ವಧುವಿನ ಅಪಹರಣ ತಡೆದಿದ್ದು ಖಾರದಪುಡಿ ಎಂದರೆ ನಂಬುತ್ತೀರಾ….? ಇಲ್ಲಿದೆ ನೋಡಿ ನಂಬಲಾಗದ ಸ್ಟೋರಿ….!

ಆಂಧ್ರ ಪ್ರದೇಶ :

   ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವಿನ ಅಪಹರಣ ಮಾಡಿದ ವಿಚಿತ್ರ ಘಟನೆ ಆಂಧ್ರಪ್ರದೆಶದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ವಧುವನ್ನು ಅಮಾನವೀಯವಾಗಿ ಎಳೆದಾಡಿರುವುದು ಕಂಡು ಬಂದಿದೆ.

    ವಿವಾಹ ಕಾರ್ಯಕ್ರಮದಲ್ಲಿ ವಧುವಿನ ಕುಟುಂಬದವರು ಆಕೆಯನ್ನು ಸ್ಥಳದಿಂದ ಬಲವಂತವಾಗಿ ಕರೆದೊಯ್ಯಲು ಪ್ರಯತ್ನಿಸಿರುವುದು ಕಂಡು ಬಂದಿದೆ. ಅಪಹರಣವನ್ನು ತಡೆಯಲು ಪ್ರಯತ್ನಿಸುತ್ತಿರುವವರನ್ನು ತಡೆಯಲು ಮೆಣಸಿನ ಪುಡಿಯನ್ನು ಬಳಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವರನ ಸಂಬಂಧಿಕರು ಅಸ್ತವ್ಯಸ್ತರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

   ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ವಧುವನ್ನು ಆಕೆಯ ಕುಟುಂಬಸ್ಥರು ಅಪಹರಿಸುವ ಯತ್ನ ನಡೆದಿದೆ. ಈ ಘರ್ಷಣೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ ವರನ ಕುಟುಂಬಸ್ಥರ ಮೇಲೂ ವಧುವಿನ ಮನೆಯವರು ಮೆಣಸಿನ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.

    ಆಂಧ್ರಪ್ರದೇಶದ ನರಸರಾವ್‌ಪೇಟೆ ಜಿಲ್ಲೆಯ ಕಾಲೇಜೊಂದರಲ್ಲಿ ಪಶುವೈದ್ಯಕೀಯ ವಿಜ್ಞಾನದಲ್ಲಿ ಡಿಪ್ಲೊಮಾ ಓದುತ್ತಿದ್ದಾಗ ಸ್ನೇಹಾ ಮತ್ತು ವೆಂಕಟನಂ ನಡುವೆ ಸ್ನೇಹವಾಗಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ಪ್ರೀತಿಸಿ ಏಪ್ರಿಲ್ 13ರಂದು ವಿಜಯವಾಡದ ಪ್ರಸಿದ್ಧ ದುರ್ಗಾ ದೇವಸ್ಥಾನದಲ್ಲಿ ಅವರು ವಿವಾಹವಾಗಿದ್ದರು.

    ಮದುವೆಯ ನಂತರ ಸ್ನೇಹ ಅವರು ವೆಂಕಟನಂ ಅವರ ಮನೆಗೆ ತೆರಳಿದರು. ವೆಂಕಟನಂ ಅವರ ಕುಟುಂಬ ಸದಸ್ಯರು ಏಪ್ರಿಲ್ 21ರಂದು ವಿವಾಹ ಸಮಾರಂಭವನ್ನು ಆಯೋಜಿಸಲು ನಿರ್ಧರಿಸಿದರು. ಈ ಕಾರ್ಯಕ್ರಮಕ್ಕೆ ಸ್ನೇಹಾ ಅವರ ಕುಟುಂಬದವರಿಗೂ ಮಾಹಿತಿ ನೀಡಿ ಆಹ್ವಾನಿಸಲಾಗಿತ್ತು.

    ಆದರೆ ಸಮಾರಂಭಕ್ಕೆ ಬಂದ ಸ್ನೇಹಾಳ ತಾಯಿ ಮತ್ತು ಇತರ ಸಂಬಂಧಿಕರು (ಪದ್ಮಾವತಿ, ಚರಣ್ ಕುಮಾರ್, ಚಂದು ಮತ್ತು ನಕ್ಕ ಭರತ್) ಒಳಗೆ ನುಗ್ಗಿ ವರನ ಕುಟುಂಬದವರಿಗೆ ಮೆಣಸಿನ ಪುಡಿಯನ್ನು ಎರಚಿದ್ದಾರೆ. ಅವರ ಮಗಳನ್ನು ಅಪಹರಿಸಿ ಕರೆದೊಯ್ಯಲು ಪ್ರಯತ್ನಿಸಿದ್ದಾರೆ.

    ವರ, ಆತನ ಕುಟುಂಬ ಹಾಗೂ ಆತನ ಸ್ನೇಹಿತರು ಇದನ್ನು ವಿರೋಧಿಸಿ ಅಪಹರಣ ಯತ್ನವನ್ನು ವಿಫಲಗೊಳಿಸಿದ್ದಾರೆ. ಘರ್ಷಣೆಯಲ್ಲಿ ವರನ ಸಂಬಂಧಿಕರಲ್ಲೊಬ್ಬರಾದ ವೀರಬಾಬು ಗಂಭೀರವಾಗಿ ಗಾಯಗೊಂಡಿದ್ದು, ರಾಜಮಹೇಂದ್ರವರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

   ಘಟನೆ ಕುರಿತು ಮಾತನಾಡಿದ ಸ್ನೇಹಾ, ‘ನನ್ನ ತಾಯಿ, ನನ್ನ ಸಹೋದರ ಮತ್ತು ಸೋದರಸಂಬಂಧಿ ಬಂದು ನನ್ನನ್ನು ಕಿಡ್ನಾಪ್ ಮಾಡಲು ಯತ್ನಿಸಿ ಅಕ್ಕಪಕ್ಕದವರ ಮೇಲೆ ಮೆಣಸಿನ ಪುಡಿ ಎರಚಿದ್ದಾರೆ’ ಎಂದು ಹೇಳಿದ್ದಾರೆ. ಈ ಘಟನೆ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap