ದೆಹಲಿ:
ಅಶ್ಲೀಲತೆ ಹೊಂದಿರುವ 827 ಪೋರ್ನ್ ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡುವಂತೆ ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ಗುರುವಾರ ನಿರ್ದೇಶನ ನೀಡಿದೆ.
857 ವೆಬ್‍ಸೈಟ್‍ಗಳನ್ನು ನಿರ್ಬಂಧಿಸಲು ಉತ್ತರಾಖಂಡ್ ಹೈಕೋರ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಸೂಚನೆ ನೀಡಿತ್ತು. 30 ತಾಣಗಳಲ್ಲಿ ಅಶ್ಲೀಲತೆ ಇಲ್ಲ ಎಂದು ಪತ್ತೆಹಚ್ಚಿ ಅವುಗಳನ್ನು ಪಟ್ಟಿಯಿಂದ ಕೈಬಿಡಲಾಯಿತು. ಬಿಡುಗಡೆಗೊಂಡ ಪಟ್ಟಿಯಲ್ಲಿ 827 ವೆಬ್‍ಸೈಟ್‍ಗಳನ್ನು ನಿರ್ಬಂಧಿಸಲು ಟೆಲಿಕಾಂ ಇಲಾಖೆಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಮಕ್ಕಳ ಪೋರ್ನ್ ಚಿತ್ರಗಳು ವೆಬ್‍ಸೈಟ್‍ಗಳಲ್ಲಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಹೈಕೋರ್ಟ್ ಸೆಪ್ಟೆಂಬರ್ 27 ರಂದು ಈ ತಾಣಗಳನ್ನು ಬ್ಲಾಕ್ ಮಾಡುವಂತೆ ಆದೇಶಿಸಿತ್ತು. ಅಕ್ಟೋಬರ್ 8ಕ್ಕೆ ಈ ಆದೇಶ ಎಲೆಕ್ಟ್ರಾನಿಕ್ಸ್ ಸಚಿವಾಲಯಕ್ಕೆ ತಲುಪಿತ್ತು. ಇದರನ್ವಯ 827 ಪೋರ್ನ್ ತಾಣಗಳನ್ನು ಬ್ಲಾಕ್ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಎಲ್ಲಾ ಇಂಟರ್ನೆಟ್ ಸೇವಾ ಪರವಾನಗಿ ಹೊಂದಿರುವವರು ತಕ್ಷಣವೇ 827 ಪೋರ್ನ್ ವೆಬ್‍ಸೈಟ್‍ಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ನಿರ್ದೇಶನದಂತೆ ಹಾಗೂ ಹೈಕೋರ್ಟ್ ಆದೇಶದಂತೆ ಬ್ಲಾಕ್ ಮಾಡಬೇಕೆಂದು ಟೆಲಿಕಾಮ್ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳಿಗೆ ಕಳುಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ