ಹೊನ್ನಾಳಿ :
ಮಹರ್ಷಿ ವಾಲ್ಮೀಕಿ ಕೇಲವ ವ್ಯಕ್ತಿಯಲ್ಲ, ಅವರೊಂದು ಶಕ್ತಿ ಎಂದು ಪ್ರಾಂಶುಪಾಲರಾದ ಶಿವಬಸಪ್ಪ ಹೆಚ್ ಯತ್ತಿನಹಳ್ಳಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ, ಸಾಂಸ್ಕತಿಕ , ರಾಷ್ಟ್ರೀಯ ಸೇವಾ ಯೋಜನೆ ಘಟಕ 1&2 ಹಾಗೂ ರೋವರ್ಸ್ & ರೇಂಜರ್ಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಮಾನವರಾದ ಮಹನೀಯರುಗಳು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅಂತಹವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಬೇಕಾಗಿದೆ. ಮಹರ್ಷಿ ವಾಲ್ಮೀಕಿ ಕೇಲವ ವ್ಯಕ್ತಿಯಲ್ಲ, ಅವರೊಂದು ಶಕ್ತಿ, ರಾಮಾಯಣ ಗ್ರಂಥದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ವiಹಾ ಪುರುಷ. ಮಹರ್ಷಿ ವಾಲ್ಮೀಕಿ ವಿಶ್ವ ಮಾನವರಾಗಿದ್ದು ಅವರನ್ನು ಒಂದು ಜಾತಿಗೆ ಸಿಮಿತಗೊಳಿಸದೇ ಪ್ರತಿಯೊಂದು ಸಮುದಾಯವು ಸೇರಿ ಜಯಂತಿಯನ್ನು ಆಚರಿಸಬೇಕು ಮತ್ತು ರಾಮಾಯಣ ಮಹಾಗ್ರಂಥ ಬರೆದ ವಾಲ್ಮೀಕಿ ಒಂದು ಸಮಾಜಕ್ಕೆ ಸೀಮಿತವಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ದೇವರಾಜ ಸಿ ಪಾಟೀಲ್, ಗ್ರಂಥಪಾಲಕರಾದ ಎಂ. ನಾಗರಾಜ ನಾಯ್ಕ, ಸಹಾಯಕ ಪ್ರಾಧ್ಯಾಪಕರಾದ ಎಂ.ಡಿ. ರಾಘವೇಂದ್ರ, ಡಾ. ಎ.ಎಲ್. ಪಾರ್ಥಸಾರಥಿ, ಹರಾಳು ಮಹಾಬಲೇಶ್ವರ, ಬಿ.ಕೊಟ್ರೇಶ, ಅರಸಯ್ಯ, ಎಂ.ಆರ್. ಲೋಕೇಶ, ವಿ.ಜಿ.ಮಂಜುನಾಥ ಗುರು, ಆರ್. ಹೆಚ್. ಅಮೂಲ್ಯ ಕೆ. ಪುಷ್ಪಲತಾ ಡಾ. ಪ್ರಶಾಂತ ಕುಮಾರ್ ಶರ್ಮಾ, ಹಿರಿಯ ಬೆರಳಚ್ಚುಗಾರರಾದ ಹೆಚ್. ಹನುಮಂತಪ್ಪ, ಗ್ರಂಥಾಲಯ ಸಹಾಯಕರಾದ ಎಸ್. ಜಗದೀಶಪ್ಪ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
