ಹಾವೇರಿ :
ಜಿಲ್ಲಾ ಪಂಚಾಯತ್ ಸಿಇಓ ಶಿಲ್ಪಾ ನಾಗ್ ಸ್ವಂತ ಕಾರಿನಲ್ಲಿ ಪ್ರಯಾಣಿಸ್ತಿದ್ದ ಕಾರು ಪಲ್ಟಿಯಾಗಿ ಸಿಇಓ ಸೇರಿ ನಾಲ್ವರಿಗೆ ಗಾಯವಾಗಿದೆ.ನಗರದ ಹೊರವಲಯದಲ್ಲಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ಘಟನೆ ನಡೆದಿದ್ದು,ಸಿಇಓ ಶಿಲ್ಪಾ ನಾಗ್, ಸಿಇಓ ಪುತ್ರ ರಿಷಿ 12 ವರ್ಷ, ಅರ್ಚನಾ ಪಿಳ್ಳೆ ಮತ್ತು ವಿಶ್ವನಾಥ ಗಾಯಗೊಂಡವರಾಗಿದ್ದಾರೆ.ದೇವಗಿರಿ ಗ್ರಾಮದ ಬಳಿ ಇರುವ ನಿವಾಸದ ಕಡೆಯಿಂದ ಹಾವೇರಿಗೆ ಬರುತ್ತಿದ್ದ ವೇಳೆ ದುರ್ಘಟನೆ ಜರುಗಿದೆ.ಗಾಯಾಳುಗಳು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಲಾಗಿದೆ .ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಕಂಡು ಬಂದಿದ್ದು, ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








