ಕೊರಟಗೆರೆ
ಹಿಂದೂಗಳ ಧರ್ಮಗ್ರಂಥ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಮಹಾಕಾವ್ಯ ಅನೇಕ ಸಾಧಕರಿಗೆ ಮಾರ್ಗದರ್ಶಕವಾಗಿದೆ ಎಂದು ಬೇಡರಕಣ್ಣಪ್ಪ ವಾಲ್ಮೀಕಿ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಪ್ಪ ತಿಳಿಸಿದರು.
ಅವರು ತಾಲ್ಲೂಕಿನ ಹೊಳವನಹಳ್ಳಿ ಬಸ್ ನಿಲ್ದಾಣದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡುತ್ತಾ, ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಗ್ರಂಥ ರಾಮಾಯಣ ಸಾರ್ವಜನಿಕರಿಗೆ ಧರ್ಮ ಸಾರುವುದರ ಜೊತೆಗೆ ಸನ್ಮಾರ್ಗಕ್ಕೆ ಜಯ ಎಂದು ತೋರಿಸಿಕೊಟ್ಟಿದೆ ಎಂದರು.
ಮಹಾಗ್ರಂಥ ರಾಮಾಯಣದಲ್ಲಿ ಇಡೀ ಪ್ರಪಂಚಕ್ಕೆ ಭಾರತೀಯ ಸಂಸ್ಕತಿ, ಧರ್ಮವನ್ನು ಮಹಾಕಾವ್ಯದಲ್ಲಿ ಪರಿಚಯಿಸಿಕೊಟ್ಟ ಮಹಾನ್ ವ್ಯಕ್ತಿ ನಮ್ಮ ವಾಲ್ಮೀಕಿ. ಅವರು ರಚಿಸಿದ ರಾಮಾಯಣ ಅನೇಕ ಜನರ ಜೀವನವನ್ನು ಬದಲಿಸಿದ ಸಾಧನ ಸಿದ್ದಿಕಾವ್ಯವಾಗಿದೆ. ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ವಿವೇಕ, ಬುದ್ದಿ, ಮನಸ್ಸು ಮತ್ತು ಕ್ರಿಯಾ ಕರ್ಮಗಳನ್ನು ಸೂಕ್ತ ದಾರಿಯಲ್ಲಿ ನಡೆಸುತ್ತವೆ ಎಂದು ಹೇಳಿದರು.
ಹೊಳವನಹಳ್ಳಿ ಗ್ರಾ, ಪಂ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಕೇವಲ ವ್ಯಕ್ತಿಯಲ್ಲ. ಅವರೊಂದು ಶಕ್ತಿ. ನಮ್ಮ ವಾಲ್ಮೀಕಿ ಸಮುದಾಯ ಇನ್ನೂ ಹಿಂದುಳಿದಿದ್ದು ನಾವು ಸಾಮಾಜಿಕ, ಆರ್ಥಿಕ, ಶಿಕ್ಷಣದಿಂದ ವಂಚಿತರಾಗಿದ್ದೇವೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಿ ಕೊಡಬೇಕು. ಆರ್ಥಿಕವಾಗಿ ಮುಂದೆ ಬರಬೇಕು ಎಂದರೆ ಪೋಷಕರು ದುಡಿಮೆಯ ಮಾರ್ಗವನ್ನು ಹಿಡಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಸದಸ್ಯರಾದ ಓಬಳೇಶ್, ಕುಮಾರ್, ರವಿಕುಮಾರ್, ರಂಗಣ್ಣ, ಶಶಿಕುಮಾರ್, ಮಾಜಿ ಸದಸ್ಯ ಪೂಜಾರ್ ಹನುಮಂತರಾಯಪ್ಪ, ನರಸಿಂಹಮೂರ್ತಿ, ಮುಖಂಡರಾದ ಮಾದಣ್ಣ, ಗಂಗಾಧರಪ್ಪ, ನರಸಿಂಹಮೂರ್ತಿ, ರಂಗಣ್ಣ, ರಾಜಣ್ಣ, ಜಯರಾಜು, ಕೃಷ್ಣಪ್ಪ, ಸಂಜೀವರಾಜ್, ನಾಗರಾಜು, ರಾಜ, ರಾಜೇಶ್, ಮಧುಕಿರಣ್, ಮೀಸೆ ನರಸಿಂಹಮೂರ್ತಿ ಸ್ಭೆರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








