ಮತದಾರರಲ್ಲದವರ ಪಾಸ್ ಪೋರ್ಟ್ ರದ್ದಾಗುವ ಆತಂಕ : ಮತದಾರರ ಗುರುತಿನ ಚೀಟಿಯೊಂದಿಗೆ ಪಾಸ್ ಪೋರ್ಟ್ ಜೋಡಿಸಲು ಚಿಂತನೆ

ನಂಜು0ಡಪ್ಪ.ವಿ

ಬೆAಗಳೂರು: ಮೊದಲ ಹಂತದ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ನಾಪತ್ತೆ, ಸ್ಥಳಾಂತರ, ಡೂಪ್ಲಿಕೇಟ್, ಸಾವು ಹಾಗೂ ಇತರೆ ಕಾರಣಗಳಿಂದಾಗಿ ಒಂದು ಕೋಟಿಗೂ ಅಧಿಕ ಮಂದಿ ಮತದಾರರು ಮತದಾರರ ಕರಡು ಪಟ್ಟಿಯಿಂದ ಹೊರಗುಳಿಯುವ ಭೀತಿಯ ನಡುವೆಯೇ ಮತದಾರರ ಗುರುತಿನ ಚೀಟಿಯನ್ನು ಪಾಸ್ ಪೋರ್ಟ್ ಜೊತೆ ಜೋಡಿಸಲು ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಪಾಸ್ ಪೋರ್ಟ್ ರದ್ದುಪಡಿಸುವ ಬಗ್ಗೆಯೂ ಆಯೋಗದ ಮಟ್ಟದಲ್ಲಿ ಚರ್ಚೆ ನಡೆಯುತ್ತಿವೆ. ಇದರಿಂದಾಗಿ ದೇಶ, ವಿದೇಶಗಳಲ್ಲಿ ನೆಲೆಸಿರುವವರಲ್ಲಿ, ಅದರಲ್ಲೂ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಭಾಗಿಯಾದವರಲ್ಲಿ ತಳಮಳ ಶುರುವಾಗಿದೆ. ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಿಸಿದ ಬಳಿಕ ಪಾಸ್ ಪೋರ್ಟ್ ನೊಂದಿಗೆ ಜೋಡಿಸಲು ಉದ್ದೇಶಿಸಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ದೇಶದ ಪ್ರಜೆ ಕಡ್ಡಾಯವಾಗಿ ಮತದಾನದ ಹಕ್ಕು ಹೊಂದಿರಬೇಕು. ಮತದಾರರು ಮಾತ್ರ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು ಎಂಬುದು ಚರ್ಚಾ ಹಂತದಲ್ಲಿದೆ. ಒಂದು ಕಾಲದಲ್ಲಿ ಪಾಸ್ ಪೋರ್ಟ್ ಹೊಂದುವುದು ಪ್ರತಿಷ್ಠೆಯಾಗಿತ್ತು. ಆದರೀಗ ಪಾಸ್ ಪೋರ್ಟ್ ಪಡೆಯುವುದು ಸರ್ವೆ ಸಾಮಾನ್ಯವಾಗಿದೆ. ಎಲ್ಲಾ ದಾಖಲೆಗಳನ್ನು ನೀಡಿ ಪಾಸ್ ಪೋರ್ಟ್ ಪಡೆಯುವಾಗ ಮತದಾರರ ಗುರುತಿನ ಚೀಟಿಯನ್ನು ಸಹ ಕಡ್ಡಾಯಗೊಳಿಸಬೇಕು ಎನ್ನುವ ಅಲೋಚನೆ ಕೇಂದ್ರ ಸರ್ಕಾರದ ಹಂತದಲ್ಲೂ ನಡೆಯುತ್ತಿದೆ.

ರಾಜ್ಯದಲ್ಲೂ ಪಂಚ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ಪಡೆಯಲು ಫಲಾನುಭವಿಗಳು ರಾಜ್ಯದ ಮತದಾರರಾಗಿರಬೇಕು ಎನ್ನುವ ನಿಯಮವನ್ನು ತರಲಾಗುತ್ತಿದೆ. ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪಂಚ ಗ್ಯಾರೆಂಟಿ ಸೌಲಭ್ಯಗಳನ್ನು ಮತದಾರರಿಗೆ ಅನ್ವಯಿಸಲಾಗುತ್ತಿದೆ. ಅನ್ಯ ರಾಜ್ಯದ ಮತದಾರರನ್ನು ಸೌಲಭ್ಯದಿಂದ ಹೊರಗಿಡಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

ಕರ್ನಾಟಕ, ದೆಹಲಿ, ಮಹಾರಾಷ್ಟç, ಮೇಘಾಲಯ ಮತ್ತು ಜಾರ್ಖಂಡ್ ಸೇರಿದಂತೆ ದೇಶದ ಐದು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ’ ಪ್ರಕ್ರಿಯೆ ಆರಂಭವಾಗಿದೆ. ಇದೇ ಸಮಯದಲ್ಲಿ, ಪಾಸ್‌ಪೋರ್ಟ್ ಅನ್ನು ಗುರುತಿನ ಚೀಟಿಯಾಗಿ ಬಳಸುವ ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ್ದ ದೊಡ್ಡ ಗೊಂದಲಕ್ಕೂ ಕೇಂದ್ರ ಚುನಾವಣಾ ಆಯೋಗ ತೆರೆ ಎಳೆದಿದೆ.

ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ 1967ರ ಪಾಸ್‌ಪೋರ್ಟ್ ಕಾಯ್ದೆಯನ್ನು ಉಲ್ಲೇಖಿಸಿ ಮಹತ್ವದ ಸ್ಪಷ್ಟನೆಯೊಂದನ್ನು ನೀಡಿತ್ತು. “ಪಾಸ್‌ಪೋರ್ಟ್ ಕೇವಲ ವಿದೇಶ ಪ್ರವಾಸಕ್ಕಾಗಿ ಬಳಸುವ ಪ್ರಯಾಣ ದಾಖಲೆಯಾಗಿದೆಯೇ ಹೊರತು, ಅದು ಭಾರತದ ಪೌರತ್ವಕ್ಕೆ ಪುರಾವೆಯಲ್ಲ. ಈ ನಿಯಮದಲ್ಲಿ ಮೋದಿ ಸರ್ಕಾರ ಕಳೆದ 12 ವರ್ಷಗಳಲ್ಲಿ ಯಾವುದೇ ಹೊಸ ನಿರ್ಧಾರ ಕೈಗೊಂಡಿಲ್ಲ” ಎಂದು ಸಚಿವಾಲಯ ತಿಳಿಸಿತ್ತು. ವಿದೇಶ ಪ್ರವಾಸದ ಸಂದರ್ಭದಲ್ಲಿ ಪಾಸ್‌ಪೋರ್ಟ್ ನಿಮ್ಮ ರಾಷ್ಟಿçÃಯತೆಯನ್ನು ದೃಢೀಕರಿಸುತ್ತದೆಯಾದರೂ, ಅದನ್ನು ಪೌರತ್ವದ ದೃಢೀಕರಣ ಪತ್ರ ಎಂದು ಪರಿಗಣಿಸಲಾಗದು ಎಂದು ಅಧಿಕಾರಿಗಳು ಮಾಧ್ಯಮ ಸಂವಾದದಲ್ಲಿ ಹೇಳಿದ್ದರು. ಸಚಿವಾಲಯದ ಈ ಹೇಳಿಕೆಯ ಬೆನ್ನಲ್ಲೇ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್ ಮಾನ್ಯತೆ ಪಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಸಂಶಯಗಳು ವ್ಯಕ್ತವಾಗಿದ್ದವು.

ಮತದಾರರ ಪಟ್ಟಿ ಪರಿಷ್ಕರಣೆಯ ಹೊಸ್ತಿಲಲ್ಲಿ ಎದ್ದಿರುವ ಈ ಗೊಂದಲ ಕುರಿತು ಆಯೋಗ ಸ್ಪಷ್ಟನೆ ನೀಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆಗೆ ಪಾಸ್‌ಪೋರ್ಟ್ ಸಂಪೂರ್ಣವಾಗಿ ಮಾನ್ಯವಾಗಿದೆ. ಅಗತ್ಯವಿರುವ ಒಟ್ಟು 12 ಅಧಿಕೃತ ದಾಖಲೆಗಳ ಪಟ್ಟಿಯಲ್ಲಿ ಪಾಸ್‌ಪೋರ್ಟ್ ಕೂಡ ಒಂದಾಗಿದೆ ಎಂದು ಆಯೋಗ ಖಚಿತಪಡಿಸಿದೆ. “ಪಾಸ್‌ಪೋರ್ಟ್ ಈ ಹಿಂದೆಯೂ ವ್ಯಕ್ತಿಯ ಗುರುತನ್ನು ಸ್ಥಾಪಿಸುವ ಪ್ರಮುಖ ದಾಖಲೆಯಾಗಿತ್ತು ಮತ್ತು ಮುಂದೆಯೂ ಹಾಗೆಯೇ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅಥವಾ ತಿದ್ದುಪಡಿ ಮಾಡಲು ಪಾಸ್‌ಪೋರ್ಟ್ ಮಾತ್ರವಲ್ಲದೆ ಇತರೆ ಪ್ರಮುಖ ದಾಖಲೆಗಳನ್ನೂ ಬಳಸಬಹುದಾಗಿದೆ. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನ್ಮ ಪ್ರಮಾಣ ಪತ್ರ, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ನೀಡಿರುವ ಶೈಕ್ಷಣಿಕ ಪ್ರಮಾಣ ಪತ್ರಗಳು ಮತ್ತು ಸರ್ಕಾರ ಅಂಗೀಕರಿಸಿರುವ ಇತರೆ ಅಗತ್ಯ ಗುರುತಿನ ಚೀಟಿಗಳನ್ನು ಇದಕ್ಕಾಗಿ ಬಳಸಬಹುದು ಎಂದು ಆಯೋಗ ತಿಳಿಸಿದೆ.

ಮತದಾರರ ಗುರುತಿನ ಚೀಟಿಯನ್ನು ಪಾಸ್ ಪೋರ್ಟ್ ಜೊತೆ ಜೋಡಿಸುವ ಕುರಿತ ಚರ್ಚೆ ಮಹತ್ವದ ಬೆಳವಣಿಗೆಯಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಗುರುತನ್ನು ಇನ್ನಷ್ಟು ನಿಖರವಾಗಿ ದೃಢೀಕರಿಸುವ, ನಕಲಿ ಅಥವಾ ಒಂದಕ್ಕಿAತ ಹೆಚ್ಚು ಮತದಾರರ ನೋಂದಣಿಯನ್ನು ತಡೆಯುವುದು ಹಾಗೂ ಮತದಾರರ ಪಟ್ಟಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವುದು ಇಂತಹ ಕ್ರಮಗಳ ಹಿಂದಿನ ಉದ್ದೇಶಗಳಾಗಿವೆ.

ಪಾಸ್ ಪೋರ್ಟ್ ದೇಶದ ಅತ್ಯಂತ ವಿಶ್ವಾಸಾರ್ಹ ಗುರುತಿನ ದಾಖಲೆಗಳಲ್ಲೊಂದು. ವ್ಯಕ್ತಿಯ ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಹಲವು ವಿವರಗಳು ಅದರಲ್ಲಿವೆ. ಮತದಾರರ ಗುರುತಿನ ಚೀಟಿಯೊಂದಿಗೆ ಪಾಸ್ ಪೋರ್ಟ್ ಮಾಹಿತಿಯನ್ನು ಜೋಡಿಸುವುದರಿಂದ ಒಬ್ಬ ವ್ಯಕ್ತಿಯ ಗುರುತನ್ನು ಎರಡು ಪ್ರತ್ಯೇಕ ವ್ಯವಸ್ಥೆಗಳ ಮೂಲಕ ಪರಿಶೀಲಿಸುವ ಸಾಧ್ಯತೆ ಸಿಗಲಿದ್ದು, ಇದರಿಂದ ಮತದಾರರ ಪಟ್ಟಿಯಲ್ಲಿನ ನಕಲಿ ದಾಖಲೆಗಳನ್ನು ಪತ್ತೆಹಚ್ಚಲು ಸಹಾಯವಾಗಬಹುದು.

ಚುನಾವಣಾ ಪಟ್ಟಿಗಳಲ್ಲಿ ಒಂದಕ್ಕಿAತ ಹೆಚ್ಚು ಕಡೆ ಇದ್ದರೆ ತೆಗೆಯಲು, ಪಾಸ್ ಪೋರ್ಟ್ ಅನ್ನು ಮತ್ತೊಂದು ಗುರುತಿನ ದಾಖಲೆಯೊಂದಿಗೆ ಜೋಡಿಸುವ ವ್ಯವಸ್ಥೆ ಜಾರಿಗೆ ಆಯೋಗ ಚಿಂತಿಸಿದೆ. ಇದನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದರೆ ಮತದಾರರಿಗೂ ಕೆಲವು ಅನುಕೂಲಗಳನ್ನು ನೀಡಬಹುದು. ಗುರುತಿನ ಪರಿಶೀಲನೆಗೆ ವೇಗವಾಗಬಹುದು. ವಿಳಾಸ ಬದಲಾವಣೆ ಅಥವಾ ವೈಯಕ್ತಿಕ ಮಾಹಿತಿಯಲ್ಲಿನ ತಿದ್ದುಪಡಿಗಳನ್ನು ಸುಲಭವಾಗಿ ನಿರ್ವಹಿಸಲು ಅವಕಾಶ ಸಿಗಬಹುದು. ಚುನಾವಣಾ ಪಟ್ಟಿಗಳ ನಿರ್ವಹಣೆಯಲ್ಲಿಯೂ ಹೆಚ್ಚಿನ ನಿಖರತೆ ಬರಬಹುದು.

ಆದರೆ ಪಾಸ್ ಪೋರ್ಟ್ ಹೊಂದಿರದ ನಾಗರಿಕರ ವಿಚಾರದಲ್ಲಿ ವಿಶೇಷ ವ್ಯವಸ್ಥೆ ಅಗತ್ಯವಾಗುತ್ತದೆ. ಭಾರತದಲ್ಲಿ ಎಲ್ಲರೂ ಪಾಸ್ ಪೋರ್ಟ್ ಹೊಂದಿಲ್ಲ. ಹೀಗಾಗಿ ಮತದಾನದ ಹಕ್ಕು ಮತ್ತು ಪಾಸ್ ಪೋರ್ಟ್ ಹೊಂದಿರುವುದನ್ನು ಪರಸ್ಪರ ಅವಲಂಬಿತಗೊಳಿಸುವ ಯಾವುದೇ ವ್ಯವಸ್ಥೆ ಅಸಮಾನತೆಯನ್ನು ಉಂಟುಮಾಡಬಾರದು.

ಈ ಪ್ರಸ್ತಾವನೆಯ ಅತ್ಯಂತ ಸೂಕ್ಷ÷್ಮ ಅಂಶವೆAದರೆ ವೈಯಕ್ತಿಕ ಮಾಹಿತಿಯ ಗೌಪ್ಯತೆ. ಮತದಾರರ ಮಾಹಿತಿ ಮತ್ತು ಪಾಸ್ ಪೋರ್ಟ್ ಮಾಹಿತಿಯನ್ನು ಪರಸ್ಪರ ಜೋಡಿಸಿದಾಗ ದೊಡ್ಡ ಪ್ರಮಾಣದ ವೈಯಕ್ತಿಕ ದತ್ತಾಂಶ ಒಂದೇ ವ್ಯವಸ್ಥೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ಯಾರು ನಿರ್ವಹಿಸುತ್ತಾರೆ ಯಾವ ಉದ್ದೇಶಕ್ಕಾಗಿ ಬಳಸುತ್ತಾರೆ ಯಾರಿಗೆ ಪ್ರವೇಶ ಇರುತ್ತದೆ ಮಾಹಿತಿ ಸೋರಿಕೆಯಾದರೆ ಹೊಣೆಗಾರರು ಯಾರು? ಇಂತಹ ಪ್ರಶ್ನೆಗಳಿಗೆ ಸ್ಪಷ್ಟವಾದ ಕಾನೂನು ಮತ್ತು ತಾಂತ್ರಿಕ ಸುರಕ್ಷತಾ ಕ್ರಮಗಳು ಸಹ ಅಗತ್ಯವಾಗಿವೆ.

ಚುನಾವಣಾ ವ್ಯವಸ್ಥೆಯಲ್ಲಿ ವಿಶ್ವಾಸ ಅತ್ಯಂತ ಮುಖ್ಯ. ಆದ್ದರಿಂದ ದತ್ತಾಂಶದ ಸುರಕ್ಷತೆ ಮಾತ್ರವಲ್ಲದೆ, ನಾಗರಿಕರಿಗೆ ತಮ್ಮ ಮಾಹಿತಿಯನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಕುರಿತು ಪಾರದರ್ಶಕ ಮಾಹಿತಿ ನೀಡುವುದು ಕೂಡ ಅಗತ್ಯ. ಮತದಾರರ ಗುರುತಿನ ಚೀಟಿ ಮತ್ತು ಪಾಸ್ ಪೋರ್ಟ್ ಜೋಡಣೆಯ ಉದ್ದೇಶ ಚುನಾವಣಾ ಪ್ರಕ್ರಿಯೆಯನ್ನು ಬಲಪಡಿಸುವುದಾಗಿರಬೇಕು; ಮತದಾರರ ಹಕ್ಕನ್ನು ನಿರ್ಬಂಧಿಸುವುದಾಗಿರಬಾರದು. ತಾಂತ್ರಿಕ ದೋಷ, ದಾಖಲೆಗಳಲ್ಲಿನ ವ್ಯತ್ಯಾಸ ಅಥವಾ ಪಾಸ್ ಪೋರ್ಟ್ ಮಾಹಿತಿಯ ಕೊರತೆಯಿಂದ ಅರ್ಹ ಮತದಾರರ ಹೆಸರು ಚುನಾವಣಾ ಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿ ಉಂಟಾಗಬಾರದು.

ಯಾವುದೇ ಜೋಡಣಾ ವ್ಯವಸ್ಥೆ ಜಾರಿಯಾದರೂ, ತಪ್ಪಾಗಿ ಹೆಸರು ತೆಗೆದುಹಾಕಲ್ಪಟ್ಟರೆ ಅದನ್ನು ಸರಿಪಡಿಸಿಕೊಳ್ಳಲು ಸರಳ ಮತ್ತು ತ್ವರಿತ ಮೇಲ್ಮನವಿ ವ್ಯವಸ್ಥೆ ಇರಬೇಕು. ಮತದಾರರಿಗೆ ತಮ್ಮ ದಾಖಲೆಗಳನ್ನು ಪರಿಶೀಲಿಸುವ ಮತ್ತು ತಪುö್ಪಗಳನ್ನು ತಿದ್ದಿಕೊಳ್ಳುವ ಅವಕಾಶವೂ ದೊರೆಯಬೇಕು.

ಚುನಾವಣಾ ಸುಧಾರಣೆಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಬಹುದು. ಆದರೆ ಕೇವಲ ಎರಡು ಗುರುತಿನ ದಾಖಲೆಗಳನ್ನು ಜೋಡಿಸುವುದರಿಂದಲೇ ಚುನಾವಣಾ ವ್ಯವಸ್ಥೆಯ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಚುನಾವಣಾ ಪಟ್ಟಿಗಳ ನಿರಂತರ ಪರಿಷ್ಕರಣೆ, ಪಾರದರ್ಶಕ ಪ್ರಕ್ರಿಯೆಗಳು, ಬಲವಾದ ದತ್ತಾಂಶ ಭದ್ರತೆ ಮತ್ತು ಸ್ವತಂತ್ರ ಮೇಲ್ವಿಚಾರಣೆ ಕೂಡ ಅಗತ್ಯ ಎನ್ನುತ್ತಾರೆ ಚುನಾವಣಾ ತಜ್ಞರು.

ಪಾಸ್ ಪೋರ್ಟ್ ಜೋಡಿಸುವ ಚಿಂತನೆ ಚುನಾವಣಾ ಪಟ್ಟಿಗಳ ನಿಖರತೆ ಮತ್ತು ನಕಲಿ ನೋಂದಣಿಯನ್ನು ನಿಯಂತ್ರಿಸುವ ದೃಷ್ಟಿಯಿಂದ ಪ್ರಯೋಜನವಾಬಹುದು. ಅದರ ಅನುಷ್ಠಾನದಲ್ಲಿ ಗೌಪ್ಯತೆ, ಸಮಾನತೆ, ದತ್ತಾಂಶ ಭದ್ರತೆ ಮತ್ತು ಮತದಾನದ ಹಕ್ಕಿನ ರಕ್ಷಣೆಗಳಿಗೆ ಮೊದಲ ಆದ್ಯತೆ ನೀಡಬೇಕು.

ಚುನಾವಣಾ ವ್ಯವಸ್ಥೆಯ ತಂತ್ರಜ್ಞಾನದ ಅಂತಿಮ ಗುರಿ ಕೇವಲ ದಾಖಲೆಗಳನ್ನು ಜೋಡಿಸುವುದಲ್ಲ; ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ಸುರಕ್ಷಿತವಾಗಿರುವ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಚುನಾವಣಾ ವ್ಯವಸ್ಥೆಯನ್ನು ನಿರ್ಮಿಸುವುದಾಗಿರಬೇಕು.

 

Recent Articles

spot_img

Related Stories

Share via
Copy link