ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿಗೆ ಶಾಸಕ ಸಿ.ಎಂ.ಉದಾಸಿ ಚಾಲನೆ ನೀಡಿದರು.

ಹಾನಗಲ್ಲ :

     ಪ್ರಧಾನಮಂತ್ರಿ ಆವಾಸ ಯೋಜನೆಯಡಿ ತಾಲೂಕಿನಲ್ಲಿ, ಪಕ್ಷಾತೀತವಾಗಿ ಎಲ್ಲ ಜನಾಂಗಗಳ ಅರ್ಹ ಫಲಾನುಭವಿಗಳಿಗೆ 16 ಸಾವಿರಕ್ಕೂ ಅಧಿಕ ಮನೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಿ.ಎಂ.ಉದಾಸಿ ನುಡಿದರು.

    ರವಿವಾರ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು 2022 ರವೇಳೆಗೆ ದೇಶಾದ್ಯಂತ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಯೋಚನೆಯಿದ್ದು, ಕೇಂದ್ರ ಸರಕಾರ ಹೆಚ್ಚು ಹೆಚ್ಚು ಅನುದಾನ ಬಿಡುಗಡೆಗೊಳಿಸುತ್ತಿದೆ. ಸಾರ್ವಜನಿಕರು ಪಕ್ಷ ಬೇಧ ಮರೆತು ಯೋಜನೆಯ ಲಾಬ ಪಡೆದುಕೊಳ್ಳುವಂತೆ ಕರೆ ನೀಡಿದರು.

     ನರೇಗಾ ಯೋಜನೆಯಡಿ ಉದ್ಯೋಗ ನೀಡುವುದರ ಜೊತೆಗೆ ಗ್ರಾಮದ ಅಭಿವೃದ್ಧಿ ಹೆಚ್ಚಿ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು ತಕರಾರು ಮಾಡದೆ ಸಹಕಾರ ನೀಡಿ ಹಣ ಅಪವ್ಯಯವಾಗದಂತೆ ಗುಣಮಟ್ಟದ ಕಾಮಗಾರಿಯಾಗುವಂತೆ ಗಮನಹರಿಸಬೇಕು. ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಅಳವಡಿಸಲಾಗಿದ್ದು, ಅಗತ್ಯಗನುಗುಣವಾಗಿ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದ ಅವರು, ಹಾನಗಲ್ಲ ತಾಲೂಕಿನ ಉತ್ತರ ಭಾಗದ ನೀರಾವರಿ ಯೋಜನೆಯಾದ ಬಾಳಂಬೀಡ ಏತ ನೀರಾವರಿ ಅನುಷ್ಠಾನಗೊಂಡರೆ ಈ ಭಾಗದ ನೂರಾರು ಕೆರೆಗಳಿಗೆ ನೀರು ಹರಿಸಲು ಉಪಯೋಗವಾಗುವುದಲ್ಲದೆ ಅಂತರ್ಜಲ ಹೆಚ್ಚಾಗಲು ಅನುಕೂಲವಾಗಲಿದೆ. ಆದರೆ ರಾಜ್ಯ ಸರಕಾರ ಹಣಕಾಸು ಮುಗ್ಗಟ್ಟು ಅನುಭವಿಸುತ್ತಿರುವುದರಿಂದ ಸರಕಾರದಿಂದ ನಿರೀಕ್ಷೆಯ ಭರವಸೆ ಇಲ್ಲ ಎಂದು ಸಿ.ಎಂ ಉದಾಸಿ ಬೇಸರ ವ್ಯಕ್ತಪಡಿಸಿದರು.

     ಗ್ರಾಪಂ ಅಧ್ಯಕ್ಷೆ ಗಂಗವ್ವ ಜಂಗಿ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಶಿಲಿಂಗಪ್ಪ ತಲ್ಲೂರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಎ.ಎಸ್.ಬಳ್ಳಾರಿ, ಗ್ರಾಪಂ ಉಪಾಧ್ಯಕ್ಷೆ ಕಮಲವ್ವ ಮಣೆಗಾರ, ಸದಸ್ಯರಾದ ಗದಿಗಯ್ಯ ಹಿರೇಮಠ, ಮಮತಾ ದೇಶಪಾಂಡೆ,ಗಂಗಪ್ಪ ಬಿದರಣ್ಣನವರ, ನಾಗಮ್ಮ ಚಕ್ರಸಾಲಿ, ಗಂಗಾಧರ ಬಿದರಣ್ಣನವರ, ಕೆಂಚವ್ವ ವಡ್ಡರ, ಅಕ್ಕಮ್ಮ ಅರಳೇಶ್ವರ, ನಿಂಗಪ್ಪ ಮ್ಯಾಗೇರಿ, ಶಿವಾನಂದ ಬೇವಿನಹಳ್ಳಿ, ಪಿಡಿಒ ಎಚ್.ಜಿ.ಯರೇಸೀಮಿ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link