ಶಿವಮೊಗ್ಗ:
ನಾನು ಅಧಿಕಾರದಲ್ಲಿದ್ದಾಗ ನನ್ನ ಕೊಲೆಗೆ ಬಿಜೆಪಿ ನಾಯಕರೇ ಸುಪಾರಿ ನೀಡಿದ್ದರು. ಆ ಮೇಲೆ ಬಿಜೆಪಿ ನಾಯಕರೇ ಸುಪಾರಿ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದರು. ಎಂದು ಬಿಜೆಪಿ ನಾಯಕರ ಹೆಸರು ಹೇಳದೆ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಸಿಎಂ ಹೆಚ್ಡಿಕೆ, ‘ಆವತ್ತು ನಾನು ಗಣಿ ಮಾಲೀಕರ ಬಳಿ 150 ಕೋಟಿ ಹಣ ಪಡೆದಿದ್ದೆ ಎಂದು ನನ್ನ ಸಂಪುಟದಲ್ಲಿ ಇದ್ದ ಬಳ್ಳಾರಿಯ ವಿಧಾನ ಪರಿಷತ್ ಸದಸ್ಯರೊಬ್ಬರು ಆರೋಪ ಮಾಡಿದ್ದರಲ್ಲಾ , ಯಡಿಯೂರಪ್ಪನವರೆ ಅದರ ಬಗ್ಗೆ ಚರ್ಚೆ ಮಾಡಿದ್ದೀರಾ ? ನನಗೆ ರಕ್ಷಣೆ ಕೊಡಲು ಬಂದಿರಾ’ ಎಂದು ಪ್ರಶ್ನಿಸಿದರು.
‘ 2005 ರಲ್ಲಿ ಜೆಡಿಎಸ್ – ಬಿಜೆಪಿ 20-20 ಮಾಡಿಕೊಂಡ ವೇಳೆ ಮೋಸ ಮಾಡಿದ್ದೇನೆ ಎನ್ನುತ್ತೀರಲ್ಲಾ, ಆವತ್ತೇ ನೀವು ನನ್ನನ್ನು ಮುಗಿಸಲು ಯೋಜನೆ ಮಾಡಿದ್ದೀರಲ್ಲಾ’ ಎಂದರು.
‘ನನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ನನ್ನದೇ ಸಂಪುಟದಲ್ಲಿದ್ದ ಬಿಜೆಪಿ ನಾಯಕರು (ಬಿ.ಶ್ರೀರಾಮುಲು) ಆರೋಪ ಮಾಡಿದ್ದರಲ್ಲಾ, ಆವಾಗ ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆಯುವಾಗ ಯಡಿಯೂರಪ್ಪ ಎಲ್ಲಿ ಕುಳಿತಿದ್ದರು, ಆ ಬಗ್ಗೆ ಏನಾದರು ಚರ್ಚೆ ನಡೆಸಿದ್ದರಾ’ ಎಂದು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ