ಸಂಸಾರವೆಂಬುದು ಕೇವಲ ದೈಹಿಕ ಸಂಬಂಧವಲ್ಲ ಮನಸು ಮನಸುಗಳ ಸಮ್ಮಿಲನ-ಡಾ.ಶಾಂತವೀರ ಸ್ವಾಮೀಜಿ

ಹೊಸದುರ್ಗ:

          ಸಂಸಾರವೆಂಬುದು ಕೇವಲ ದೈಹಿಕ ಸಂಬಂಧವಲ್ಲ ಮನಸು ಮನಸುಗಳ ಸಮ್ಮಿಲನ, ಸಂಸಾರದ ಸತಿ-ಪತಿ ಎಂಬ ಜೋಡೆತ್ತುಗಳು ನಂಬಿಕೆ ಹೊಂದಾಣಿಕೆ ಎಂಬ ಕೀಲುಗಳನ್ನು ಗಾಡಿಗೆ ಹಾಕಿ ಓಡಿಸಿದಾಗ ಸಂಸಾರ ಸುಸೂತ್ರವಾಗಿ ಸಂತೋಷವಾಗಿ ನಡೆಯಲು ಸಾಧ್ಯ, ಸಮಾಜದ ಸ್ವಾಸ್ಥ್ಯಚೆನ್ನಾಗಿರಲು ಸುಸಂಸ್ಕೃತ ಸಂಸಾರಯುತ ಸಂಸಾರಗಳ ಬಹಳ ಮುಖ್ಯ ಸಂಸಾರಜೀವನ ನಿಂತಿರುವುದು ಪ್ರೀತಿ ಹೊಂದಾಣಿಕೆ ನಂಬಿಕೆಗಳ ಮೇಲೆ ಅವುಗಳಿಗೆ ಚುತಿ ಬರದ ಹಾಗೆ ನಡೆದುಕೊಂಡು ಬಾಳಬೇಕು ಎಂದುಕುಂಚಿಟಿಗ ಮಠದಡಾ. ಶಾಂತವೀರ ಸ್ವಾಮೀಜಿಕಿವಿಮಾತು ಹೇಳಿದರು.

      ಆಂಧ್ರ ಪ್ರದೇಶದ ಮಡಕಶಿರಾ ತಾಲ್ಲೂಕಿನದೊಡ್ಡ ಚೋಳಗಿರಿ ಗ್ರಾಮದ ಜಯರಾಮ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ 42 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಆಶ್ರ್ರೀವಚನ ನೀಡಿದರು.

      ಕಳೆದ ವರ್ಷಗಳಿಂದ ಜಯರಾಮರೆಡ್ಡಿಕುಟುಂಬದವರುದೊಡ್ಡ ಚೋಳಗಿರಿಯಗ್ರಾಮದಲ್ಲಿ ಈ ಸಾಮೂಹಿಕ ವಿವಾಹವನ್ನು ಮಾಡುತ್ತಿರುವುದು ಶ್ಲಾಗನೀಯ.ಬಡವರು ಮಕ್ಕಳು ನಮ್ಮ ಮಕ್ಕಳು ಎಂದು ಭಾವಿಸಿ ದೀನದಲಿತರ, ಶೋಷಿತರ ಬಡವರ ಮಕ್ಕಳಿಗೆ ಆಶ್ರಯವಾಗಬೇಕೆಂದು ಹಾಗೂ ಅವರ ವಿಧ್ಯಾಭ್ಯಾಸಗಳಿಗೆ ಸಹಾಯ ಮಾಡುವ ಮೂಲಕ ಸೇವೆಯಲ್ಲಿದೇವರನ್ನುಕಾಣುವ ಸತ್ಕಾರವನ್ನುಜಯರಾಮರೆಡ್ಡಿ ಮಾಡುತ್ತಿರುವುದುತುಂಬಾ ಸಂತೋಷದ ಸಂಗತಿ.

        ಹಣಇರುವ ಜನಗಳು ಕೊಡುವಗುಣವನ್ನು ಬೆಳಿಸಿಕೊಳ್ಳುವ ಶ್ರೇಷ್ಠ ಕೆಲಸವನ್ನು ಮಾಡಬೇಕಿದೆ. ಹಸಿದ ಹೊಟ್ಟೆಗೆಅನ್ನ ನೀಡುವುದು, ನಿರಾಶ್ರಿತರಿಗೆ ಆಶ್ರಯ ನೀಡುವುದು, ಪ್ರತಿಭಾವಂತರಿಗೆ ಪುರಸ್ಕರಿಸುವುದು ಸಮಾಜದ ಲಕ್ಷಣ. ಆದರೆ ಇಂದಿನ ಕೆಲವು ರಾಜಕಾರಿಣಿಗಳು, ಅಧಿಕಾರಿಗಳು, ಉಳ್ಳವರು ತಮ್ಮ ಪ್ರತಿಷ್ಟೆಯನ್ನು ವೈಭವೀಕರಿಸಲುತಮ್ಮ ಶ್ರೀಮಂತಿಕೆಯನ್ನು ತೋರ್ಪಡಿಸಲುದುಂದುವೆಚ್ಚ ಮಾಡಿ ಮದುವೆ ನಾಮಕರಣಗೃಹಪ್ರವೆಶಇನ್ನಿತರೆ ಕಾರ್ಯಕ್ರಮಗಳ ಮೂಲಕ ಕೋಟಿಗಟ್ಟಲೆ ಹಣವನ್ನುವ್ಯಯಮಾಡುವುದನ್ನು ನಿಲ್ಲಿಸಿ ಬಡವರಕಲ್ಯಣಕ್ಕೆ ವಿಧ್ಯಾಭ್ಯಾಸಕ್ಕೆ ನೀಡುವಉದಾರತೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

       ಇದೇ ವೇಳೆ ಸಮಾರಂಭದಉಧ್ಘಾಟನೆಯನ್ನು ವಿಧಾನಪರಿಷತ್ ಸದಸ್ಯರದತಿಪ್ಪೇಸ್ವಾಮಿ ಮಾಡಿದರು.ರಮೇಶ್‍ಗುಡ್ಡ, ದೇವರಾಜ್, ಮಂಜುನಾಥ್‍ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link