ಸಂಕುಚಿತತೆಯತ್ತ ಟ್ರಂಪ್ ಸರ್ಕಾರ

ವಾಷಿಂಗ್ಟನ್:
        ಅಮೇರಿಕಾ ತನ್ನ ವಿದೇಶಿ ನೀತಿಗಳಿಂದ ತನ್ನ ವಿಶ್ವ ಬಾಂಧವ್ಯವನ್ನು ಕಡಿದು ಕೊಳ್ಲುವ ಹಂತಕ್ಕೆ ಬಂದು ನಿಂತಿದೆ .ಎಲ್ಲಾ ದೇಶಗಳ ಮೇಲೆ ನಿರ್ಭಂಧ ಹೇರುವ ಮೂಲಕ ತನ್ನ ವಿದೇಶಿ ವಹಿವಾಟನ್ನು ಸಂಕುಚಿತ ಗೊಳಿಸಿಕೊಂಡಿದೆ ಮತ್ತು ಶೀತಲ ಸಮರ ಸಂದರ್ಭದಲ್ಲಿ ರಷ್ಯಾ ಜೊತೆ ಮಾಡಿಕೊಂಡಿದ್ದ ಮಧ್ಯಂತರ ಶ್ರೇಣಿಯ ಪರಮಾಣು ಪಡೆ(ಐಎನ್ಎಫ್) ಒಪ್ಪಂದದಿಂದ ಅಮೆರಿಕ ಹೊರಬರಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ ಎಂದು ತಿಳಿಸಲಾಗಿದೆ.
       ರಷ್ಯಾ ಒಪ್ಪಂದವನ್ನು ಮುರಿದಿದೆ ಎಂದು ಅಮೆರಿಕಾ ಆರೋಪಿಸಿದೆ.ನಾವು ಒಪ್ಪಂದವನ್ನು ಇಲ್ಲಿಗೇ ಮುರಿಯಲಿದ್ದು ಇದರಿಂದ ಹೊರಬರಲಿದ್ದೇವೆ, ಅದನ್ನು ಮುಂದುವರಿಸುವುದಿಲ್ಲ ಎಂದು ಟ್ರಂಪ್ ನಿನ್ನೆ ನೆವಾಡಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಅಮೆರಿಕಾ-ರಷ್ಯಾ ನಡುವಿನ ಮೂರು ದಶಕಗಳ ಒಪ್ಪಂದ ಇದಾಗಿದೆ. ನಾವು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link