ಹಗರಿಬೊಮ್ಮನಹಳ್ಳಿ:
ಶ್ರೀರಾಮುಲು ಅಧಿಕಾರದ ಲಾಲಸೆಗೋಸ್ಕರ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು ರಾಜೀನಾಮೆ ನೀಡುವ ಮುನ್ನ ತಮ್ಮನ್ನು ಆರಿಸಿ ಕಳುಹಿಸಿದ್ದ ಮತದಾರರನ್ನು ಒಂದು ಮಾತುಸಹ ಕೇಳಲಿಲ್ಲ ಆದ್ದರಿಂದ ಶ್ರೀರಾಮುಲು ಬಳ್ಳಾರಿ ಮತದಾರರಿಗೆ ಮೋಸಮಾಡಿದ್ದಾರೆ ಎಂದು ಮಾಜಿ ಶಾಸಕ ಹಾಗೂ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ಅಧ್ಯಕ್ಷರು ಆಗಿರುವ ಎಂ.ಡಿ ಲಕ್ಷ್ಮೀನಾರಾಯಣ ಹೇಳಿದರು.
ಪಟ್ಟಣದ ಶಾಸಕ ಭೀಮಾನಾಯ್ಕ ರವರ ಜನಸಂಪರ್ಕ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಕಾಂಗ್ರೆಸ್ ಪಕ್ಷವು ಈ ಉಪಚುನಾವಣೆಯನ್ನು ಅಪೇಕ್ಷಿಸಿರಲಿಲ್ಲ ಆದರೂ ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉತ್ತಮ ಸಂಸದೀಯ ಪಟು ಹಾಗೂ ಉತ್ತಮ ವಾಗ್ಮಿಯಾಗಿರುವ ಉಗ್ರಪ್ಪರವರನ್ನು ಕಣಕ್ಕಿಳಿಸಿದೆ ಕಳೆದ 10 ವರ್ಷಗಳಿಂದ ದಕ್ಕದಿರುವ ಈ ಕ್ಷೇತ್ರವನ್ನು ಈಬಾರಿ ಕಾಂಗ್ರೆಸ್ ಲೀಲಾಜಾಲವಾಗಿ ತನ್ನದಾಗಿಸಿಕೊಳ್ಳಲಿದೆ.
ಲೋಕಸಭಾ ಸದಸ್ಯರೆಂದರೆ ಮುಂದಿನ ಜನಾಂಗಕ್ಕೆ ಅನುಕೂಲವಾಗುವ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರಲೆಂಬ ಉದ್ದೇಶದಿಂದ ಇವರನ್ನು ಲೋಕಸಭೆಗೆ ಹಾರಿಸಿಕಳುಹಿಸಿರುತ್ತಾರೆ. ಆದರೆ ಬಳ್ಳಾರಿಯಿಂದ ಆರಿಸಿ ಹೋದ ಶ್ರೀರಾಮುಲುವಾಗಲಿ ಅಥವಾ ಜೆ.ಶಾಂತರಾಗಲಿ ಇದುವರೆಗೂ ಲೋಕಸಭೆಯಲ್ಲಿ ಬಳ್ಳಾರಿಯ ಸಮಸ್ಯೆಗಳ ಬಗ್ಗೆ ಒಂದೇ ಒಂದು ಮಾತನ್ನುಸಹ ಆಡಿದ ನಿದರ್ಶನಗಳಿಲ್ಲ.
ನೇಕಾರ ಸಮಾಜದ ರಾಜ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷನಾಗಿರುವ ನಾನು ಜಿಲ್ಲೆಯಾಧ್ಯಂತ ಎಲ್ಲಾಕಡೆ ಸಂಚಾರಮಾಡಿದಾಗ ನೂರಕ್ಕೆ ನೂರುಭಾಗ ಈ ಬಾರಿ ಕಾಂಗ್ರೆಸ್ ಪಕ್ಷದ ಉಗ್ರಪ್ಪನವರನ್ನು ಗೆಲ್ಲಿಸಲು ಮತದಾರರು ನಿರ್ಧರಿಸಿರುವುದು ಕಂಡುಬಂತು. ಅದೇರೀತಿ ಕಾಂಗ್ರೆಸ್‍ನ ಎಲ್ಲಾ ಪದಾಧಿಕಾರಿಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರು ಸೇರಿ ಅಭ್ಯರ್ಥಿ ಉಗ್ರಪ್ಪನವರಿಗಾಗಿ ಪ್ರಚಾರ ಕೈಗೊಂಡಿರುವುದನ್ನು ನೋಡಿದರೆ ಮತದಾರ ಈಬಾರಿ ಕಾಂಗ್ರೆಸ್‍ನ್ನು ಕೈಬಿಡುವುದಿಲ್ಲ ಎಂದರು.
ಶಾಸಕ ಭೀಮಾನಾಯ್ಕ ಮಾತನಾಡಿ ಸೋನಿಯಾಗಾಂಧಿ ಹಾಗೂ ಬಳ್ಳಾರಿಗೆ ನೀಡಿದ್ದ ಸೋನಿಯಾ ಪ್ಯಾಕೇಜ್‍ನ ಬಗ್ಗೆ ಮಾತನಾಡಿರುವ ಬಿಜೆಪಿಯ ಬಸವರಾಜ ಬೊಮ್ಮಾಯಿ ಒಬ್ಬ ಸುಳ್ಳಿನ ಸರದಾರ ಅವರು ಏನೇ ಮಾತನಾಡಿದರು ಅದು ಬರಿ ಸುಳ್ಳಾಗಿರುತ್ತದೆ ಚುನಾವಣ ಗಿಮಿಕ್‍ಗಾಗಿ ಬೊಮ್ಮಾಯಿಯವರು ಈ ರೀತಿ ಮಾತಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಲಿಂಗಪ್ಪ, ದೇವಾನಂದ, ಮಾಜಿ ಜಿ.ಪಂ ಸದಸ್ಯ ಅಕ್ಕಿ ತೋಟೇಶ್, ಹೆಗ್ಡಾಳ್ ರಾಮಣ್ಣ, ಹುಡೇದ ಗುರುಬಸವರಾಜ, ಕನ್ನಿಹಳ್ಳಿ ಚಂದ್ರಶೇಖರ, ವಕೀಲ ಸತ್ಯನಾರಾಯಣ, ಚಿಮ್ನಳ್ಳಿ ಪ್ರಕಾಶ್, ಪುರಸಭೆ ಸದಸ್ಯ ಡಿಶ್ ಮಂಜುನಾಥ, ಜೋಗಿ ಹನುಮಂತ, ಬಾಲಕೃಷ್ಣ ಬಾಬು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ