ಬೆಂಗಳೂರು :
‘ಕೆಜಿಎಫ್’ ಫ್ರ್ಯಾಂಚೈಸ್ ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾದ ಕೆಜಿಎಫ್ ಸಿನಿಮಾ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಈ ಕೆಜಿಎಫ್‌ನ ಮುಂದುವರಿದ ಭಾಗ ಅಂದರೆ ಬಹು ದಿನಗಳಿಂದ ಅಭಿಮಾನಿಗಳಲ್ಲಿ ಪ್ರಶ್ನೆಯಾಗಿದ್ದ ‘ಕೆಜಿಎಫ್3’ ಬರುವುದು ಕನ್ಫರ್ಮ್ ಆಗಿದೆ.
ಇತ್ತೀಚೆಗೆಷ್ಟೇ ನಟ ಯಶ್ ಅವರ ಮುಂದಿನ ಸಿನಿಮಾ ‘ಯಶ್19’ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಯಶ್ ಅವರ 19 ನೇ ಚಿತ್ರದ ಶೀರ್ಷಿಕೆಯನ್ನು ಈ ಡಿಸೆಂಬರ್ 8 ರಂದು ಶುಕ್ರವಾರ ಬೆಳಗ್ಗೆ 09:55ಕ್ಕೆ ಅನಾವರಣ ಮಾಡಲಾಗುವುದು. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಸಿನಿಮಾ ಬಗ್ಗೆ ಸಕತ್ ಹೋಪ್ ಇದೆ. ಇದರ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ‘ಕೆಜಿಎಫ್3’ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ.
ಪ್ರಶಾಂತ್ ನೀಲ್- ಯಶ್ ಜೋಡಿಯ ‘ಕೆಜಿಎಫ್’ ಸಾಮ್ರಾಜ್ಯ 2019 ರಲ್ಲಿ ಬಿಡುಗಡೆಯಾಗಿದ್ದ ಪ್ರಶಾಂತ್ ನೀಲ್ ಮತ್ತು ಯಶ್ ಜೋಡಿಯ ಕೆಜಿಎಫ್ ಸಿನಿಮಾ ದೇಶದಲ್ಲಿ ಸಕತ್ ಹೈಪ್ ಕ್ರಿಯೇಟ್ ಮಾಡಿತ್ತು. ನಟ ಯಶ್ ಅವರನ್ನು ಪ್ಯಾನ್ ಇಂಡಿಯನ್ ಸಿನಿಮಾ ಮಾಡಿದ್ದು ಅಲ್ಲದೇ, ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸಿತ್ತು. ಇದರ ಬಳಿಕ ಬಂದ ಕೆಜಿಎಫ್ 2ಗಾಗಿ ಸಿನಿಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದರು.
ಕೆಜಿಎಫ್ ಬಿಡುಗಡೆಯಾಗಿ 3 ವರ್ಷಗಳ ನಂತರ, ಕೆಜಿಎಫ್ 2 ಬಿಡುಗಡೆಯಾಯಿತು. ದೇಶದಾದ್ಯಂತ ಬ್ಲಾಕ್‌ಬಸ್ಟರ್ ಆಯಿತು . ಕೊರೊನಾದಿಂದ ಕಂಗೆಟ್ಟಿದ್ದ ಚಿತ್ರಮಂದಿರಗಳಿಗೆ ಹೊಸ ಭರವಸೆ ಜೊತೆಗೆ ಆದಾಯ ತಂದುಕೊಟ್ಟಿತ್ತು. ಕೆಜಿಎಫ್ ಸೀಕ್ವೆಲ್ ಕೆಜಿಎಫ್ ಅಧ್ಯಾಯ 3 ಬರುವ ಸೂಚನೆ ನೀಡಿತ್ತು.
ಯಶ್ ನಟನೆಯ ‘ಕೆಜಿಎಫ್3’ ಬರುವುದು ಕನ್ಫರ್ಮ್! ಸಲಾರ್ ಸಿನಿಮಾ ಬಿಡುಗಡೆಯ ಮೊದಲು ಪಿಂಕ್ವಿಲ್ಲಾ ವೆಬ್‌ಸೈಟ್‌ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನ ನೀಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. “ಕೆಜಿಎಫ್ 3 ಬರಲಿದೆ. ಆ ಸಿನಿಮಾಗೆ ನಾನು ನಿರ್ದೇಶಕನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಯಶ್ ಇಲ್ಲದೆ ಕೆಜಿಎಫ್ ಇಲ್ಲ.
ಈ ಬಗ್ಗೆ ಚಲನಚಿತ್ರ ನಿರ್ಮಾಪಕರು ಶೀಘ್ರವೇ ತಿಳಿಸಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ. ” ಕೆಜಿಎಫ್ 3 ಬರುವುದು ಕನ್ಫರ್ಮ್. ಹಾಗಾಗಿಯೇ ನಾವು ಅದನ್ನು ಘೋಷಿಸಲಿಲ್ಲ. ನಮ್ಮ ಬಳಿ ಈಗಾಗಲೇ ಸ್ಕ್ರಿಪ್ಟ್ ಇದೆ. ಘೋಷಣೆ ಮಾಡುವ ಮುನ್ನವೇ ಸ್ಕ್ರಿಪ್ಟ್ ಬಗ್ಗೆ ನಿರ್ಧರಿಸಿದ್ದೆವು. ಯಶ್ ತುಂಬಾ ಜವಾಬ್ದಾರಿಯುತ ವ್ಯಕ್ತಿ. ವಾಣಿಜ್ಯ ಕಾರಣಗಳಿಗಾಗಿ ವಿಷಯಗಳನ್ನು ಹೊರಹಾಕುವುದಿಲ್ಲ.
ಕೆಜಿಎಫ್ 2 ರ ಕೊನೆಯಲ್ಲಿ ಅಧಿಕೃತ ಘೋಷಣೆ ಮಾಡುವ ಮೊದಲು ನಾವು ಕಾಗದದ ಮೇಲೆ ಈ ವಿಷಯಗಳನ್ನು ಹೊಂದಿರುವುದು ಖಚಿತವಾಗಿತ್ತು” ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಹಬ್ಬ! ಈಗಾಗಲೇ ಯಶ್ 19 ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಶುಕ್ರವಾರ ಸಿನಿಮಾ ಹೆಸರು ಕೂಡ ಘೋಷಣೆಯಾಗಲಿದೆ.
ಇದರ ಜೊತೆಗೆ ಬ್ಲಾಕ್ ಬ್ಲಸ್ಟರ್ ಕೆಜಿಎಫ್ ಸರಣಿಯಾದ ಕೆಜಿಎಫ್ 3 ಬರುವುದು ಕೂಡ ಪಕ್ಕ ಎಂದು ನಿರ್ದೇಶಕರೇ ಹೇಳಿರುವುದು ರಾಕಿಂಗ್ ಸ್ಟಾರ್ ಫ್ಯಾನ್ಸ್‌ಗೆ ಹಬ್ಬವೇ ಸರಿ. ಆದರೆ, ಕೆಜಿಎಫ್ 2 ಬರಲು ಮೂರು ವರ್ಷ ತೆಗೆದುಕೊಂಡಿತ್ತು. ಇನ್ನು, ಕೆಜಿಎಫ್ 3 ಯಾವಾಗ ಬರಲಿದೆಯೋ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ