ಬೆಂಗಳೂರು
ಬಾಗಿಲು ತೆಗೆದಿದ್ದ ಮನೆಗೆ ನುಗ್ಗಿ ಮಹಿಳೆಯೊಬ್ಬರ ಸರಗಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಯನ್ನು ಬೆನ್ನಟ್ಟಿ ಹಿಡಿದ ಪತಿ ಸ್ಥಳೀಯರ ಜೊತೆ ಧರ್ಮದೇಟು ಕೊಟ್ಟು ಚಾಮರಾಜಪೇಟೆ ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯರು ಹಿಡಿದುಕೊಟ್ಟ ಬಂಧಿತ ಆರೋಪಿಯನ್ನು ಚೆನ್ನೈ ಮೂಲದ ಮಣಿಕಂಠ(31)ಎಂದು ಗುರುತಿಸಲಾಗಿದೆ . , ಚಾಮರಾಜಪೇಟೆಯಲ್ಲಿ ಕಾರು ತೊಳೆಯುವ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಮಣಿಕಂಠ ಹಣದಾಸೆಗಾಗಿ ಈ ಕೃತ್ಯವೆಸಗಿರುವುದನ್ನು ರುವ ಚಾಮರಾಜಪೇಟೆ ಪೊಲೀಸರು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ಸ್ನೇಹಿತರ ಹುಟ್ಟುಹಬ್ಬದ ಸಮಾರಂಭಕ್ಕೆ ರಮ್ಯ ಹಾಗೂ ಭರತ್ ದಂಪತಿ ಬೇರೆಡೆಗೆ ಹೋಗಿ ರಾತ್ರಿ 11.30ರ ವೇಳೆ ಚಾಮರಾಜಪೇಟೆಯ 2ನೇ ಮುಖ್ಯ ರಸ್ತೆಯ ಮನೆಗೆ ಹಿಂತಿರುಗಿದ್ದರು ಮೊದಲ ಮಹಡಿಯ ಮನೆಗೆ ಬಾಗಿಲು ತೆಗೆದು ರಮ್ಯ ಒಳ ಹೋಗಿ ಕಾರು ನಿಲ್ಲಿಸಲು ಹೋಗಿದ್ದ ಪತಿ ಭರತ್ ಅವರ ಬರುವಿಕೆಗೆ ಕಾಯುತ್ತಿದ್ದರು.
ಈ ವೇಳೆ ಮನೆಗೆ ಏಕಾಎಕಿ ಮನೆಗೆ ನುಗ್ಗಿದ್ದ ಮಣಿಕಂಠ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿಯಲು ಮುಂದಾಗಿದ್ದಾಗ ಕೂಡಲೇ ರಕ್ಷಣೆಗಾಗಿ ರಮ್ಯ ಅವರು ಕೂಗಿಕೊಂಡಾಗ ಓಡಿಬಂದ ಭರತ್ ಅವರು ಸರ ಕಸಿದು ಪರಾರಿಯಾಗುತ್ತಿದ್ದ ಮಣಿಕಂಠನನ್ನು ಬೆನ್ನಟ್ಟಿ ಹಿಡಿದಿದ್ದಾರೆ ಗಲಾಟೆ ಕೇಳಿ ಸೇರಿದ ಸ್ಥಳೀಯರು ಮಣಿಕಂಠನಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ ಚಾಮರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








