ನರೇಗಾ ಬಳಸಿ ಮಾದರಿ ಗ್ರಾಮವಾಗಿಸಿ

ಹಾವೇರಿ:

        ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಯಲಗಚ್ಚ ಗ್ರಾಮ ಪಂಚಾಯತಿಯ ಯಲಗಚ್ಚ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆಯನ್ನು ಆಚರಿಸಲಾಯಿತು. ಈ ಯೋಜನೆಯ ಬಗ್ಗೆ ತಾಲೂಕ ಪಂಚಾಯತಿಯ ತಾಲೂಕ ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ಶ್ರೀ ಗಿರೀಶ ಎಸ್ ಬೆನ್ನೂರ ಮಾತನಾಡಿ ವಾರಕ್ಕೆ 1300 ರಿಂದ 1500 ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನ ಸೃಜಿಸಬೇಕೇಂದು ಕೂಲಿಕಾರರಿಗೆ ರೋಜಗಾರ ದಿನಾಚರಣೆಯಲ್ಲಿ ತಿಳಿಸಿದರು.

       ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಜವಾಬ್ದಾರಿ ಗ್ರಾಮ ಪಂಚಾಯತಿ ಮೇಲಿದೆ ಎಂದು ತಿಳಿಸಿದರು. ತಾಲೂಕಿನ ಯಲಗಚ್ಚ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಏರ್ಪಡಿಸಿದ್ದ “ರೋಜಗಾರ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ತಾಲೂಕಿನ 33 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ವಲಸೆ ಹೋಗುವುದನ್ನು ತಡೆಯಲು,ಮಾನವ ದಿನಗಳ ಸೃಜನೆ ಮಾಡಲು ಖಾತ್ರಿ ಯೋಜನೆ ವರದಾನವಾಗಿದೆ ಇದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃಧ್ಧಿಗೆ ಕೈಜೋಡಿಸಬೇಕೆಂದು ತಿಳಿಸಿದರು.

         ಹಾಗೆಯೇ ಮುಂದುವರೆದು ವೈಯಕ್ತಿಕ ಕಾಮಗಾರಿಗಳಾದ 1) ತೋಟಗಾರಿಕೆ (ತೆಂಗು, ಗೇರು (ಗೋಡಂಬಿ ಬೀಜ) ಮಾವು/ಸಪೋಟ, ದಾಳಿಂಬೆ, ಪೇರಲ, ದ್ರಾಕ್ಷಿ, ತಾಳೆ, ದಾಲ್‍ಚಿನ್ನಿ, ಲವಂಗ, ಮೆಣಸು, ನಿಂಬೆ, ಹುಣಸೆ, ನೇರಳೆ, ಸೀತಾಫಲ, ಬಾರೆ ಹಣ್ಣು, ನುಗ್ಗೆಕಾಯಿ, ನÉಲ್ಲಿ ಇನ್ನು ಹಲವಾರು ಬೆಳೆಗಳು) 2) ರೇಷ್ಮೆ ಇಲಾಖೆಯ ಕಾಮಗಾರಿಗಳು 3) ಅರಣ್ಯ ಇಲಾಖೆಯ ಕಾಮಗಾರಿಗಳು4) ಕೃಷಿ ಅರಣ್ಯ ಕಾಮಗಾರಿಗಳು 5) ಕೃಷಿ ಹೊಂಡ 6) ಕಾಂಪೋಸ್ಟ್ ಪಿಟ್ 7) ಪ್ಯಾಕೇಜ್ ಕಾಮಗಾರಿಗಳು8) ಇಂಗು ಗುಂಡಿ 9) ಕೊಳುವೆ ಬಾವಿ ಮರಪೂರಣ ಘಟಕ 10) ಭೂ ಅಭಿವೃದ್ದಿ 11) ದನದದೊಡ್ಡಿ 12) ಗ್ರಾಮೀಣ ಗೋದಾಮು. 13) ಬೋಲ್ಡರ್ ಚೆಕ್ ಡ್ಯಾಂಗಳು 14) ಕಲ್ಲು/ಕಾಂಕ್ರೀಟ್ ಚೆಕ್ ಡ್ಯಾಂ 15) ಜಮೀನು ಸುತ್ತಲು ತೋಟಗಾರಿಕಾ ಸಸಿಗಳ ನೆಡುವುದು ಎಂದು ಸಭೆಯಲ್ಲಿ ತಿಳಿಸಿದರು.

         ಹಾಗೆಯೇ ಮುಂದುವರೆದು ಸಮುದಾಯ ಕಾಮಗಾರಿಗಳಾದ 1)ಕೆರೆ ಹೂಳೆತ್ತುವುದು 2) ಗೋ ಕಟ್ಟೆ ನಿರ್ಮಾಣ 3) ಹೊಸ ಕೆರೆ ನಿರ್ಮಾಣ 3) ನೆರೆಹಾವಳಿ ತಡೆಗಟ್ಟುವಿಕೆ ಕಾಮಗಾರಿಗಳು 4) ಮಣ್ಣುಗಾಲುವೆ ನಿರ್ಮಾಣ 5) ಮಲ್ಟಿ ಆರ್ಚ ಚೆಕ್ ಡ್ಯಾಂ 6) ಗ್ರಾಮೀಣ ಗೋದಾಮು 7) ಸ್ಮಶಾನ ಅಭಿವೃದ್ದಿ 8) ಎಸ್.ಹೆಚ್.ಜಿ ಭವನ 9) ಸರ್ಕಾರಿ ಶಾಲೆಗಳ ಆಟದ ಮೈದಾನ ಅಭಿವೃದ್ದಿ 10) ಸರ್ಕಾರಿ ಶಾಲೆಗಳಿಗೆ ಕಂಪೌಂಡ್ ನಿರ್ಮಾಣ 11) ಬೌಲ್ಡರ್ ಚೆಕ್ಸ್ 12) ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ 13) ಅಂಗನವಾಡಿ ಕಟ್ಟಡಗಳು. 14) ಸರ್ಕಾರ ದಿಂದ ಆಯ್ದ ಶಾಲೆಗಳಿಗೆ ಶೌಚಾಲಯ ನಿರ್ಮಾಣ. 15) ರೈತರ ಒಕ್ಕಣಿ ಕಣ 16) ಜಾಗದ ಲಭ್ಯತೆ ಇರುವ ಸರ್ಕಾರಿ ಶಾಲೆಯಲ್ಲಿ ಕೈತೋಟ ನಿರ್ಮಾಣ. ಕಾಮಗಾರಿಗಳನ್ನು ಕೈಗೊಳ್ಳುಬಹುದಾಗಿದೆ ಎಂದು ತೀಳಿಸಿದರು.

         ಸಭೆಯಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರುಗಳು, ಉದ್ಯೋಗ ಚೀಟಿ ಪಡೆದ ಕೂಲಿ ಕಾರ್ಮಿಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಯವರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಪಂಚಾಯತ ಅಭಿವೃಧ್ಧಿ ಅಧಿಕಾರಿಗಳಾದ ಸೋಮಶೇಖರ ಯರೇಶಿಮಿ ನಿರೂಪಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link