ಮಹಿಳೆಯರಿಗೆ ಶಿಕ್ಷಣವೇ ಪ್ರಮುಖ ಅಸ್ತ್ರ :ಸತ್ಯಭಾಮ

ಚಿತ್ರದುರ್ಗ:

      ಮಹಿಳೆಯರು ಸಮಾಜದಲ್ಲಿ ಪುರುಷರಷ್ಟೆ ಸಮಾನವಾಗಿ ಬೆಳೆಯಬೇಕೆಂದರೆ ಅವರಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ. ಸತ್ಯಭಾಮ ಹೇಳಿದರು.ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಉನ್ನತಿಗಾಗಿ ಸಮಾನತೆ ಮತ್ತು ಲೈಂಗಿಕ ದೌರ್ಜನ್ಯ ತಡೆ ಹಾಗೂ ಸ್ವೀಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಗಂಡು ಮತ್ತು ಹೆಣ್ಣು ಎಂದು ಭೂಮಿ ಮೇಲೆ ಸೃಷ್ಠಿಯಾಗುವುದು ಪ್ರಕೃತಿ ಸಹಜ ನಿಯಮವಾಗಿದ್ದು, ನಾವು ಗಂಡು ಮೇಲು ಹೆಣ್ಣು ಕೀಳು ಎನ್ನುವುದು ತಪ್ಪು, ಸಮಾಜದಲ್ಲಿ ಕೆಲವು ಕುಟುಂಬಗಳಿಗೆ ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಇದು ತಪ್ಪು ಕಲ್ಪನೆಯಾಗಿದ್ದು, ಶಿಕ್ಷಣವೊಂದೇ ಇಂತಹ ಕಲ್ಪನೆಗಳಿಂದ ಹೊರಬರಲು ಮಾರ್ಗೋಪಾಯವಾಗಿದೆ. ಶಿಕ್ಷಣ ಪಡೆದರೆ ಅವರು ಸಮಾಜದಲ್ಲಿ ಉನ್ನತವಾದ ಉದ್ಯೋಗಳನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.

      ವಿದ್ಯಾರ್ಥಿಗಳು ಓದುವ ಸಮಯದಲ್ಲಿ ವ್ಯಾಸಂಗವನ್ನು ಮೊಟುಕುಗೊಳಿಸಬಾರದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕಾದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಪರಿಶ್ರಮ ಕೊಟ್ಟು ಪೂರ್ವ ತಯಾರಿಯೊಂದಿಗೆ ಪರೀಕ್ಷೆಗಳನ್ನು ಬರೆಯಬೇಕು. ಕೆಲವರು ಉದ್ಯೋಗಗಳಿಗೆ ಸಂಬಂಧಿಸಿದಂತೆ ಯಾವುದೆ ಉದ್ಯೋಗ ಪಡೆಯಬೇಕೆಂದರೆ ಲಕ್ಷಗಟ್ಟಲೆ ಹಣ ನೀಡಿದರೆ ಕೆಲಸ ಸಿಗುತ್ತೆ ಎಂಬುದಾಗಿ ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸುತ್ತಾರೆ. ಅಂತಹ ಗಾಳಿ ಸುದ್ದಿಗಳಿಗೆ ಕಿವಿಕೊಡದೆ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link