ಎಂ ಎನ್ ಕೋಟೆ :
ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಬಾಳೆ ಬೆಳೆಗಾರರಿಗೆ ಬಾಳೆ ರೋಗದಿಂದ ತತ್ತರಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಳೆ ಬೆಳೆಯುವ ಹೆಸರು ತಾಲ್ಲೂಕಿಗಿದ್ದರೂ ರೋಗದ ಹಾವಳಿ ಕೆಲ ರೈತರರನ್ನು ಬಾಳೆ ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಪನಾಮ ಸೊರಗು ರೋಗ , ಎಲೆಚುಕ್ಕಿರೋಗ ತಾಲ್ಲೂಕಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಎಂ ಎನ್ ಕೋಟೆ , ಎಸ್ ಕೋಡಗಿಹಳ್ಳಿ , ಮಾವಿನಹಳ್ಳಿ , ಕಾಳೇನಹಳ್ಳಿ , ನಿಟ್ಟೂರು ಹೋಬಳಿ ಸುತ್ತಮುತ್ತ ರೈತರು ಬೆಳೆದ ಬಾಳೆಗೆ ಪನಾಮ ಸೊರಗು ರೋಗ ದಾಳಿಯಿಟ್ಟಿದೆ, ಸಿ ಎಸ್ ಪುರ , ಕೆಜಿ ಟೆಂಪಲ್ , ಕುನ್ನಾಲ , ಗ್ರಾಮಗಳಲ್ಲಿ ಎಲೆಚುಕ್ಕಿ ರೋಗ ಅಧಿಕವಾಗಿದೆ. ಗುಬ್ಬಿ ತಾಲ್ಲೂಕಿನ ಹಲಸಿನನಾಗೇನಹಳ್ಳಿ ಗ್ರಾಮದ ರೈತ ಹರೀಶ್ ಇದೇ ಮೊದಲ ಭಾರಿಗೆ ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದಾರೆ.ಸ್ಕಿಪ್ಪರ್ ಬಟರ್ ಪ್ಲೈ ಹುಳುಗಳು ಬಾಳೆಯ ಎಲೆಯ ರೆಕ್ಕೆಗಳನ್ನು ತಿನ್ನುತ್ತಿರುವುದು ಕಾಣಿಸಿಕೊಂಡಿದೆ. ಅತಿ ವೇಗವಾಗಿ ಬಾಳೆ ಎಲೆಗಳನ್ನು ಈ ಹುಳುಗಳು ತಿನ್ನುತ್ತಿರುವುದರಿಂದ ಎಂ ಎನ್ ಕೋಟೆ ಗ್ರಾಮದ ಸುತ್ತಮುತ್ತ ಬಾಳೆ ಬೆಳೆಯುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಮಣ್ಣಿನಿಂದ ಹರಡುವ ಶಿಲೀಂದ್ರ ರೋಗ ಶೀತದ ವಾತಾವರಣದಿಂದ ಕಾಣಿಸಿಕೊಳ್ಳುತ್ತಿದೆ.ಆದಸದರಿಂದ ನೀರನ್ನು ಯಥೇಚ್ಛವಾಗಿ ಹಾಯಿಸುವುದರಿಂದ ಎಲೆಚುಕ್ಕೆ ರೋಗವೂ ಉಲ್ಫಣವಾಗುತ್ತದೆ. ಹೆಚ್ಚಾಗಿ ನೀರು ಹಾಯಿಸುವ ಬದಲು ಹದವರಿದು ನೀರು ಕೊಟ್ಟರೆ ಬಾಳೆ ಉಳಿಸಿಕೊಳ್ಳಬಹುದು ಎನ್ನುತ್ತಾರೆ ಬಾಳೆ ಬೆಳೆಯುತ್ತಿರುವ ಕಳಸನಹಳ್ಳಿ ಚಿಕ್ಕಿಗೌಡ್ರು . ರೈತರ ಸಮರ್ಪಕ ಮಾರ್ಗದರ್ಶನ ತೋಟಗಾರಿಕೆ ಇಲಾಖೆಯಿಂದ ಸಿಗುತ್ತಿಲ್ಲ ಎನ್ನುವ ಆರೋಪವೂ ರೈತರಿಂದ ಕೇಳಿ ಬರುತ್ತಿದೆ. ಬಾಳೆ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡುವಲ್ಲಿ ತಾರತಮ್ಯ ಎಸಗುತ್ತಿದ್ದಾರೆ.ಪ್ರತಿವರ್ಷ ಪ್ರೋತ್ಸಾಹ ಧನ ಪಡೆದವರಿಗೆ ನೀಡುತ್ತಿದ್ದಾರೆ,ನಮ್ಮನ್ನು ಪರಿಗಣಿಸುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ರೈತ ಹರೀಶ್ ಮಾತನಾಡಿ ಇದೇ ಮೊದಲ ಭಾರಿಗೆ ನಮ್ಮ ತೋಟದಲ್ಲಿ ಬಾಳೆಯನ್ನು ಬೆಳೆಯಲಾಗಿದೆ,ಬಿಳಿ ಬಣ್ಣದ ಹುಳುಗಳು ಬಾಳೆಯ ರೆಕ್ಕೆಗಳನ್ನು ತಿನ್ನುತ್ತಿವೆಇದಕ್ಕೆ ಪರಿಹಾರವನ್ನು ತೋಟಗಾರಿಕೆ ಇಲಾಖೆಯವರು ನೀಡಿದರೆ ಬೆಳೆ ಬೆಳೆಯುವದನ್ನು ಪ್ರೋತ್ಸಾಹಿದಂತಾಗುತ್ತದೆ.
ತೋಟಗಾರಿಕೆ ಇಲಾಖೆಯ ತಾಂತ್ರಿಕ ಅಧಿಕಾರಿ ರಾಘವೇಂದ್ರ ಮಾತನಾಡಿ ಲೀಟರ್ ನೀರಿಗೆ ಕಾರ್ಬನ್ ಡೆಂಜಿಯಂಯ್ ಔಷಧವನ್ನು 2 ಗ್ರಾಂ ಬೆರೆಸಿ ಎಲೆ ಚುಕ್ಕೆ ರೊಗ ಇರುವ ಬಾಳೆ ಗಿಡಕ್ಕೆ ಸಿಂಪಡಣೆ ಮಾಡಬೇಕು. ಪನಾಮ ಸೊರಗು ರೋಗ ಇರುವ ಬಾಳೆ ಗಿಡದ ಬುಡಕ್ಕೆ ಇದೇ ಔಷಧಿಯನ್ನು ಈ ಮೇಲಿನ ಪ್ರಮಾಣದಲ್ಲಿಯೇ ಸುರಿಯಬೇಕು, ಸ್ಕಿಪ್ಪರ್ ಬಟರ್ ಪ್ಲೈ ಕೀಟಗಳು ಕಾಣಿಸಿಕೊಂಡರೆ ಪಕ್ಷಿಗಳು ಬರುವಂತಹ ವಾತಾವರಣ ನಿರ್ಮಿಸಬೇಕು.ಅಥವಾ ಕ್ಲೋರೋಫೈರಿಪಾಸ್ ಔಷಧವನ್ನು 1 ಎಂಎಲ್ ಲೆಕ್ಕದಲ್ಲಿ ಪ್ರತಿ ಲೀಟರ್ ಗೆ ಬೆರೆಸಿ ಸಿಂಪಡಣೆ ಮಾಡಿದರೆ ರೋಗಗಳಿಂದ ಬಾಳೆಯನ್ನು ರಕ್ಷಿಸಬಹುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
