲಕ್ಷಾಂತರ ರೂ. ನಗದು, ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ. ಅಗ್ರಿಮೆಂಟ್‌ಗಳು, ಬ್ಲ್ಯಾಂಕ್ ಚೆಕ್‌ಗಳನ್ನೂ ವಶ ಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಒಟ್ಟು 69 ಲಕ್ಷ ನಗದು, 258 ಚೇಕ್ ಗಳು, 52 ಆನ್ ಡಿಮ್ಯಾಂಡ್ ನೋಟ್ ಗಳು,ಇ ಸ್ಟಾಂಪ್ಗಳು , ಬಾಂಡ್ ಪೇಪರ್ ಗಳು ಮತ್ತು ವಾಹನಗಳನ್ನು ಜಪ್ತಿ ಮಾಡಿರುವ ಬಗ್ಗೆ ತಿಳಿದು ಬಂದಿದೆ. ದಾಳಿಯ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ