ಬಯಲು ಶೌಚಾಲಯ ಮುಕ್ತ ಘೋಷಣೆಯನ್ನು ಗುತ್ತಲ ಪಟ್ಟಣ ಮರೆತಂತೆ ಕಾಣುತ್ತಿದೆ

ಗುತ್ತಲ:

      ಬಯಲು ಶೌಚಾಲಯ ಮುಕ್ತ ಘೋಷಣೆ ಗುತ್ತಲ ಪಟ್ಟಣವನ್ನು ಮರೆತಂತೆ ಕಾಣುತ್ತಿದೆ. ಇದಕ್ಕೆ ನೈಜ ಉದಾಹರಣೆಯೇ ಇಲ್ಲಿ ಕಾಣುವ ಸಾರ್ವಜನಿಕ ಶೌಚಾಲಯಗಳು ಸುಮಾರು ವರ್ಷಗಳ ಹಿಂದೆ ನಿರ್ಮಿಸಲಾದರು ಇದ್ದು ಇಲ್ಲದಂತಾಗಿರುವುದು.

        ಪಟ್ಟಣದಲ್ಲಿ ಮಾತ್ರ ಸಾರ್ವಜನಿಕ ಶೌಚಾಲಯಗಳು ಈವರೆಗೂ ಒಂದು ಕೂಡಾ ನಿರ್ಮಾಣವಾಗಿಲ್ಲಾ. ಇದರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಬಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

       ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಸ್ವಚ್ಛ ಭಾತರ ಮಿಶನ್ ಎಂಬ ಯೋಜನೆ ಅಡಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿ ತಂದರು ಗುತ್ತಲ ಪಟ್ಟಣಕ್ಕೆ ಮಾತ್ರ ಇದರ ಪರಿಜ್ಞಾನವಿಲ್ಲದಂತಾಗಿದೆ. ಪಟ್ಟಣ ಪಂಚಾಯಿತಿಯ ಪಕ್ಕದ ರಸ್ತೆ ಮುಖಾಂತರವಾಗಿ ಕಾಲೇಜಿಗೆ ತೆರಳುವ ಮತ್ತು ಸಾರ್ವಜನಿಕರು ಒಡಾಡುವ ರಸ್ತೆಯಿದ್ದರು ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಸಾರ್ವಜನಿಕರು ರಸ್ತೆಯ ಪಕ್ಕದಲ್ಲೆಯೇ ಮೂತ್ರವಿಸರ್ಜನೆ ಮಾಡುವುದು ಅನಿವಾರ್ಯವಾಗಿದೆ, ಇದರಿಂದ ಅಲ್ಲಿಯ ಅಕ್ಕ ಪಕ್ಕದ ನಿವಾಸಿಗಳು ದುರ್ರವಾಸನೆಯಲ್ಲಿ ಜೀವನ ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

        ಪ.ಪಂ ಇದರಿಂದ ಹೊರತೆನಿಲ್ಲಾ: ದಿನ ಬೆಳಗಾದರೆ ಸಾಕು ಸಾರ್ವಜನಿಕರು ಬಂದು ಹೋಗುವ ಪಟ್ಟಣ ಪಂಚಾಯಿತಿಯು ಈ ಸಮಸ್ಯೆಯಿಂದ ಹೊರತಾಗಿಲ್ಲಾ. ಅಲ್ಲಿರುವ ಶೌಚಾಲಯ ಕೇವಲ ಸಿಬ್ಬಂದಿಗೆ ಮಾತ್ರ ಸಿಮೀತವಾಗಿದೆ. ಅಲ್ಲಿಗೆ ಬರುವ ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಗೋಡೆಯ ಪಕ್ಕದಲ್ಲಿ ಮೂತ್ರವಿಸರ್ಜನೆ ಮಾಡುವ ಪರಿಸ್ಥಿತಿ ನಿರ್ಮಾಣವಿದೆ. ಸ್ವಚ್ಛತೆಯ ಸಂಕೇತ ಸಾರುವ ಪ.ಪಂ ಕಾರ್ಯಲಯವೇ ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವಾಗ ಸಾರ್ವಜನಿಕರ ಗೋಳು ಕೇಳುವವರಾರು ಎಂಬುದು ಪ್ರಜ್ಞಾವಂತರನ್ನು ಕಾಡುವ ಪ್ರಶ್ನೆಯಾಗಿದೆ.

        ಒಟ್ಟು ಸಾರ್ವಜನಿಕ ಶೌಚಾಲಯಗಳು ಮೂರು: ಪಟ್ಟಣದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಲಾದ ಶೌಚಾಲಯಗಳು ಮೂರು ಅದರಲ್ಲಿ ಬಳಕೆ ಇರುವುದು ಮಾತ್ರ ಬಸ್ಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯ ಮಾತ್ರ. ಇನ್ನೂಳಿದ ಎರಡರಲ್ಲಿ ಒಂದು ಶೌಚಾಲಯ ಕಟ್ಟಡ ಮುಳ್ಳುಕಂಟೆಯ ಮಧ್ಯಯೇ ಮುಚ್ಚಿ ಹೋಗಿದೆ. ಇನ್ನೊಂದು ಸೂಕ್ತ ರೀತಿಯಲ್ಲಿ ಬಳಕೆಯಾಗದೇ ಕಸದ ತಿಪ್ಪೆಯಂತಾಗಿದೆ. ಇದನ್ನು ಕಂಡ ಸಾರ್ವಜನಿಕರು ಇತರೆ ಪ್ರದೇಶಗಳಿಗೆ ಹೊಲಿಕೆ ಮಾಡಿ ನೋಡಿದರೆ ಗುತ್ತಲ ಪಟ್ಟಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

        ಬಯಲು ಶೌಚಾಲಯ ಮುಕ್ತ ಕನಸು ನನಸು ಆಗುವುದಾ?: ಸರಕಾರದ ಬಯಲು ಶೌಚಾಲಯ ಮುಕ್ತ ಮಾಡುವು ಕನಸು ನನಸಾಗುದು ಯಾವಾಗ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡದ ಪಟ್ಟಣ ಪಂಚಾಯಿತಿ ಇನ್ನು ಸರಕಾರದ ಯೋಜನೆಯ ಕುರಿತು ಯೋಚನೆಯನ್ನು ಮಾಡಿದಂತೆ ಕಾಣುತ್ತಿಲ್ಲಾ.

       ಪಟ್ಟಣದಲ್ಲಿ ಹಳೆಯ ಶೌಚಾಲಯ ಸ್ವಚ್ಛಗೊಳಿಸುವರಾ? ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರ ಹೇಳಿಕೊಳ್ಳಲಾಗದ ಸಮಸ್ಯೆಯಲ್ಲಿ ಒಂದಾದ ಬಯಲು ಶೌಚಾಲಯವನ್ನು ನೂತನವಾಗಿ ನಿರ್ಮಾಣ ಮಾಡದಿದ್ದರು ಪರವಾಗಿಲ್ಲಾ, ಇರುವ ಹಳೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ನೆಮ್ಮದಿ ತರುವಂತ ಕೆಲಸವನ್ನು ಜನಪ್ರತಿನಿಧಿಗಳು ಹಾಗೂ ಸಂಬಂದಪಟ್ಟ ಅಧಿಕಾರಿಗಳು ಮಾಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

      ಸಾರ್ವಜನಿಕ ಶೌಚಾಲಯಗಳ ಅವಶ್ಯಕತೆ ಇರುವುದು ಅರಿತು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಲಾಗಿದ್ದು, ಸೂಕ್ತ ಸ್ಥಳಗಳನ್ನು ಗುರುತಿಸಿ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ರಮೇಶ ಮಠದ ಪಟ್ಟಣ ಪಂಚಾಯಿತಿ ಸದಸ್ಯ
ಬಾಕ್ಸ..ದೂರದ ಪ್ರದೇಶಗಳಿಗೆ ತೆರಳಿ ಸಂತೆ ಮತ್ತು ಇತರೆ ವಸ್ತುಗಳನ್ನು ಖರೀದಿಸುವುದು ಕಷ್ಟದ ಸಂಗತಿಯಾಗಿತ್ತು, ಗುತ್ತಲ ಪಟ್ಟಣ ಪ್ರದೇಶದಲ್ಲಿ ಎಲ್ಲಾ ಸೌಲಭ್ಯ ದೊರೆಯುತ್ತಿರುವುದು ಖುಷಿಯ ವಿಷಯವಾದರು, ಇಲ್ಲಿಗೆ ಬರುವವರಿಗೆ ಮಾತ್ರ ಸಾರ್ವಜನಿಕ ಶೌಚಾಲಯದ ಕೊರತೆ ಎದ್ದು ಕಾಣುತ್ತಿದೆ, ಇಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಾಣುವಂತಾಗಲಿ.ಶೇಖರ ನರಸಣ್ಣನವರ ಜೆಡಿಎಸ್ ರಾಜ್ಯ ಸಹಕಾರ್ಯದರ್ಶಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link