ಬೆಂಗಳೂರು :
ರಾಜ್ಯದಿಂದ ಯಾರಾದರೂ ಮಹಿಳೆಯರು ಶಬರಿಮಲೆಗೆ ಹೋಗಬೇಕು ಎಂದರೆ ವ್ಯವಸ್ಥೆ ಮಾಡುತ್ತೇವೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಮಹಿಳೆಯರು ಶಬರಿಮಲೆಗೆ ಹೋಗಬೇಕು ಎಂದರೆ ವ್ಯವಸ್ಥೆ ಮಾಡುತ್ತೇವೆ. ಆದರೆ ಅಲ್ಲಿಗೆ ಪೋರ್ಸ್ ತೆಗೆದುಕೊಂಡು ಹೋಗಿ ಸೆಕ್ಯೂರಿಟಿ ಕೊಡಲು ಆಗಲ್ಲ ಎಂದರು.
ನನಗೆ ಕಾಂಗ್ರೆಸ್ ಬೆಂಬಲ ಇದ್ದರೂ ಸಹ ದೈವದತ್ತವಾಗಿ ಅಧಿಕಾರಕ್ಕೆ ಬಂದಿದ್ದೇನೆ. ನಾನು ಎಷ್ಟು ದಿನ ಇರಬೇಕು ಎನ್ನುವುದು ದೇವರು ಬರೆದಿದ್ದಾನೆ. ಸರ್ಕಾರ ಐದು ವರ್ಷ ಇದ್ದೇ ಇರುತ್ತದೆ. ಸಿಎಂ ಸ್ಥಾನ ಯಾರಿಗೂ ಶಾಶ್ವತವಲ್ಲ. ಇಂದು ನಾನು, ನಾಳೆ ಇನ್ನೊಬ್ಬರು ನಾಡಿದ್ದು, ಮತ್ತೊಬ್ಬರು ಬರಬಹುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ