ಎಲ್ಲಾ ಭಾಷೆ ಕಲಿಕೆ ಅನಿವಾರ್ಯ;ತಿಪ್ಪಾರೆಡ್ಡಿ

ಚಿತ್ರದುರ್ಗ;

        ಇಂದಿನ ದಿನಮಾನದಲ್ಲಿ ಒಂದು ಭಾಷೆ ಕಲಿಯುವುದಕ್ಕಿಂತ ಹಲವಾರು ಬಾಷೆಯನ್ನು ಕಲಿಯುವುದು ಉತ್ತಮ, ಅದರಲ್ಲೂ ಪ್ರಪಂಚದಲ್ಲಿ ಎಲ್ಲಡೆ ಇರುವ ಆಂಗ್ಲ ಭಾಷೆಯನ್ನು ನಮ್ಮ ಮಾತೃ ಭಾಷೆಯಲ್ಲಿ ಕಲಿಯುವುದು ಅನಿವಾರ್ಯವಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

      ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ಪಿ.ಯು.ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವಾಸಕಿರಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

      ಹಿಂದೆ ವಿದೇಶಗಳಿಗೆ ಹೋಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಇತ್ತು ಆದರೆ ಇಂದಿನ ದಿನಮಾನದಲ್ಲಿ ದೇಶಕ್ಕಿಂತ ವಿದೇಶಕ್ಕೆ ಹೋಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಅಲ್ಲಿಗೆ ಹೋಗಬೇಕಾದರೆ ಅಲ್ಲಿನ ಬಾಷೆಯನ್ನು ಕಲಿತಾಗ ಮಾತ್ರ ಕೆಲಸ ಮಾಡಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಭಾಷೆಯ ಮೇಲೆ ಪ್ರಾತಿನಿಧ್ಥ ಸ್ಥಾಪನೆ ಮಾಡಿದಾಗ ಮಾತ್ರ ಸುಲಲಿತವಾಗಿ ಮಾತನಾಡಲು, ಬರೆಯಲು ಸಾಧ್ಯವಾಗುತ್ತದೆ, ಚಿಕ್ಕ ವಯಸ್ಸಿನಲ್ಲಿಯೇ ಕಲಿಯುವ ಕಾರ್ಯ ಮಾಡಿದರೆ ಶೀಘ್ರವಾಗಿ ಕಲಿಯಬಹುದಾಗಿದೆ, ಸರ್ಕಾರ ಈ ಕಾರ್ಯಕ್ರಮವನ್ನು ಸ್ಥಾಪನೆ ಮಾಡುವುದರ ಮೂಲಕ ಉತ್ತಮ ಕಾರ್ಯಮಾಡಿದೆ ಇದರ ಸದುಪಯೋಗ ಮಾಡಿಕೊಳ್ಳುವಂತೆ ಶಾಸಕರು ಕರೆ ನೀಡಿದರು.

       ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಂಗ್ಲ ಭಾಷೆ ಎಂದರೆ ಸ್ವಲ್ಪ ಕಷ್ಟದ ವಿಷಯವಾಗಿದೆ ಇದನ್ನು ಮನಗಂಡು ಸರ್ಕಾರ ರಜೆಯ ದಿನದಲ್ಲಿ ಇಂತಹ ಶಿಬಿರವನ್ನು ಏರ್ಪಡಿಸಿದೆ ಆದರೆ ಇದನ್ನು ಬರೀ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ಮಾತ್ರವೇ ಹಮ್ಮಿಕೊಂಡಿರುವುದು ಸರಿಯಲ್ಲ ಎಲ್ಲಾ ವಿದ್ಯಾರ್ಥಿಗಳಿಗೂ ಸಹಾ ಇದರ ಲಾಭ ಸಿಗುವಂತಾಗಬೇಕಿದೆ ಎಂದ ತಿಪ್ಪಾರೆಡ್ಡಿ ಭಾರತ ದೇಶದ ಮಕ್ಕಳು ಬುದ್ದಿವಂತರು ಎಂದು ಎಲ್ಲೆಡೆ ಗೊತ್ತಾಗಿದೆ ಇದರಿಂದ ಇವರಿಗೆ ಬೇಡಿಕೆ ಹೆಚ್ಚಾಗಿದೆ ಅಲ್ಲದೆ ದೇಶದ ಹಲವೆಡೆ ಉನ್ನತ ಸ್ಥಾನಗಳಲ್ಲಿ ದೇಶದ ಮಕ್ಕಳು ಕುಳಿತ್ತಿದ್ದಾರೆ ಇದರಿಂದ ನಮ್ಮ ದೇಶದ ಮಕ್ಕಳ ಮೇಲೆ ಬೇರೆ ದೇಶದವರು ಕಣ್ಣು ಹಾಕಿದ್ದಾರೆ ಎಂದರು.

      ದೇಶದ ಹಲವೆಡೆ ವಿವಿಧ ರೀತಿಯ ಭಾಷೆಗಳನ್ನು ಜನತೆ ಆಡುತ್ತಾರೆ, ಅಲ್ಲದೆ ಇಂದಿನ ದಿನದಲ್ಲಿ ವ್ಯವಹಾರಿಕವಾಗಲೀ, ಕೆಲಸಕ್ಕಾಗಲಿ ಅಥವಾ ಬೇರೆ ಕೆಲಸಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ ಈ ಸಮಯದಲ್ಲಿ ಅಲ್ಲಿನ ಭಾಷೆ ಬಾರದಿದ್ದರೆ ಜೀವನ ನಡೆಸುವುದು ಕಷ್ಟವಾಗಬಹುದಾಗಿದೆ.ಇದರಿಂದ ನಮ್ಮ ಮಾತೃಭಾಷೆಯನ್ನು ಮಾತ್ರವೇ ಕಲಿಯದೇ ಬೇರೆ ಬಾಷೆಯನ್ನು ಕಲಿಯಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ, ನಿಮ್ಮಲ್ಲಿಯೂ ಸಹಾ ಮುಂದೆ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಭಾಷೆಯ ತೊಡಕಾಗಬಾರದು ಇದರಿಂದ ಬೇರೆ ಭಾಷೆಯನ್ನು ಕಲಿಯಬೇಕಿದೆ ಎಂದು ಶಾಸಕರು ತಿಳಿಸಿದರು.

     ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಶೋಭಾ ಮಾತನಾಡಿ ಮಕ್ಕಳಿಗೆ ಆಂಗ್ಲ ಭಾಷೆ ಕಠಿಣ ಎಂದು ತಿಳಿದು ಸರ್ಕಾರ ಅದರ ಬಗ್ಗೆ ತಿಳಿಯುವು ಸಲುವಾಗಿ ರಜೆಯ ದಿನದಲ್ಲಿ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿದೆ ಇದರ ಸದುಪಯೋಗ ಪಡೆಯಿರಿ, ದಿನದಲ್ಲಿ ಸುಮಾರು 3 ರಿಂದ 4 ಗಂಟೆಗಳ ಕಾಲ ಭೋಧನೆ ನಡೆಯಲಿದೆ ಅದರ ಬಗ್ಗೆ ಗಮನ ನೀಡಿ ಸಮಸ್ಯೆಗಳು ಇದ್ದರೆ ಶಿಕ್ಷಕರಲ್ಲಿ ಕೇಳುವುದರ ಮೂಲಕ ಬಗೆಹರಿಸಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ವೆಂಕಟೇಶ್, ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap