ಬೆಂಗಳೂರು
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣಾ ಪೂರ್ವ ಸಿದ್ದತಾ ಕಾರ್ಯಗಳು ಭರದಿಂದ ಸಾಗಿದ್ದು ಇದೇ ಮೊದಲ ಬಾರಿಗೆ ಎಲ್ಲಾ ಮತಗಟ್ಟೆಗಳಲ್ಲಿ ಆಧುನಿಕ ವಿವಿ ಪ್ಯಾಟ್ನ್ನು ಕಡ್ಡಾಯವಾಗಿ ಅಳವಡಿಸಲು ಚುನಾವಣಾ ಆಯೋಗ ಮುಂದಾಗಿದೆ.
ದೇಶದೆಲ್ಲೆಡೆ, ಇವಿಎಂ ಮೇಲೆ ಸಂಶಯ ವ್ಯಕ್ತಪಡಿಸಿ ಆರೋಪಿಸಿದ್ದಾರೆ.ಆದರೆ, ಚುನಾವಣಾ ಪಾರದರ್ಶಕವಾಗಿ ನಡೆಸಲು ಕೇಂದ್ರ ಚುನಾವಣೆ ಆಯೋಗ ಬದ್ಧವಾಗಿದೆ.ಈ ಬಾರಿ, ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳ ಪ್ರಥಮ ಹಂತದ ತಪಾಸಣೆ(ಎಫ್ಎಲ್ಸಿ) ಪ್ರಾರಂಭಿಸಲಾಗಿದ್ದು, ಅನುಮಾನಗಳಿದ್ದಲ್ಲೇ, ಜನಪ್ರತಿನಿಧಿಗಳು ಅಧಿಕೃತ ಗುರುತಿನ ಚೀಟಿಯೊಂದಿಗೆ, ಕಂದಾಯ ಭವನದ ಪರಿಶೀಲನ ಕೊಠಡಿಗೆ ಭೇಟಿ ನೀಡಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳವಾರದಿಂದ ಬಿಇಎಲ್ ತಾಂತ್ರಿಕ ಮೂವತ್ತಕ್ಕೂ ಅಧಿಕ ಸಿಬ್ಬಂದಿ ಸಹಯೋಗದೊಂದಿಗೆ ಎಫ್ಎಫ್ ಸಿ ತಪಾಸಣೆ ನಡೆಯುತ್ತಿದೆ. ಬ್ಯಾಲೆಟ್ ಯೂನಿಟ್-5225, ಕಂಟ್ರೋಲ್ ಯುನಿಟ್-3,985 ಹಾಗೂ ವಿವಿ ಪ್ಯಾಟ್-4,276 ಅಳವಡಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 32,00942 ಮತದಾರರಿದ್ದು, ಪುರುಷರು – 16,5134 , ಮಹಿಳೆಯರು-15,05808 ಇದ್ದಾರೆ.ಅದೇ ರೀತಿ, ಮತಗಟ್ಟೆಗಳ ಪುನರ್ ವಿಂಗಡಣೆ ನಂತರ ಸದ್ಯ 2,997 ಮತಗಟ್ಟೆಗಳಿವೆ.ಆದರೆ, ಕೆಲ ಮತದಾರರ ಹೆಸರು ಕೈಬಿಟ್ಟಿದ್ದರೆ, ನೋಂದಾಯಿಸಿಕೊಳ್ಳಬಹುದು ಎಂದು ವಿವರಿಸಿದರು.
ಮತದಾರರ ಗುರುತಿನ ಚೀಟಿ ಹೊಂದಿದ ಮಾತ್ರಕ್ಕೆ ನೋಂದಾಯಿತ ಮತದಾರರಾಗುವುದಿಲ್ಲ. ಸಂಬಂಧಿಸಿದ ಮತದಾರರು, ಹೆಸರು ಪಟ್ಟಿಯಲ್ಲಿದ್ದಿಯೇ, ಇಲ್ಲವೂ ಎನ್ನುವುದನ್ನು ನೋಡಬೇಕು.ಇನ್ನೂ, ಹೊಸದಾಗಿ ಮತದಾರರಾಗಿ ನೋಂದಣಿಯಾಗಲು, ನಮೂನೆ-6ರಲ್ಲಿ ಭರ್ತಿ ಮಾಡಿ, ಅದರೊಂದಿಗೆ ಒಂದು ಭಾವಚಿತ್ರ, ವಿಳಾಸ ದೃಢೀಕರಣ ಹಾಗೂ ಸಹಿ ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
