ಹಾನಗಲ್ಲ :
ಹಾನಗಲ್ಲ ಬಸ್ ಡಿಪೋ ಚಾಲಕ ಹಾಲಪ್ಪ ಕೆ.ಎನ್. ಎಂಬಾತ ಹಂದಿಯೊಂದದು ಬೈಕ್‍ಗೆ ಢಿಕ್ಕಿ ಹೊಡೆದ ಅಪಘಾತದಲ್ಲಿ ಪೆಟ್ಟಾಗಿ ಹುಬ್ಬಳ್ಳಿಯ ಕೀಮ್ಸಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿಯೇ ಅಸುನೀಗಿದ ಘಟನೆ ನಡೆದಿದೆ.
ರವಿವಾರ ಬೆಳಿಗ್ಗೆ ಬಾಂಬೆದಿಂದ ಹಾನಗಲ್ಲಿಗೆ ಬಸ್ ಚಾಲನೆ ಮಾಡಿಕೊಂಡು ಬಂದು ಬಸ್ ಡಿಪೋದಲ್ಲಿ ಬಸ್ ಬಿಟ್ಟು, ತನ್ನ ಊರಾದ ಸೊರಬ ತಾಲೂಕು ಕೋಟಿಪುರ ನೀರಲಗಿ ಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹಾನಗಲ್ಲಿನ ಕಲ್ಲಭಾವಿ ಬಳಿ ಹಂದಿಯೊಂದು ಅಡ್ಡ ಬಂದ ಪರಿಣಾಮವಾಗಿ ಹಿಂದಿ ಹಾಗೂ ಬೈಕ್ ಡಿಕ್ಕಿಯಾಗಿ, ಬೈಕ್ ನೆಲಕ್ಕುರುಳಿ ಅಪಘಾತಕ್ಕೀಡಾಗಿದ್ದಾನೆ. ಬೈಕ್ ಚಾಲಕ ಯಳ್ಳೂರು ಗ್ರಾಮದ ನೀಲಪ್ಪ ಬಿಂಗಾಪೂ ಈತನಿಗೆ ಕಾಲು ಮುರಿದಿದ್ದು, ಹಿಂಬದಿ ಕುಳಿತ ಬಸ್ ಚಾಲಕ ಹಾಲಪ್ಪ ಕೆ.ಎನ್. ತಲೆಗೆ ತೀವ್ರ ಪೆಟ್ಟಾಗಿ ಕಿವಿಯಿಂದ ರಕ್ತಸ್ರಾವಾಗಿದೆ.
ಈತನನ್ನು ತಕ್ಷಣ ಹಾನಗಲ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಅಲ್ಲಿಂದ ಹುಬ್ಬಳ್ಳಿಯ ಕೀಮ್ಸಗೆ ಕಳಿಸಿಕೊಡಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ಚಾಲಕ ಹಾಲಪ್ಪ ಕೆ.ಎನ್. ಅಸುನೀಗಿದ್ದಾನೆ. ಹಾಲಪ್ಪ ಕೆ.ಎನ್. 20 ವರ್ಷಗಳಿಂದ ಹಾನಗಲ್ಲ ಬಸ್ ಡಿಪೋದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದನು ಎನ್ನಲಾಗಿದೆ.
