ಬೆಂಗಳೂರು
ಚೆನ್ನಮ್ಮನಕೆರೆ ಅಚ್ಚುಕಟ್ಟುವಿನ ಕಾಮಾಕ್ಯ ಸಿಗ್ನಲ್ ಬಳಿ ಮಾದಕ ವಸ್ತು ಎಲ್.ಎಸ್.ಡಿ. ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ಬನಶಂಕರಿ 3 ನೇ ಹಂತದ ದರ್ಶನ್ ಅತ್ರೇಯ(21)ಇಟ್ಟಮಡುವಿನ ರಾಹುಲ್ ಕೆ.ಎಸ್(25)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 16 ಎಲ್.ಎಸ್.ಡಿ. ಪೇಪರ್ಸ್, 1 ಕೆ.ಜಿ. ಗಾಂಜಾ, ಎರಡು ಮೊಬೈಲ್ಗಳು,4,500 ನಗದು ಸೇರಿ 1ಲಕ್ಷ 10 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಆರೋಪಿಗಳು ಚೆನ್ನಮ್ಮನಕೆರೆ ಅಚ್ಚುಕಟ್ಟುವಿನ ಕಾಮಾಕ್ಯ ಸಿಗ್ನಲ್ ಬಳಿಯ ಬ್ರ್ಯಾಂಡ್ ಫ್ಯಾಕ್ಟರಿ ಮಾದಕ ವಸ್ತುಗಳಾದ ಎಲ್.ಎಸ್.ಡಿ. ಮತ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.








