ಮಧುಗಿರಿ
ತುಮಕೂರು ಜಿಲ್ಲಾ ದಿನ ಪತ್ರಿಕೆ ಹಂಚಿಕೆದಾರರ ಸಂಘದ ಅಡಿಯಲ್ಲಿ ಮಧುಗಿರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶೇಷನಾಯ್ಕ್‍ರವರನ್ನು ಜಿಲ್ಲಾಧ್ಯಕ್ಷ ಚೆಲುವರಾಜು ಆಯ್ಕೆ ಮಾಡಿದ್ದು, ಉಪಾಧ್ಯಕ್ಷರಾಗಿ ಐ ಡಿ ಹಳ್ಳಿಯ ಸುರೇಶ್, ಕಾರ್ಯದರ್ಶಿ ಚಿರಂಜೀವಿ ಎಂ.ಎನ್, ಸಹ ಕಾರ್ಯದರ್ಶಿ ಹೊಸಕೆರೆಯ ಗೋವಿಂದರಾಜ ಆರ್., ಸಂಘಟನಾ ಕಾರ್ಯದರ್ಶಿಯಾಗಿ ರಘು, ನಿರ್ದೇಶಕರಾಗಿ ಆಸೀಫ್, ವೆಂಕಟೇಶ್ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ವಿವಿಧ ಪತ್ರಿಕೆಗಳ ಹಂಚಿಕೆಯ ಕಾರ್ಯದಲ್ಲಿ ತೊಡಗಿರುವವರನ್ನು ಗುರುತಿಸಿ, ಸಂಘದ ಸದಸ್ಯತ್ವ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶೇಷಾನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
