ಸದನಕ್ಕೆ ಹಾಜರಾದ ಜಾರಕಿಹೊಳಿ ಅಂಡ್ ಟೀಮ್…!!!

0
54

ಬೆಂಗಳೂರು 

       ರಾಜ್ಯ ರಾಜಕೀಯದಲ್ಲಿ ತೀವ್ರವಾಗಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಅತೃಪ್ತತೆ ಸದ್ಯಕ್ಕೆ ಹತೋಟಿಗೆ ಬಂದಿದೆ, ಕಾಂಗ್ರೇಸ್  ಪಾಳೆಯದ ನಾಲ್ಕು ಮಂದಿ ಅತೃಪ್ತರು ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ ಕಲಾಪಕ್ಕೆ ಇಂದು ಹಾಜರಾಗಿದ್ದಾರೆ.

       ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಕೆಆರ್ ಪೇಟೆ ಶಾಸಕ ನಾರಾಯಣ ಗೌಡ, ಶಾಸಕ ಉಮೇಶ್ ಜಾದವ್, ಶಾಸಕ ಉಮೇಶ್ ಕುಮಟಳ್ಳಿ ಇಂದಿನ ಕಲಾಪಕ್ಕೆ ಹಾಜರಾಗಿದ್ದಾರೆ. 

       ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮುಂಬೈಗೆ ಹೋಗಿದ್ದು ಸ್ವಂತ ಕೆಲಸದ ಮೇಲೆಯೇ ಹೊರತು ಯಾವ ಆಪರೇಷನ್ ಕಮಲದಿಂದಲ್ಲೂ ಅಲ್ಲ ನನಗೆ ಪಕ್ಷದ ಜೊತೆ ಅಸಮಾಧಾನವಿದೆ  ಆದ್ದರಿಂದ ಕೆಲವೊಂದು ವಿಚಾರಗಳನ್ನು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here