ಬಳ್ಳಾರಿ
ಆಯೋಡಿನ್ ಕೊರತೆಯಿಂದಾಗಿ ಸಾಮಾನ್ಯವಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಬೆಳವಣಿಗೆಯಲ್ಲಿ ಕುಂಠಿತ, ಕಿವುಡು ಹಾಗೂ ಮೂಖತನ, ಮೆಳ್ಳೆಗಣ್ಣು, ಕುಬ್ಜತನ, ಅಂಗವಿಕಲತೆ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಆಯೋಡಿಯನ್‍ಯುಕ್ತ ಉಪ್ಪನ್ನು ದಿನನಿತ್ಯ ಸೇವಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅನಿಲಕುಮಾರ ಹೇಳಿದರು.
ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ನಗರz ಬಂಡಿಮೋಟ್‍ದಲ್ಲಿರುವ ಉಜ್ಜಯಿನಿ ಜಗದ್ಗುರು ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಅಯೋಡಿನ್ ಕೊರತೆಯ ನಿಯಂತ್ರಣ ಹಾಗೂ ಸಪ್ತಾಹ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಯಸ್ಕರಲ್ಲಿ ಮುಖ್ಯವಾಗಿ ನಿಶ್ಯಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಫಲ್ಯತೆ, ಗಳಗಂಡರೋಗ ಕಂಡು ಬರುತ್ತವೆ ಮತ್ತು ಗರ್ಭಿಣಿಯರಲ್ಲಿ ಸಮಾಜದಲ್ಲಿ ಅತೀ ಗಂಭೀರವಾಗಿರುವುದೆಂದರೆ ಗರ್ಭಿಣಿಯರಲ್ಲಿ ಮೈಯಿಳಿತ, ಪದೇ ಪದೇ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ, ಸಂತಾನೋತ್ಪತ್ತಿಯ ತೊಂದರೆ ಕಂಡು ಬರುತ್ತದೆ ಎಂಬುದನ್ನು ಅವರು ವಿವರಿಸಿದರು.ದೇಹಕ್ಕೆ ಸಾಕಷ್ಟು ಪ್ರಮಾಣದ ಅಯೋಡಿನ್ ಅಂಶ ದೊರಕದಿದ್ದಾಗ ಥೈರಾಯಿಡ್ ಗ್ರಂಥಿಯ ಗಾತ್ರ ಹೆಚ್ಚಾಗುತ್ತದೆ ಎಂದರು.
ಸರ್ಕಾರ ಇವೆಲ್ಲವುಗಳನ್ನು ಮನಗಂಡು ದಿನ ನಿತ್ಯದ ಆಹಾರದಲ್ಲಿ ಉಪ್ಪನ್ನು ತಪ್ಪದೇ ಬಳಸುವುದರಿಂದ ಪೊಟಾಷಿಯಂ ಅಯೋಡೇಟ್‍ಅನ್ನು ಮಿಶ್ರಣಗೊಳಿಸಿ ಐಯೋಡಿನ್ ಉಪ್ಪು ಎಂದು ಇತ್ತೀಚೆಗೆ ತಯಾರಿಸುವ ಕ್ರಿಯಾ ಹಮ್ಮಿಕೊಂಡಿದೆ. ಅಲ್ಲದೆ ಎಲ್ಲಾ ಉಪ್ಪು ತಯಾರಿಕ ಕಂಪನಿಗಳು ಸಹಿತ ಐಯೋಡಿನ್ ಸಹಿತ ಉಪ್ಪನ್ನು ತಯಾರಿಸಲು ಸೂಚಿಸಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಮೂಲಕ ಕ್ಷೇತ್ರ ಮಟ್ಟದಲ್ಲಿ ಉಪ್ಪಿನಲ್ಲಿರುವ ಐಯೋಡಿನ್ ಪ್ರಮಾಣವನ್ನು ಪತ್ತೆ ಹಚ್ಚಲು ಐಯೋಡಿನ್ ಪರೀಕ್ಷ ಕಿಟ್ಟಗಳನ್ನು ಆಶಾ ಕಾರ್ಯಕರ್ತೆಯರಿಗೆ ಈಗಾಗಲೇ ವಿತರಿಸಲಾಗಿದೆ ಎಂದರು.ಶಿಕ್ಷಕರಾದ ಜಿ. ಸಿದ್ದೇಶ್ ಅವರು ಸ್ವಾಗತಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಪುಟ್ಟ ವೀರಭದ್ರಪ್ಪ, ಗುಗ್ಗರಹಟ್ಟಿಯ ಆಡಳಿತ ವೈದ್ಯಾಧಿಕಾರಿ ಡಾ.ಕಾಶಿ ಪ್ರಸಾದ್, ಡಾ.ಮುರಳಿಧರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಆರೋಗ್ಯ ಇಲಾಖೆಯ ಸಿಬ್ಬಂದಿ ಸಯ್ಯದ್ ಅಕ್ತರ್ ಪಾಷ, ಸಿದ್ದನಗೌಡ ಜಿ. ಜಿಲಾನಿ, ಸಹ ಶಿಕ್ಷಕರಾದ ಹೆಚ್.ಎಮ್.ಕೊಟ್ರದೇವರು ಬಿ.ಶಂಕರ್, ಜಿ.ಸಿದ್ದೇಶ್, ಯಶೋದ ಎಲ್.ಹೆಚ್.ವಿ ಕಿರಿಯ ಆರೋಗ್ಯ ಸಹಾಯಕರಾದ ಎನ್.ಉಮಾದೇವಿ, ಕೆ.ಜಿ.ರಶ್ಮಿ, ಟಿ.ಸ್ವಾತಿ, ಸಿ. ಅರುಣಾ ಹಾಗೂ ಆಶಾ ಕಾರ್ಯಕರ್ತೆಯರಾದ ನಾಗೇಂದ್ರಮ್ಮ, ಕಲ್ಯಾಣಿ, ನಾಗಲಕ್ಷ್ಮಿ, ಸಲಿಮಾ ಭಾನು, ಹನುಮಂತಮ್ಮ, ಶ್ರೀ ದೇವಿ ಸೇರಿದಂತೆ ಶಾಲಾ ಮಕ್ಕಳು ಇದ್ದರು.
ಈ ಕಾರ್ಯಕ್ರಮದ ಅಂಗವಾಗಿ ಆಯೋಡಿನ್ ಉಪಯುಕ್ತತೆ ಬಗ್ಗೆ ಘೋಷಣೆಗಳೊಂದಿಗೆ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವೇದಿಕೆ ಕಾರ್ಯಕ್ರಮದಲ್ಲಿ ಉಪ್ಪಿನಲ್ಲಿ ಇರುವ ಅಯೋಡಿನ್ ಪ್ರಮಾಣ ಪರೀಕ್ಷೆಯ ಪ್ರಾತ್ಯಕ್ಷತೆ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
