ಮುಂಬೈ
ದೇಶದ ಆರ್ಥಿಕ ಜೀವಾಳವೆಂದೆ ಕರೆಯಲಾಗುವ ಷೇರು ಪೇಟೆ ಇಂದು ಆರಂಭಿಕ ವಹಿವಾಟಿನಿಂದಲೇ ಸೂಚ್ಯಂಕ ನಿರಂತರ ಕುಸಿತ ಕಂಡಿತ್ತು. ಇಂದು ಷೇರು ಪೇಟೆ ಸುಮಾರು 1000ಕ್ಕೂ ಅಧಿಕ ಅಂಶ ಕುಸಿದಿದೆ, 34,000 ಗಡಿಯಲ್ಲಿ ಸೂಚ್ಯಂಕ ಕಂಡು ಬಂದಿದೆ. ಈ ಅನಿರೀಕ್ಷಿತ ಏರಿಳಿತದಿಂದ ಹೂಡಿಕೆದಾರರು ಸರಿ ಸುಮಾರು 4 ಲಕ್ಷ ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ . ಕೆಲವು ದಿನಗಳಿಂದ ಮಾರುಕಟ್ಟೆ ಸ್ಥಿತಿ ಪಾತಾಳಕ್ಕೆ ಕುಸಿದಿತ್ತು. ಆದರೆ, ಬುಧವಾರ ವಹಿವಾಟು ಅಂತ್ಯಕ್ಕೆ ಸುಸ್ಥಿತಿ ಕಾಯ್ದುಕೊಂಡಿತ್ತು.
ಇಂದು ಐದೇ ನಿಮಿಷದಲ್ಲಿ ಬಿಎಸ್ಇ ಪಟ್ಟಿಯಲ್ಲಿರುವ ಅನೇಕ ಕಂಪನಿಗಳ ಮಾರುಕಟ್ಟೆ ಮೌಲ್ಯ ಕುಸಿದಿದ್ದು ಸುಮಾರು 134.38 ಲಕ್ಷ ಕೋಟಿ ರು ಗೆ ಇಳಿದಿದೆ. ಬುಧವಾರದಂದು ಬಿಎಸ್ಇ ಲಿಸ್ಟಿನಲ್ಲಿರುವ ಕಂಪನಿಗಳು ಸುಮಾರು 138,39,750 ಕೋಟಿ ಲಾಭ ಗಳಿಸಿತ್ತು. ಆಗಸ್ಟ್ 30ರಂದು ಅಂತೂ ಸಾರ್ವಕಾಲಿಕ ದಾಖಲೆಯ 1,59,34,696 ಕೋಟಿಯಷ್ಟು ಗಳಿಸಿತ್ತು. ಡಾಲರ್ ವಿರುದ್ಧ ರುಪಾಯಿ ಅಪಮೌಲ್ಯ ಮುಂದುವರೆದಿದ್ದು, ಪ್ರತಿ ಡಾಲರ್ ಗೆ ರುಪಾಯಿ 74.46 ನಷ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ