ದಾವಣಗೆರೆ :
ಕಳೆದ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಪಿ.ಬಿ. ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ ಆವರಣದ ಕಾಂಪೌಂಡ್ ಮಳೆ ನೀರಿಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಹೈಸ್ಕೂಲ್ ಮೈದಾನದಿಂದ ಬಂದ ನೀರು ಚರಂಡಿಗೆ ಹೋಗದೆ ಬೀರಲಿಂಗೇಶ್ವರ ದೇವಸ್ಥಾನದ ಕಾಂಪೌಂಡ್ ಮುಖಾಂತರ ಹರಿದು ಬಂದ ನೀರಿನ ರಭಸಕ್ಕೆ ಕಾಂಪೌಂಡ್ ಬಿದ್ದು ಹೋಗಿದೆ. ಸುಮಾರು 10 ಲಕ್ಷದಷ್ಟು ಹಾನಿಯಾಗಿದೆ. ಅಂದಾಜು 500 ಮೀಟರ್ಗಳಷ್ಟು ಉದ್ದದ ಸಿಮೆಂಟ್ನ ಕಾಂಪೌಂಡ್ ಮಳೆ ನೀರಿಗೆ ಹಾನಿಯಾಗಿದೆ ಎಂದು ಕಾರ್ಯದರ್ಶಿ ಜೆ.ಕೆ. ಕೊಟ್ರಬಸಪ್ಪ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








