ಚೇಳೂರು
ಶ್ರೀದೃಷ್ಟಶ್ವೇರಸ್ವಾಮಿ ದೇವಾಲಯದ ಆವರಣದಲ್ಲಿ ಇರುವ ಬನ್ನಿವೃಕ್ಷದ ಸ್ಥಳಕ್ಕೆ ಪಟ್ಟಕ್ಕೆ ಕುಳಿತಿದ್ದ ಮೆರವಣಿಗೆಯ ದೇವರಮೂರ್ತಿಗಳ ಉತ್ಸವದೊಂದಿಗೆ ಗ್ರಾಮಸ್ಥರು ಬಂದು ಸಂಪ್ರದಾಯದಂತೆ ಬನ್ನಿವೃಕ್ಷದ ಸುತ್ತ ಬಾಳೆ ಗಿಡವನ್ನು ನೆಟ್ಟು ಅದರ ಸಮೇತ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಬನ್ನಿ ವೃಕ್ಷಕ್ಕೆ ಬಾಣದಿಂದ ಒಡೆದು, ಬಾಳೆ ಗಿಡವನ್ನು ಕಡಿದು, ಬನ್ನಿವೃಕ್ಷದ ಎಲೆಗಳನ್ನು ಗ್ರಾಮಸ್ಥರು ಪ್ರಸಾದ ರೂಪದೊಂದಿಗೆ ತಮ್ಮ ಮನೆಗಳಿಗೆ ತೆಗೆದು ಕೊಂಡು ಹೋದರು.ಚೇಳೂರು
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಿ.ಎಂ.ಹಿತೇಶ್, ಸಿ.ಬಿ.ಜಗನಾಥ್, ರಾಜಣ್ಣ ಸಿ.ಟಿ., ಕಾಂತರಾಜ್ರಾವ್, ದೊಡ್ಡಯ್ಯ, ಸಿ.ಎಸ್.ಶೇಷಗಿರಿ, ಸಿ.ಎನ್.ಶಿವಕುಮಾರ್, ಫಾಲಾಕ್ಷಯ್ಯ, ನಟರಾಜು, ಜಯಣ್ಣ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








