ಬಿಜೆಪಿಗೆ “ಕೈ” ಕೊಟ್ಟ ಸಂಜಯ್ ಶರ್ಮಾ

ಭೋಪಾಲ್: 

           ಶತಾಯ ಗತಾಯ  ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರು ಆಡಳಿತರೂಡ ಪಕ್ಷ ಬಿಜೆಪಿಗೆ ಅದರ ಶಾಸಕನೇ ಶಾಕ್ ಕೊಟ್ಟಿದ್ದಾರೆ .ಮಧ್ಯಪ್ರದೇಶದ ಬಿಜೆಪಿ ಶಾಸಕ ಸಂಜಯ್ ಶರ್ಮಾ ಪಕ್ಷ ತೊರೆದು ಕಾಂಗ್ರೆೆಸ್ ಸೇರ್ಪಡೆಯಾಗಿದ್ದಾರೆ.

           ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದೋರ್‌ನ ನಿವಾಸದಲ್ಲಿ ಸಂಜಯ್ ಶರ್ಮಾ ಕಾಂಗ್ರೆೆಸ್ ಸೇರ್ಪಡೆಯಾಗಿದ್ದಾರೆ. ನರಸಿಂಗ ಪುರ ಜಿಲ್ಲೆಯ ತೆಂಡುಕೇಡಾ ವಿಧಾನಸಭೆ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದ ಮಧ್ಯಪ್ರದೇಶದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ. 65 ಕೋಟಿ ರು ಆಸ್ತಿ ಘೋಷಿಸಿಕೊಂಡಿರುವ ಶರ್ಮಾ 2003 ಮತ್ತು 2013 ರಲ್ಲಿ ಆಯ್ಕೆಯಾಗಿದ್ದರು ಮತ್ತು ಇದರಿಂದ ಬಿಜೆಪಿಗೆ ದೊಡ್ಡ ಹೊಡೆತ ಬೀಳಬಹುದು ಎಂಬುದು ರಾಜಕೀಯ ವಿಶ್ಲೇಷಕರ ಮಾತು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link