ಗುಬ್ಬಿ:
ಹೊಸಕೆರೆ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳ ಸಾರ್ವಜನಿಕರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬೇಕಾಗುವಂತಹ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸಕೆರೆಯಲ್ಲಿ ಕಂಪ್ಯೂಟರ್ ಸೆಂಟರ್ ಉಧ್ಘಾಟನೆಯಾಗಿರುವುದು ಬಹಳ ಸಂತಸದ ವಿಷಯ ಎಂದು ಸಮಾಜ ಸೇವಕ ಸದಾನಂದಯ್ಯ ತಿಳಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿಯ ಹೊಸಕೆರೆಯಲ್ಲಿ ನೂತನವಾಗಿ ಪ್ರಾರಂಭವಾದ ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಪ್ರತಿನಿತ್ಯ ನಾಡ ಕಛೇರಿ ಹಾಗೂ ತಾಲ್ಲೂಕು ಕಛೇರಿಯಲ್ಲಿ ದಿನನಿತ್ಯ ಅಲೆಯುವಂತಹ ಪರಿಸ್ಥಿತಿ ಉಂಟಾಗುತ್ತಿತ್ತು. ಆದರೆ ಹೊಸಕೆರಯಲ್ಲಿ ಡಿಜಿಟಲ್ ಸೇವಾ ಕೇಂದ್ರ ಪ್ರಾರಂಭದಿಂದ ಜನರು ಪ್ರತಿನಿತ್ಯ ಪರದಾಡುವಂತಹ ಸ್ಥಿತಿ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.
ಶಿಕ್ಷಕ ಎಸ್.ಎಲ್. ಮಂಜುನಾಥ್ ಮಾತನಾಡಿ, ಡಿಜಿಟಲ್ ಸೇವಾ ಕೇಂದ್ರದಿಂದ ಶಾಲೆಯ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಕಂಪ್ಯೂಟರ್ ತರಬೇತಿ ಪಡೆಯುವುದರಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮುಖಂಡ ಶಿವಣ್ಣ, ಸಿದ್ದರಾಮನಾಯ್ಕ, ಪ್ರಸನ್ನಕುಮಾರ್, ರಂಗನಾಥ್, ಶಿವಶಂಕರನಾಯ್ಕ ಮಂಜುನಾಥ್, ಕೃಷ್ಣಾನಾಯ್ಕ, ವಿದ್ಯಾರ್ಥಿಗಳಾದ ಕಾವೇರಿ, ಸಾವಿತ್ರಮ್ಮ, ಸುಶೀಲಮ್ಮ, ಚಿಂತನಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ