ಚಂದ್ರಬಾಬುಗೆ ಟಾಂಗ್ ನೀಡಿದ ಸದಾನಂದಗೌಡ

ಬೆಂಗಳೂರು:

    ಯಾರಿಗೆ ನಾವು ಸೋಲುತ್ತೇವೆ ಎಂಬ ಭಯ ಇರುತ್ತದೇಯೋ ಅವರೆಲ್ಲ ತಿರುಗಾಡಲೇ ಬೇಕು. ಈ ಕಾರಣದಿಂದಾಗಿ ಎಲ್ಲಾ ಕಡೆ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಗಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ .

    ನಾಯ್ಡು ಅವರನ್ನು ಆಂಧ್ರದ ಜನರು ನಂಬುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಅವರು ಈ ಬಾರಿ ಸೋಲುವುದು ಖಚಿತ. ಈ ಮೂಲಕ ಔಟ್ ಆಫ್ ಪವರ್ ಆಗುತ್ತಾರೆ. ಸಿಎಂ ಕುಮಾರಸ್ವಾಮಿ ಹಾಗೂ ಚಂದ್ರಬಾಬು ನಾಯ್ಡು ಸಮಾನ ಮನಸ್ಕರು. ತಮ್ಮ ಪವರ್ ಹೋಗುತ್ತೆ ಅಂತ ಕುಮಾರಸ್ವಾಮಿಯವರು ಈಗಾಗಲೇ ನಿಶ್ಚಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

   ಮೈತ್ರಿ ಸರ್ಕಾರದ ಸದ್ಯದ ಪರಿಸ್ಥಿತಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾಳೆ ಸಾಯಂಕಾಲದವರೆಗೂ ಮಾತ್ರ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ಗರಿಷ್ಠ ಎಂದರೆ ನಾಡಿದ್ದು ಬೆಳಗ್ಗೆವರಗೆ ಮಾತ್ರ ಎಂದು ಭವಿಷ್ಯ ನುಡಿದಿದ್ದಾರೆ .ಮೇ 24ರಂದು ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಇನ್ನು ಹೊಸ ಸರ್ಕಾರ ರಚನೆಗೆ ನಾವು ಸಿದ್ಧತೆ ಮಾಡಿಕೊಳ್ಳ ಬೇಕಾಗಿದೆ. ಶೇಕಡಾ ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ನುಡಿದಿದ್ದಾರೆ.

   ಸತ್ಯ ಮಡಿಲಲ್ಲಿ ಇರುವ ಕೆಂಡದಂತೆ ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಮಾಜಿ ಸಚಿವ ರೋಷನ್ ಬೇಗ್ ಸತ್ಯ ಹೇಳಿದ್ದಾರೆ. ಕಾಂಗ್ರೆಸ್‍ನ ಕೆಲವರ ಒತ್ತಡಕ್ಕೆ ಸಹಿಸಿಕೊಂಡು ಸಾಕಾಗಿತ್ತು. ಹೀಗಾಗಿ ಎಲ್ಲವನ್ನೂ ಹೊರಹಾಕಿದ್ದಾರೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap