ಉಪ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ ಬಸವರಾಜ್ ಬೊಮ್ಮಾಯಿ

ಕೊಟ್ಟೂರು

      ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಮತ್ತು ವಿಧಾನಸಭಾ ಉಪ ಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರ ಪತನದ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಮುಖಂಡ ಬಸವರಾಜ್ ಬೊಮ್ಮಾಯಿ ಭವಿಷ್ಯ ನುಡಿದರು.

      ಪಟ್ಟಣದಲ್ಲಿ ಗುರುವಾರ ಬಿಜೆಪಿ ಲೋಕಸಭಾ ಅಭ್ಯರ್ಥಿ ಜೆ.ಶಾಂತಾ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

     ಕಾಂಗ್ರೇಸ್ ರಾಷ್ಟ್ರೀಯ ಪಕ್ಷ, ಆದರೆ ಮಾಜಿ ಮುಖ್ಯ ಸಿದ್ದರಾಮಯ್ಯ ಕಾಂಗ್ರೇಸ್ ಪಕ್ಷವನ್ನು ಜೆಡಿಎಸ್‍ಗೆ ಒತ್ತೇ ಹಿಟ್ಟಿರುವುದರಿಂದ ಕಾಂಗ್ರೇಸ್ ಪಕ್ಷದವರಿಗೆ ಅವರ ಗುಣ ಎಂತಂಹದು ಎಂದು ತಿಳಿದಿದೆ ಎಂದು ವ್ಯಂಗ್ಯವಾಡಿದರು.

     ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹಾಗೂ ಜಮಖಂಡಿಯಲ್ಲಿ ಬಿಜೆಪಿ ಗೆಲುವು ಸಾಧಿಸುವು ನಿಶ್ಚಿತ. ಆದರೆ ಮಂಡ್ಯ ಮತ್ತು ರಾಮನಗರ ನಮ್ಮ ಪಕ್ಷದ ಬಲವೃದ್ದಿಸಲಿದೆ. ಆದರೆ ಗೆಲ್ಲುವ ಭರವಸೆ ಕ್ಷೀಣ ಎಂದು ಸ್ಪಷ್ಟ ಪಡಿಸಿದರು.

     ಸರ್ಕಾರ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದು, ಯಾವುದೇ ಕಾಮಗಾರಿ ಟೆಂಡರ್ ಕರೆಯುವಂತ್ತಿಲ್ಲ. ಹಳೆ ಟೆಂಡರ್‍ಗಳಿಗೆ ಹಣ ವರ್ಗಾವಣೆ ಮಾಡುವಂತ್ತಿಲ್ಲ ಎಂದು ಹಣಕಾಸು ಇಲಾಖೆ ಸುತ್ತೋಲೆ ಹೊರಡಿಸಿರುವುದು ಸರ್ಕಾರದ ದಿವಾಳಿತನವನ್ನು ತೋರಿಸುತ್ತಿದೆ ಎಂದರು.

      ಈ ಸಮ್ಮಿಶ್ರ ಸರ್ಕಾರ ಬಂದ ಮೇಲೆ ಬಳ್ಳಾರಿಗೆ ಯಾವುದೇ ಯೋಜನೆಗಳು ಅನುಷ್ಟಾನಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಿ.ಕೆ. ಶಿವಕುಮಾರ್, ಜಿಲ್ಲೆಗೆ ಮುಂದಿನ ಯೋಜನೆ ಕುರಿತು ಮಾತನಾಡದಿರುವುದು ಜಿಲ್ಲೆಗೆ ಅನ್ಯಾಯ ಮಾಡುವ ಸೂಚನೆ ಇದಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

      ಬಳ್ಳಾರಿ ಜಿಲ್ಲೆಯ ಜನತೆ ಕಾಂಗ್ರೇಸ್‍ನವರ ಹುಸಿ ಭರವಸೆ ಮರುಳಾಗದೆ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಗೆಲುವು ಸಾಧಿಸುವುದರಲ್ಲಿ ಎರಡು ಮಾತ್ತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಮಾಜಿ ಶಾಸಕರಾದ ಬಿ.ಪಿ. ಹರೀಶ, ಶಶಿಲ್ ನಮೋಸಿ, ಶ್ರೀನಿವಾಸ, ನರೇಗಲ್ ಕೊಟ್ರೇಶ, ಎಂ.ಎಂ.ಜೆ. ಸ್ವರೂಪನಂದ, ಶೆಟ್ಟಿ ತಿಂದಪ್ಪ, ಪ.ಪಂ. ಸದಸ್ಯರಾದ ಬೋರವೆಲ್ ತಿಪ್ಪೇಸ್ವಾಮಿ, ವಿನಯಕುಮಾರ್, ಕೆಂಗಪ್ಪ, ಸಿದ್ದಯ್ಯ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap