ವಚನಗಳು ಬದುಕಿಗೆ ದಾರಿದೀಪ : ಸಂಗೀತ ವಿದ್ವಾನ್ ತಿಪ್ಪೇಸ್ವಾಮಿ

ಹಿರಿಯೂರು :-

      ಸುಮಾರು 12ನೇ ಶತಮಾನದಲ್ಲಿ ನವಸಮಾಜ ನಿರ್ಮಾಣಕ್ಕೆ ವಚನಗಳು ಸ್ಪೂರ್ತಿಯಾಗಿದ್ದು, ಸರ್ವ ಜನಾಂಗದ ಬದುಕಿಗೆ ದಾರಿ ದೀಪವಾಗಿವೆ ಎಂದು ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ ಹೇಳಿದರು.

     ನಗರದ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಿತ್ರದುರ್ಗ, ಜೀವನ್ಮುಖಿ ಟ್ರಸ್ಟ್, ಚಿತ್ರದುರ್ಗ, ಕಲರವ ಸಾಂಸ್ಕøತಿಕ ಕಲಾಸಂಘ, ಚಿತ್ರದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಚನ ಸಂಗೀತ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಭಾಟಿಸಿ ಅವರು ಮಾತನಾಡಿದರು.

      ಸಮಾಜದಲ್ಲಿರುವ ಅಸಮಾನತೆ, ಮೂಢನಂಬಿಕೆ, ಕಂದಾಚಾರ, ಲಿಂಗತಾರತಮ್ಯ ಹೋಗಲಾಡಿಸಲು ವಚನಗಳು ಸ್ಪೂರ್ತಿಯಾದವು, ವಿಶ್ವಗುರು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ, ಮಾದರ ಚನ್ನಯ್ಯ, ಚನ್ನಬಸವಣ್ಣ, ಉರಿಲಿಂಗಪೆದ್ದಿ, ಆಯ್ದಕ್ಕಿಲಕ್ಕಮ್ಮ ಇವರುಗಳ ವಚನಗಳು ಸಮಾಜದ ಬದಲಾವಣೆಗೆ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ನಾಂದಿಯಾದವು ಎಂದು ಹೇಳಿದರು.

     ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಗೌರವಾಧ್ಯಕ್ಷರಾದ ಶ್ರೀಧರ್ ಮಾತನಾಡಿ, ಶರಣರ ವಚನಗಳು, ದಾಸರ ಕೀರ್ತನೆಗಳು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿತು, ವಚನ ಸಾಹಿತ್ಯ ಅಧ್ಯಯನದಿಂದ ಬದುಕಿನಲ್ಲಿ ಶಿಸ್ತು, ಸಂಯಮ, ತಾಳ್ಮೆ, ಏಕತೆ ಮೂಡಿ ಒಳ್ಳೆಯ ಚಿಂತನೆಗೆ ಒಳ್ಳೆಯ ನಡತೆಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

      ಎಸ್.ಜಿ.ರಂಗಸ್ವಾಮಿ ಮತ್ತು ತಂಡ, ಸಕ್ಕರ ಇವರು ವಚನ ಸಂಗೀತ ಸಾಂಸ್ಕತಿಕ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು .ಕಾರ್ಯಕ್ರಮದಲ್ಲಿ ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಉಪಾಧ್ಯಕ್ಷರಾದ ಪಿ.ಎಂ.ತಿಪ್ಪೇಸ್ವಾಮಿ, ತಾಲ್ಲೂಕು ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ನಾಗಸುಂದರಮ್ಮ ಸುಬ್ಬಣ್ಣಶೆಟ್ಟಿ, ಸ್ಕೌಟ್ಸ್& ಗೈಡ್ಸ್‍ನ ತಾಲ್ಲೂಕು ಉಪಾಧ್ಯಕ್ಷರಾದ ಉಮಾರಾಜಶೇಖರ್, ತಾಲ್ಲೂಕು ಜಾನಪದ ಪರಿಷತ್ ಕಾರ್ಯದರ್ಶಿ ಹರ್ತಿಕೋಟೆ ಮಹಾಸ್ವಾಮಿ ಹಾರ್ಮೋನಿಯಂವಾದಕ ಎನ್.ಶಿವಲಿಂಗಪ್ಪ, ತಬಲವಾದಕ ಬಿ.ಎಸ್.ಅಭಿಷೇಕ್, ಎಂ.ಬಿ.ಲಿಂಗಪ್ಪ, ಶಿಕ್ಷಕರಾದ ಬಿ.ಟಿ.ಶಂಕರಲಿಂಗಯ್ಯ, ನಾಗರತ್ನಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap