ನವದೆಹಲಿ
ದೇಶದ ಪ್ರಜೆಗಳಿಗೆ ನವರಾತ್ರಿ ಆದಾಗಿನಿಂದ ದರ ಇಳಿಕೆಯ ಸಿಹಿ ಸುದ್ದಿ ನೀಡುತ್ತಿರುವ ಕೇಂದ್ರ ಸರ್ಕಾರ ಇಂದೂ ಸಹ ದರ ಇಳಿಕೆ ಮಾಡಿದೆ ಇದು ಸತತ ನಾಲ್ಕನೇ ಬಾರಿಗೆ ಮಾಡಿದ ಇಳಿಕೆಯಾಗಿದೆ .
ಇಂದು ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್‌ಗೆ 25 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 17 ಪೈಸೆಯಷ್ಟು ಕಡಿಮೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ 1.09 ರುಪಾಯಿ ಹಾಗೂ ಡೀಸೆಲ್ ಬೆಲೆ 50 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಬೆಲೆ ಪೆಟ್ರೋಲ್ ದರ 82.44 ರೂ. ಮತ್ತು ಡೀಸೆಲ್ ದರ 75.63 ರೂ.ಗಳಷ್ಟಿದೆ. ಶನಿವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 39 ಪೈಸೆ ಮತ್ತು ಡೀಸೆಲ್ 12 ಪೈಸೆ ಇಳಿಕೆ ಕಂಡಿತ್ತು. ಮತ್ತು ತುಮಕೂರಿನಲ್ಲಿ ಪೆಟ್ರೋಲ್ 82.74ರೂ ಇದೆ ನಂತರ ಡೀಸಲ್ 75.90ರೂ ಇದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
