ರಾಣಿಬೆನ್ನೂರ:
ಧಾರವಾಡದ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕಿನ ಕಾಕೋಳ ಗ್ರಾಮದ ಬಸನಗೌಡ ಈಶ್ವರಗೌಡ ಪಾಟೀಲ ಅವರು ಆಯ್ಕೆಯಾಗಿದ್ದಕ್ಕೆ, ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಸೋಮವಾರ ಬಸನಗೌಡ್ರವರನ್ನು ಸನ್ಮಾನಿಸಿ ಗೌರವಿಸಿದರು.
ತಾಪಂ ಸದಸ್ಯರಾಗಿ ಹಾಗೂ ಕಾಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಬಸನಗೌಡ್ರರವರ ಆಯ್ಕೆಯಿಂದ ಕಾಂಗ್ರೆಸ್ಗೆ ಇದೀಗ ಹೆಚ್ಚಿನ ಬಲ ಬಂದಂತಾಗಿದೆ ಎಂದು ಕೋಳಿವಾಡರು ಅಭಿಪ್ರಾಯಪಟ್ಟರು.
ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಜೈನ್, ಶೇಖಪ್ಪ ಹೊಸಗೌಡ್ರ, ಇಕ್ಬಾಲ್ಸಾಬ್ ರಾಣೇಬೆನ್ನೂರ, ಬಸಣ್ಣ ಮರದ, ಕೃಷ್ಣಪ್ಪ ಕಂಬಳಿ, ಮಧು ಕೋಳಿವಾಡ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ