ದಾವಣಗೆರೆ :
12 ನೇ ಶತಮಾನದಲ್ಲಿ ಶರಣ ನೀಡಿದ ವಚನಗಳೇ ನಮಗೆ ಬೈಬಲ್, ಕುರಾನ್ ಎಂದು ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ ತಿಳಿಸಿದರು.
ಇಲ್ಲಿನ ದೇವರಾಜ್ ಅರಸ್ ಬಡಾವಣೆಯ ಹಾಲಕೆರೆ ಅನ್ನದಾನೀಶ್ವರ ಶಾಖಾಮಠದಲ್ಲಿ ಏರ್ಪಡಿಸಿದ್ದ 218 ನೇ ಶಿವಾನುಭವ ಸಂಪದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಚನಕಾರರು ಸರಳ ಭಾಷೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಅಪಾರಕೊಡುಗೆ ನೀಡಿದ್ದಾರೆ. ವಚನಗಳು ನಮಗೆ ಜೀವನದ ಮಾರ್ಗದರ್ಶವಾಗಿವೆ. ಅವಿದ್ಯಾವಂತರ ಸಂಖ್ಯೆಯೇ ಹೆಚ್ಚಿರುವ 12 ನೇ ಶತಮಾನದಲ್ಲಿ ಅನುಭವಿ ಶರಣರು ಜಾತ್ಯತೀತವಾಗಿ ತಾರತಮ್ಯವಿಲ್ಲದೆ ವಚನಗಳನ್ನು ಬರೆದು, ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದರು.
ಇಂದು ವಚನಗಳು ವೇದಿಕೆಗೆ ಮಾತ್ರ ಸೀಮಿತವಾಗಿವೆ. ಜೀವನದಲ್ಲಿ ಅಳವಡಿಸಿಕೊಳ್ಳುವವರ ಸಂಖ್ಯೆಯೇ ಕಡಿಮೆಯಿದೆ. ಜೀವನದಲ್ಲಿ ಅಳವಡಿಸಿಕೊಂಡು ಮಾರ್ಗದರ್ಶನ ನೀಡುವವರ ಸಂಖ್ಯೆ ಬೆರಳಣಿಕೆಯಷ್ಟೆಯಿದೆ. ಶರಣರ ಹಾಕಿಕೊಟ್ಟ ಮಾರ್ಗದರ್ಶದಲ್ಲಿ ನಡೆದರೆ ಜೀವನ ಪರಿಶುದ್ದವಾಗುತ್ತದೆ. ವಚನಕಾರರು ವಚನಗಳ ಮೂಲಕ ಇಂದಿನ ಸಮಾಜಕ್ಕೆ ಅಂಕುಶಗಳನ್ನು ಬಿಟ್ಟು ಹೋಗಿದ್ದಾರೆ. ಇಂದಿನ ಜನತೆಗೆ ವಚನಗಳ ಸಾರವನ್ನು ತಿಳಿಸಿ ಜಾಗೃತರನ್ನಾಗಿ ಮಾಡಬೇಕಿದೆ ಎಂದು ತಿಳಿಸಿದರು.
ಪ್ರವಚನಗಾರ್ತಿ ಟಿ.ಎಚ್.ಎಂ.ಗೌರಮ್ಮ ಮಾತನಾಡಿ, ಪ್ರಸ್ತುತ ಮನುಷ್ಯನಲ್ಲಿ ಸಮಯ ಪ್ರಜ್ಞೆ ಇಲ್ಲದಾಗಿದೆ. ಪ್ರತಿಯೊಬ್ಬರು ಮೊಬೈಲ್ ಬಳಕೆಯಿಂದ ಸ್ವಂತಿಕೆ ಕಳೆದುಕೊಳ್ಳುತ್ತಿದ್ದಾನೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಅನ್ನದಾನೀಶ್ವರ ಸಂಸ್ಥಾನದ ನಿಯೋಜಿತ ಗುರುಗಳಾದ ಶ್ರೀಮುಪ್ಪಿನ ಬಸವಲಿಂಗದೇವರು, ಸಮಾನತೆ ಸಾರಿದ ಬಸವಣ್ಣನವರ ವಚನಗಳನ್ನು ಹೇಳಿಕೊಂಡು ದಾರಿ ತಪ್ಪಿಸುವವರು ಇದ್ದಾರೆ. ಅಂತಹವರಿಂದ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.
ವಕೀಲರ ಸಂಘದ ಕಾರ್ಯದರ್ಶಿ ಬಿ.ಎಸ್.ಲಿಂಗರಾಜ್, ಟ್ರಸ್ಟ್‍ನ ಹಿರಿಯ ಸದಸ್ಯ ಅಮರಯ್ಯ ಗುರುವಿನಮಠ ಅಧ್ಯಕ್ಷತೆ ವಹಿಸಿದ್ದರು. . ಟ್ರಸ್ಟ್ ಕಾರ್ಯದರ್ಶಿ ಎನ್.ಅಡಿವೆಪ್ಪ. ಕಲ್ಲೇಶ, ನಿವೃತ್ತ ಪಿಡಬ್ಲೂಡಿ ಅಧಿಕಾರಿ ಚಂದ್ರಯ್ಯ, ನಿವೃತ್ತ ಶಿಕ್ಷಕಿ ಪ್ರೇಮಾ, ವೇದಿಕೆಯಲ್ಲಿದ್ದರು. ಟಿಎಚ್‍ಎಂ ಶಿವಕುಮಾರ್‍ಸ್ವಾಮಿ ಸಂಗಡಿಗರು ಪ್ರಾರ್ಥಿಸಿದರು. ಇಂದಿನ ಸುದ್ದಿ ಸಂಪಾದಕ ವೀರಪ್ಪ ಎಂ.ಬಾವಿ ಸ್ವಾಗತಿಸಿದರು. ಶ್ರೀಮತಿ ಖುಷಿ ಅವರು ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
