ದಾವಣಗೆರೆ :
ಜಿಲ್ಲೆಯಲ್ಲಿ ಕಳೆದ ಬುಧವಾರ ರಾತ್ರಿ 43.80 ಎಂ.ಎಂ. ಮಳೆಯಾಗಿದ್ದು, ಬೆಳೆ ನಷ್ಟ, ಪಕ್ಕಾ-ಕಚ್ಚಾ ಮನೆಗಳ ಹಾನಿ ಸೇರಿದಂತೆ ಅಂದಾಜು 5.97 ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 2 ಕಚ್ಚಾ ಮನೆಗಳು ಪೂರ್ಣ ಹಾನಿಯಾಗಿದ್ದು ಅಂದಾಜು ರೂ. 40 ಸಾವಿರ ಹಾನಿ ಮತ್ತು 17 ಕಚ್ಚಾ ಮನೆಗಳು ಬಾಗಶಃ ಹಾನಿಯಾಗಿದ್ದು ಇದರ ಅಂದಾಜು ಮೊತ್ತ ರೂ. 1.35 ಲಕ್ಷ ಆಗಿದೆ. 80 ಮನೆಗಳಿಗೆ ನೀರು ನುಗ್ಗಿ ದಿನಬಳಕೆ ವಸ್ತು ಬಟ್ಟೆ ಹಾನಿಯಾಗಿದ್ದು ಅಂದಾಜು 3.04 ಲಕ್ಷ ಹಾನಿಯಾಗಿದೆ. ಪೊಲೀಸ್ ವಸತಿ ಗೃಹದ ಕಾಂಪೌಂಡ್ ಹಾನಿಯಾಗಿದ್ದು ಅಂದಾಜು 10 ಲಕ್ಷ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಗಂಡು ಮಕ್ಕಳ ವಸತಿ ಗೃಹ ಹಾನಿಯಾಗಿದ್ದು ಅಂದಾಜು 10 ಲಕ್ಷ ನಷ್ಟವಾಗಿದೆ. ಎಪಿಎಂಸಿ ಹತ್ತಿರ ರಸ್ತೆ ಮತ್ತು ಸೇತುವೆ ಹಾನಿಯಾಗಿದ್ದು ಅಂದಾಜು 10 ಲಕ್ಷ ಹಾನಿ ಸಂಭವಿಸಿದೆ.
ಹರಿಹರ ತಾಲ್ಲೂಕಿನಲ್ಲಿ ಕಚ್ಚಾ ಮನೆ, ಪಕ್ಕಾ ಮನೆ ಬೆಳೆ ಹಾನಿ ಸೇರಿದಂತೆ ಒಟ್ಟು ಅಂದಾಜು 2,74,230-00 ಹಾನಿಯಾಗಿದೆ. ಹೊನ್ನಾಳಿಯಲ್ಲಿ ಅಂದಾಜು 31,200-00, ಚನ್ನಗಿರಿ 10,400-00, ಹರಪನಹಳ್ಳಿ 10,400-00, ಜಗಳೂರು ತಾಲ್ಲೂಕಿನಲ್ಲಿ 41,600-00 ನಷ್ಟ ಸಂಭವಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಮಳೆ ಹಾನಿ, ಬೆಳೆ ಹಾನಿ, ಸಾರ್ವಜನಿಕ ಆಸ್ತಿ ಹಾನಿ ಹಾಗೂ ಮೂಲಭೂತ ಸೌಕರ್ಯ ಹಾನಿ ಸೇರಿ ಒಟ್ಟಾರೆ ರೂ. 34,01,230-00 ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
