ತುರುವೇಕೆರೆ :
ತಾಲ್ಲೂಕಿನ ಕೊರೋನ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗದಂತೆ ಸ್ವಂತವಾಗಿ 25 ಆಕ್ಸಿಜನ್ ಸಿಲಿಂಡರ್ ಕೊಡಿಸಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಸೋಮವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂಜಾಗ್ರತವಾಗಿ ತಾಲ್ಲೂಕಿನಲ್ಲಿ 500 ಬೆಡ್ ಗಳನ್ನು ರೆಡಿ ಮಾಡಿಕೊಳ್ಳಬೇಕಾಗಿದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 110 ಬೆಡ್ ಕಿತ್ತೂರುರಾಣಿ ಚೆನ್ನಮ್ಮ 110 ಬೆಡ್ ಹಾಗೂ ಪಟ್ಟಣದ 4 ಕಲ್ಯಾಣ ಮಂಟಪಗಳನ್ನು ಪಡೆದು 300 ಬೆಡ್ ಗಳನ್ನು ರೆಡಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ 611 ಕೊರೋನ ರೋಗಿಗಳಿದ್ದು ಅದರಲ್ಲಿ 140 ಸೋಂಕಿತರು ಗುಣಮುಖರಾಗಿದ್ದಾರೆ ಪ್ರಸ್ತುತ 471 ರೋಗಿಗಳಿದ್ದು 404 ರೋಗಿಗಳು ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ ಪಟ್ಟಣದ ಆಸ್ಪತ್ರೆಯಲ್ಲಿ 42 ಜನರು ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ 7 ಜನರು ಆಕ್ಸಿಜನ್ ನೀಡಲಾಗುತ್ತಿದೆ.
ಎಲ್ಲ ಕಡೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಾರ್ವಜನಿಕ ಆಸ್ಪತ್ರೆಗೆ 25 ಸಿಲಿಂಡರ್ ನೀಡಲಾಗುತ್ತಿದೆ ಕೊರೋನ ರೋಗಿಗಳು ತಾಲ್ಲೂಕಿನ ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದರು. ತಹಶೀಲ್ದಾರ್ ನಯಿಂಉನ್ನಿಸಾ ಮಾತನಾಡಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನ ರೊಗಿಗಳ ಆರೋಗ್ಯ ವಿಚಾರಿಸಲು ಹೆಲ್ತ್ ವಾರ್ ರೂಮ್ ತೆರೆಯಲಾಗಿದೆ 10 ದಿನಗಳ ವರೆಗೂ ಪೋನ್ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿ ಯಾವುದೆ ಏರು ಪೇರು ಕಂಡುಬಂದರೆ ವೈದ್ಯಾದಿಕಾರಿಗಳನ್ನು ಕೂಡಲೆ ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಕೊಡಲಾಗುವುದು ಎಂದರು.
ಇ.ಓ ಮೇಲೆ ಗರಂ ಆದ ಶಾಸಕರು ಸಭೆ ನೆಡೆಯುವ ಸಂದರ್ಭದಲ್ಲಿ ಪದೆ ಪದೆ ಮೋಬೈಲ್ ಪೋನ್‍ನಲ್ಲಿ ಮಾತನಾಡುತ್ತಿದ್ದ ಇ.ಓ ಜಯಕುಮಾರ್‍ರನ್ನು ಶಾಸಕ ಮಸಾಲಜಯರಾಮ್ ತರಾಟಗೆ ತೆಗೆದುಕೊಂಡರು. ನಾವೇನು ಮಾಡುತ್ತಿದ್ದೇವೆ ನಮಗೆ ಬೇರೆ ಯಾವುದೆ ಕೆಲಸ ವಿಲ್ಲವಾ..? ನಾವೇನು ಕಾಟಚಾರಕ್ಕೆ ಮೀಟಿಂಗ್ ಮಾಡಬೇಕಾ… ಪೋನ್ ಇಡ್ರಿ ಸಾಕು? ತಾಲ್ಲೂಕಿನಲ್ಲಿ ಕೊರೋನ ಹೆಚ್ಚಾಗುತ್ತಿದ್ದೆ ಇದರ ನಿಯಂತ್ರಣದ ಬಗ್ಗೆ ಗಮನ ನೀಡಿ, ಸುಮ್ಮನೆ ಕಾಲಹರಣ ಮಾಡಬೇಡಿ ಎಂದು ಗರಂ ಆದರು.
ಸಭೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಪ್ರಿಯಾ, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ಸಿ.ಪಿ.ಐ. ನವೀನ್, ಎ.ಎಸ್.ಐ. ಶಿವಲಿಂಗಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ ಕುಮಾರ್, ಮುಖ್ಯಾಧಿಕಾರಿ ಮಂಜುಳದೇವಿ, ಬಿ.ಇ.ಓ. ರಂಗದಾಮಯ್ಯ, ಇತರರು ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
