ಬೆಂಗಳೂರು:
ಕರ್ನಾಟಕ ರಾಜ್ಯ ರೆಡ್‍ಕ್ರಾಸ್ ಘಟಕಕ್ಕೆ ಬೆಂಗಳೂರು ಜಿಲ್ಲಾ ರೋಟರಿ ಸೌತ್ ಕ್ಲಬ್ ವತಿಯಿಂದ 60 ಲಕ್ಷ ರೂ. ಮೌಲ್ಯದ ರಕ್ತದಾನ ವಾಹನವನ್ನು ಕೊಡುಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದರು.
4 ಮಂದಿ ರಕ್ತದಾನಿಗಳು ಒಮ್ಮೆಗೆ ರಕ್ತದಾನ ಮಾಡುವಂತಹ ಸುವ್ಯವಸ್ಥಿತ ನಾಲ್ಕು ಹಾಸಿಗೆಗಳನ್ನು ಹೊಂದಿರುವ ಈ ವಾಹನವನ್ನು ಬೆಂಗಳೂರಿನಲ್ಲಿ ಕ್ಲಬ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ರೆಡ್‍ಕ್ರಾಸ್ ಸಭಾಪತಿಗಳಾದ ಎಸ್.ನಾಗಣ್ಣ ಅವರು ಸುಸಜ್ಜಿತ ಬಸ್‍ನ ಚಿತ್ರದ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಪದಾಧಿಕಾರಿಗಳು ರೆಡ್‍ಕ್ರಾಸ್ ಸಂಸ್ಥೆಯು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಇವರ ಕಾರ್ಯ ಸಾಧನೆಗೆ ಅನುಕೂಲವಾಗಲೆಂದು ಈ ವಾಹನ ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೆಡ್‍ಕ್ರಾಸ್ ಸಭಾಪತಿಗಳಾದ ಎಸ್.ನಾಗಣ್ಣ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ರೆಡ್‍ಕ್ರಾಸ್ ಸಂಸ್ಥೆಗೆ ಸಹಾಯ ಮಾಡಲು ಹಲವಾರು ದಾನಿಗಳು ಮುಂದೆ ಬಂದಿದ್ದಾರೆ. ಬೆಂಗಳೂರು ಜಿಲ್ಲಾ ರೋಟರಿ ಸಂಸ್ಥೆಯವರು ರಕ್ತದಾನಿಗಳ ಅನುಕೂಲಕ್ಕಾಗಿ ವಾಹನ ನೀಡುತ್ತಿರುವುದು ಅತ್ಯಂತ ಹರ್ಷದಾಯಕ ಎಂದು ಹೇಳಿ ಸಂಸ್ಥೆಯ ಪದಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ