6 ಸಾವಿರ ಸ್ಥಳಗಳಲ್ಲಿ ಉಚಿತ ವೈ-ಫೈ..!

ಬೆಂಗಳೂರು:

      ಬೆಂಗಳೂರಿನ ಆರು ಸಾವಿರ ಸ್ಥಳಗಳಲ್ಲಿ ಬಿಬಿಎಂಪಿ ಉಚಿತ ವೈ-ಫೈ ವ್ಯವಸ್ಥೆ ಮಾಡುತ್ತಿದೆ. ಇನ್ನು ಕೇವಲ ಒಂದು ತಿಂಗಳಲ್ಲಿ ವೈ-ಫೈ ಅಳವಡಿಸಲಾಗುತ್ತದೆ.

       ಇನ್ನು ಒಂದೇ ತಿಂಗಳಲ್ಲಿ ಈ ಜಾಗಗಳಲ್ಲಿ ಉಚಿತ ಇಂಟರ್ನೆಟ್‌ ದೊರೆಯುವ ನಿರೀಕ್ಷೆ ಇದೆ. ಜನರು ಹೆಚ್ಚು ಹೊತ್ತು ನಿಲ್ಲುವ ಸ್ಥಳಗಳಲ್ಲಿ ವೈಫೈ ಸೇವೆಯನ್ನು ನೀಡಲಾಗುತ್ತದೆ.  ಜನರು ಸಾರ್ವಜನಿಕ ಸ್ಥಳಗಳಲ್ಲಿದ್ದಾಗ ಅಂತರ್ಜಾಲ ಬಳಸಲು ಅನುಕೂಲವಾಗುವಂತೆ ಬಿಬಿಎಂಪಿಯು ಉಚಿತ ವೈಫೈ ಯೋಜನೆ ರೂಪಿಸಿದೆ. 

      ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ. ಇದಕ್ಕಾಗಿ ನಾಲ್ಕು ಕಂಪನಿಗಳ ಜತೆ ಮಾತುಕತೆ ನಡೆದಿದ್ದು, ನಿರಂತರ ವೈಫೈ ಸೇವೆ ನೀಡುವುದಾಗಿ ಒಪ್ಪಿಕೊಂಡಿವೆ. 

30 ನಿಮಿಷ ಮಾತ್ರ ಉಚಿತ

      ವೈಫೈ ಸೇವೆ ಉಚಿತವಾದರೂ ಮೊದಲ 30 ನಿಮಿಷಗಳು ಮಾತ್ರ ಉಚಿತವಾಗಿರುತ್ತದೆ. ಬಳಿಕ ಶುಲ್ಕ ಪಾವತಿಸಿ ಬಳಕೆ ಮಾಡಬೇಕಾಗುತ್ತದೆ. 

60 ಕಡೆ ವೈ-ಫೈ ಬಾಕ್ಸ್ :

      ನಗರದಲ್ಲಿ 60 ಕಡೆಗಳಲ್ಲಿ ವೈ-ಫೈ ಬಾಕ್ಸ್ ಅಳವಡಿಸಲಾಗುತ್ತದೆ. ವೈಫೈ ಸೇವೆ ನೀಡಲು 2 ಚದರಡಿ ಜಾಗದಲ್ಲಿ ವೈಫೈ ಬಾಕ್ಸ್ ಅಳವಡಿಸಲಾಗುತ್ತದೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link