ಕನ್ನಡ ನಾಡು ನುಡಿ ರಕ್ಷಣೆಗಾಗಿ ನಾವೆಲ್ಲರೂ ಕನ್ನಡ ತಾಯಿಯ ಸೇವೆ ಮಾಡಬೇಕು

ಎಂ ಎನ್ ಕೋಟೆ :

      ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆಗಾಗಿ ನಾವೆಲ್ಲರೂ ಕೂಡ ಅಭಿಮಾನದಿಂದ ಕನ್ನಡ ತಾಯಿಯ ಸೇವೆಯನ್ನು ಮಾಡಬೇಕು ಎಂದು ಶಿಕ್ಷರರ ಸಂಘದ ತಾಲ್ಲುಕ್ ಅಧ್ಯಕ್ಷ ದಯಾನಂದ್ ಸರಸ್ವತಿ ತಿಳಿಸಿದರು.

      ಗುಬ್ಬಿ ತಾಲ್ಲೂಕಿನ ಎಂ ಎನ್ ಕೊಟೆ ಸರ್ಕಾರಿ ಹಿರಿಯ ಪ್ರಾಥಮಿಕಪಾಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ 63ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು ಆಡಲು ಸಾವಿರ ಭಾಷೆಗಳಿರಬಹುದು ಪ್ರೀತಿಸಲು ಕನ್ನಡ ಭಾಷೆನೆ ಸಾಕು ಆದ್ದರಿಂದ ಎಲ್ಲರೂ ಸಹ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಬೆಕು, ಜೂತೆಗೆ ನಮ್ಮ ನಾಡಿನಲ್ಲಿ ಮಹಾನೀಯರು ಹುಟ್ಟಿದ ದೇಶ ಆದ್ದರಿಂದ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕು. ಕನ್ನಡ ಶಾಲೆಯಲ್ಲಿ ಓಧಿದ ಸಾಕಷ್ವು ಜನರು ಸರ್ಕಾರಿ ಸೇವೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಆದ್ದರಿಂದ ನಾವು ಮೊದಲು ಕನ್ನಡವನ್ನು ಪ್ರೀತಿಸಬೇಕು. ಎಲ್ಲರು ಸಹ ಕನ್ನಡದಲ್ಲಿ ಮಾತನಾಡಿದಾಗ ಮಾತ್ರ ಕನ್ನಡಕ್ಕೆ ಅರ್ಥ ಸಿಗುತ್ತದೆ ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ್ , ಮುಖ್ಯ ಶಿಕ್ಷಕಿ ನಿರ್ಮಲ , ಶಿಕ್ಷಕರಾದ ಗುರುಸಿದ್ದಪ್ಪ , ಗಂಗಾಧರಯ್ಯ , ಕಾಂತರಾಜು , ಪಂಕಜ , ಜಗದಂಬ , ಎಸ್ ಡಿ ಎಂ ಸಿ ಸದಸ್ಯ ಸನಾವುಲ್ಲಾ , ಪತ್ರಕರ್ತ ಎಂ ಎನ್ ಕೋಟೆ ಮೋಹನ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link