ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಗ ಮಂಗಳಮುಖಿಯಾಗಿ ಪತ್ತೆ

ಮಂಡ್ಯ ಜಿಲ್ಲೆ:

   ಲಿಂಗಪರಿವರ್ತನೆ ಮಾಡಿಸಿ ಭಿಕ್ಷಾಟನೆ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದ ಮಂಗಳಮುಖಿಯರು ಅಂದರ್.. ಅಪ್ರಾಪ್ತ ತೃತೀಯಲಿಂಗಿಯನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ ಕೆ.ಆರ್.ಪೇಟೆ ಪಟ್ಟಣ ಪೋಲಿಸರು…

  ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಹತ್ತನೇ ತರಗತಿ ಓದುತ್ತಿದ ವಿದ್ಯಾರ್ಥಿ ತೃತಿಯ ಲಿಂಗಿಯಾಗಿ ಬದಲಾಗಿ ತೃತಿಯ ಲಿಂಗಿಗಳ ಜತೆ ಅಂಗಡಿಗಳಲ್ಲಿ ಭಿಕ್ಷಾಟನೆ ಮಾಡುವಾಗ ಸಿಕ್ಕಿ ಬಿದ್ದಿದ್ದು ಪಟ್ಟಣದ ಪೊಲೀಸರ ವಶದಲ್ಲಿದ್ದಾರೆ.

  ತಾಲೂಕಿನ ಹಕ್ಕಿಮಂಚನಹಳ್ಳಿಯ ಚಂದನ್ ಕುಮಾರ್ (16) ಈತ ಚಂದನಕುಮಾರಿ’ಯಾಗಿ ತೃತೀಯ ಲಿಂಗಕ್ಕೆ ಬದಲಾಗಿರುವವರು‌‌‌.

  ಚಂದನ್ ಕುಮಾರ್ ಬೆಂಗಳೂರಿನ ತಮ್ಮ ಚಿಕ್ಕಮ್ಮನ ಮನೆ ಇದ್ದುಕೊಂಡು ವಿದ್ಯಾನಗರದ ಬಿಬಿಎಂಪಿ ಹೈಸ್ಕೂಲ್ ಅಲ್ಲಿ ಹತ್ತನೇ ತರಗತಿ ವಿದ್ಯಾಬ್ಯಾಸ ಮಾಡತ್ತಿದ್ದನು. ರಜೆಗೆಂದು ತಾಲೂಕಿನ ಸ್ವಗ್ರಾಮಕ್ಕೆ ಬಂದಿದ್ದನು. ಹಿಂದಿರುಗಿ ಬೆಂಗಳೂರಿಗೆ ಹೋಗಲು ಪೋಷಕರು ಪಟ್ಟಣದ ಸರ್ಕಾರಿ ಬಸ್ ಸ್ಟ್ಯಾಂಡ್ ಗೆ ಬಂದು ಬೆಂಗಳೂರು ಬಸ್ ಹತ್ತಿಸಿದ್ದರು. ಆದರೆ ಚಂದನ್ ಕುಮಾರ್ ಬೆಂಗಳೂರಿಗೆ ಹೋಗದ ಕಾರಣ ಆತನ ಪೋಷಕರು ಮಗ ನಾಪತ್ತೆಯಾಗಿದ್ದಾನೆ ಎಂದು ಎಂಟು ತಿಂಗಳ ಹಿಂದೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

  ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. ಅಕ್ಟೋಬರ್ 28ರ ಭಾನುವಾರ ಬೆಳಗ್ಗೆ ಇಬ್ಬರು ತೃತೀಯ ಲಿಂಗಿಗಳ ಜತೆ ನಾಪತ್ತೆಯಾಗಿದ್ದ ಹುಡುಗ ಪಟ್ಟಣದ ಟಿಬಿ ರಸ್ತೆಯ ಅಂಗಡಿಗಳಲ್ಲಿ ಭಿಕ್ಷಾಟನೆ ಮಾಡುವಾಗ ಹಕ್ಕಿಮಂಚನಹಳ್ಳಿ ಗ್ರಾಮದ ಚಂದನ್ ಕುಮಾರ್ ಪಕ್ಕದ ಮನೆಯ ಮಂಜು ಎಂಬುವರು ಪಟ್ಟಣಕ್ಕೆ ಎಳೆನೀರು ವ್ಯಾಪಾರಕ್ಕೆ ಬಂದಿದ್ದಾಗ ಆ ಹುಡುಗನನ್ನು ಕಂಡು ವಿಚಾರಿಸಲು ಹೋದಾಗ ಹುಡುಗ ಅವರ ಜತೆಯಲ್ಲಿದ್ದ ಇಬ್ಬರು ತೃತಿಯ ಲಿಂಗಿಗಳನ್ನು ಆಟೋದಲ್ಲಿ ಕರೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ‌. ಮಂಗಳಮುಖಿಯರನ್ನು ಆಟೋವನ್ನು ಬೈಕನಲ್ಲಿ ಹಿಂಬಾಲಿಸಿದ ಮಂಜು ಪಟ್ಟಣದ ಹೊಸ ಕಿಕ್ಕೇರಿ ರಸ್ತೆಯಲ್ಲಿ ಅಡ್ಡಗಟ್ಟಿ ಪಟ್ಟಣದ ಪೊಲೀಸರಿಗೆ ಒಪ್ಪಿಸಿದ್ದಾರೆ.

  ತಮ್ಮ ಮಗ ಚಂದನ್ ಕುಮಾರ್ ತೃತೀಯ ಲಿಂಗಿಯಾಗಿ ಬದಲಾವಣೆಯಾಗಿದ್ದಾರೆ‌ ಎಂಬ ವಿಷಯ ತಿಳಿದ ಪೋಷಕರ ಸಂಬಂಧಿಕರು ಪಟ್ಟಣದ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು‌. ಪೋಷಕರು ನಮ್ಮ ಮಗನನ್ನು ಮಂಗಳಮುಖಿಯರು ಅಪಹರಿಸಿ ತೃತೀಯ ಲಿಂಗಿ ಮಾಡಿದ್ದಾರೆ ಎಂದು ಪೊಲೀಸರ ಎದುರು ತಮ್ಮ ಅಳಲನ್ನು ತೊಡಿಕೊಂಡರು.

  ಪೊಲೀಸರು ಇಬ್ಬರು ತೃತೀಯ ಲಿಂಗಿ ಸೇರಿದಂತೆ ಮಂಗಳಮುಖಿಯಾಗಿ ಬದಲಾಗಿರುವ ಅಪ್ರಾಪ್ತ ಹುಡುಗನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಅಪಹರಣಕ್ಕೆ ಒಳಗಾಗಿ ಪತ್ತೆಯಾಗಿರುವ ಹುಡುಗ ಅಪ್ರಾಪ್ತ ಆಗಿರುವುದರಿಂದ ಆತನನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳಿಗೆ ಹಸ್ತಾಂತರಿಸುವುದಾಗಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಪತ್ರಕರ್ತರಿಗೆ ತಿಳಿಸಿದ್ದಾರೆ ‌

Recent Articles

spot_img

Related Stories

Share via
Copy link