ಬರದನಾಡಿನ ಜಾನುವಾರುಗಳ ಪೊಷಣೆಗಾಗಿ ಎರೆಡು ಗೋಶಾಲೆ ಪ್ರಾರಂಭ: ಹುಲ್ಲುಮನಿ ತಿಮ್ಮಣ್ಣ

ಜಗಳೂರು:

      ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಜಾನುವಾರುಗಳಿಗೆ ಗೋಶಾಲೆಯು ಮೂಲಕ ಸಮರ್ಪಕ ಮೇವು,ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಹೇಳಿದರು.

     ತಾಲೂಕಿನ ಕೊಣಚಗಲ್ ಗುಡ್ಡದಲ್ಲಿ ನೂತನವಾಗಿ ಆರಂಭಿಸಿರುವ 2ನೇ ಗೋಶಾಲೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂಗಾರು ಮಳೆ ಬರುವವವರಿಗೆ ಸಮರ್ಪಕ ಬರನಿರ್ವಹಣೆ ಮಾಡಲಾಗುತ್ತಿದೆ. ಜನಜಾನುವಾರುಗಳಿಗೆ ತೊಂದರೆಯಾಗದಂತೆ ನೀರಿನ ವ್ಯವಸ್ಥೆ,ಹಾಗೂ ಗೊಶಾಲೆ ತೆರೆದು ಉಚಿತವಾಗಿ ಮೇವು ಒದಗಿಸಲಾಗುತ್ತಿದ್ದು, ರೈತರು ತಮ್ಮ ರಾಸುಗಳನ್ನು ಕರೆತಂದು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ತಾಲೂಕಿನ ಗುರುಸಿದ್ದಾಪುರ,ಹಾಗೂ ಕೊಣಚಗಲ್ ಗುಡ್ಡಗಳಲ್ಲಿ ಅಗತ್ಯ ಸೌಕರ್ಯಗಳಾದ ನೀರು,ನೆರಳು ಸಾಕಷ್ಟಿದ್ದು ಗೋಶಾಲೆಗೆ ಬರುವ ಜಾನುವಾರುಗಳಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭವಾಗಿ ಸಂಜೆ 6 ಗಂಟೆಯವರೆಗೂ ಮೇವು ಪೂರೈಕೆಮಾಡಲಾಗುತ್ತಿದೆ. ಗಣನೀಯವಾಗಿ ಸಮೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಕರೆತರುತ್ತಿದ್ದು ಸಂಗ್ರಹಣೆಗಿಂತ ಹೆಚ್ಚು ಮೇವಿನ ಅಗತ್ಯವಿದೆ ಆದ್ದರಿಂದ ಕೂಡಲೆ ಹೆಚ್ಚುವರಿ ಮೇವು ಆಮದು ಮಾಡಿಕೊಂಡು ಮುಂಗಡವಾಗಿ 8ರಿಂದ 10 ಲೋಡ್ ಸಂಗ್ರಹಣೆಗಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

      ಪ್ರತಿನಿತ್ಯ 2 ಗೋಶಾಲೆಗಳನ್ನೊಳಗೊಂಡಂತೆ ಸುಮಾರು 6 ನೂರಕ್ಕೂ ಹೆಚ್ಚು ಜಾನುವಾರುಗಳು ಗೋಶಾಲೆಗೆ ಆಗಮಿಸಿ ಸೌಲಭ್ಯಪಡೆದುಕೊಳ್ಳುತ್ತಿವೆ. ಒಂದು ರಾಸುವಿಗೆ 8ರಿಂದ 10 ಕೆಜಿ ಮೇವು ಒದಗಿಸಲಾಗುತ್ತಿದೆ. ವಿನಾಕಾರಣ ಮೇವು ತ್ಯಾಜ್ಯವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

        ತಾಲೂಕಿನ ತೊರೆಸಾಲು ಭಾಗದಲ್ಲಿನ ಜಾನುವಾರುಗಳಿಗೆ ಕೊಣಚಗಲ್,ಹಾಗೂ ಗುರುಸಿದ್ದಾಪುರ ಗೋಶಾಲೆಗಳು ಸಾಕಷ್ಟು ದೂರವಾಗುತ್ತಿದ್ದು ಸ್ಥಳಿಯವಾಗಿ ಹಿರೆಮಲ್ಲನಹೊಳೆ ಭಾಗದಲ್ಲಿ ಮತ್ತೊಂದು ಮೇವುಸಂಗ್ರಹಣಾ ಕೇಂದ್ರ ತೆರೆಯಬೇಕೆಂಬ ಬೇಡಿಕೆಯನ್ನು ರೈತರು ಗಮನಕ್ಕೆ ತಂದಿದ್ದು, ಸದ್ಯದಲ್ಲಿಯೆ ಸಂಚಾರಿ ಮೇವು ವಿತರಣೆಯ ಕೇಂದ್ರಕ್ಕೆ ಸ್ಥಳ ಪರಿಶೀಲನೆ ನಡೆಸಿ ಶೀಘ್ರದಲ್ಲಿಯೆ ಮೇವಿನ ಪೂರೈಕೆಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

       ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಂಗಪ್ಪ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ್ ,ಪೊಲೀಸ್ ಸಿಬ್ಬಂದಿ ಸೇರಿದಂತೆ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link