ಸಂಪುಟ ವಿಸ್ತರಣೆ ಮುಗಿದ ಅಧ್ಯಾಯ..? : ಒಂದು ಸ್ಥಾನ ಮಾತ್ರ ಬಾಕಿ: ಶಾಸಕರ ಮುನಿಸು ಶಮನಗೊಳಿಸಲು ಸಿಎಂ ದೆಹಲಿಗೆ

 ಸಂಪುಟ ಯಥಾಸ್ಥಿತಿಗೆ ಹೈಕಮಾಂಡ್ ಒಲವು, ವದಂತಿಗಳಿಗೆ ಬ್ರೇಕ್!

ಬೆಂಗಳೂರು: ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರ ಮುನಿಸು ಶಮನಗೊಳಿಸಲು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶೀಘ್ರದಲ್ಲೇ ‘ಸಂಪುಟ ಪುನಾರಚನೆ’ಯಾಗಲಿದೆ ಹಾಗೂ ಹಾಲಿ ಸಂಪುಟದ ಮೂರ್ನಾಲ್ಕು ಸಚಿವರನ್ನು ಕೈಬಿಡಲಾಗುತ್ತದೆ ಎಂಬ ಭಾರೀ ವದಂತಿಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಸಂಪುಟ ವಿಸ್ತರಣೆ ಮುಗಿದ ಅಧ್ಯಾಯ, ಹಾಲಿ ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸದ ಹಿನ್ನೆಲೆಯಲ್ಲಿ, ಹಿರಿಯರಿಗಾಗಿ ಸಚಿವರಾದ ಎಚ್.ಸಿ. ಬಾಲಕೃಷ್ಣ ಹಾಗೂ ಪ್ರಿಯಾಂಕ್ ಖರ್ಗೆ ಸ್ಥಾನ ತ್ಯಜಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ದಕ್ಷಿಣ ಬೆಂಗಳೂರಿನ ಎಚ್.ಸಿ. ಬಾಲಕೃಷ್ಣ, ಮಂಡ್ಯದ ಚಲುವರಾಯಸ್ವಾಮಿ, ಬೆಂಗಳೂರಿನ ಜಮೀರ್ ಅಹಮದ್ ಖಾನ್ ಅವರನ್ನು ಕೈಬಿಡಲಾಗುತ್ತದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅಲ್ಲದೆ, ಬಿ. ನಾಗೇಂದ್ರ ಬದಲಿಗೆ ಅನ್ನಪೂರ್ಣ ತುಕಾರಾಮ್ ಅವರನ್ನು ಪರಿಗಣಿಸುವ ಒತ್ತಡಗಳೂ ಇದ್ದವು. ಆದರೆ, ಈ ಎಲ್ಲ ವದಂತಿಗಳನ್ನು ತಳ್ಳಿಹಾಕಿರುವ ಹೈಕಮಾಂಡ್, ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಖಚಿತಪಡಿಸಿದೆ.

ಸಂಪುಟದಲ್ಲಿ ಖಾಲಿಯಿರುವ ಏಕೈಕ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ನೇಮಿಸಲು ಮಾತ್ರ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಲಕ್ಷಿ÷್ಮÃ ಹೆಬ್ಬಾಳ್ಕರ್, ರೂಪಕಲಾ, ಕನೀಜ್ ಫಾತಿಮಾ, ನಯನ ಮೋಟಮ್ಮ ಸೇರಿದಂತೆ ಹಲವರು ಪೈಪೋಟಿ ನಡೆಸಿದ್ದರೂ, ಗಾಯತ್ರಿ ಶಾಂತೇಗೌಡ ಅವರ ನೇಮಕ ಬಹುತೇಕ ಖಚಿತವಾಗಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಟೀಕೆಗೆ ತಿರುಗೇಟು ನೀಡಿದ್ದ ಸಿಎಂ ಡಿಕೆಶಿ, ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ಆ ಭರವಸೆ ಈಡೇರುವ ಹಂತದಲ್ಲಿದೆ.

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಹಿರಿಯ ಶಾಸಕರ ಪೈಕಿ ಟಿ.ಬಿ. ಜಯಚಂದ್ರ ಅವರು ಸಿಎಂ ಡಿಕೆಶಿ ಅವರ ಸಂಧಾನದಿAದ ಸಮಾಧಾನಗೊಂಡಿದ್ದಾರೆ. ಆದರೆ, ಎಂ. ಕೃಷ್ಣಪ್ಪ ಬಲವಾದ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಅಸಮಾಧಾನಿತ ಶಾಸಕರಾದ ಹೆಚ್.ಸಿ. ಮಹದೇವಪ್ಪ ಹಾಗೂ ಪ್ರಿಯಕೃಷ್ಣ ದೆಹಲಿಯಲ್ಲಿ ವರಿಷ್ಠರ ಮೊರೆ ಹೋಗಿದ್ದಾರೆ. ಭ್ರಷ್ಟರನ್ನು ಕೈಬಿಟ್ಟು ನಿಷ್ಠಾವಂತರಿಗೆ ಮಣೆಹಾಕುವಂತೆ ರಾಹುಲ್ ಗಾಂಧಿಗೆ ಕಾರ್ಯಕರ್ತರು ಬರೆದಿದ್ದ ಪತ್ರವೂ ಚರ್ಚೆಗೆ ಗ್ರಾಸವಾಗಿತ್ತು.

ಈ ಎಲ್ಲ ಗೊಂದಲಗಳು ಹಾಗೂ ನೂತನ ಸಚಿವರ ‘ಖಾತೆ ಹಂಚಿಕೆ’ ಕಗ್ಗಂಟನ್ನು ಬಗೆಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಖಾತೆ ಹಂಚಿಕೆ ಪಟ್ಟಿ ಹಾಗೂ ಬಾಕಿಯಿರುವ ಒಂದು ಸ್ಥಾನದ ಭರ್ತಿಗೆ ಹೈಕಮಾಂಡ್‌ನ ಅಂತಿಮ ಅಂಕಿತ ಪಡೆಯಲು ಸಿಎಂ ಇಂದು ಅಥವಾ ನಾಳೆ ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಕ್ಸ್
ಮುಖ್ಯಾಂಶಗಳು:

ಹಾಲಿ ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ: ಮೂರ್ನಾಲ್ಕು ಸಚಿವರಿಗೆ ‘ಕೋಕ್’ ವದಂತಿ ತಳ್ಳಿಹಾಕಿದ ವರಿಷ್ಠರು.
ಖಾಲಿಯಿರುವ ಒಂದು ಸ್ಥಾನಕ್ಕೆ ಮಾತ್ರ ಮಹಿಳೆಗೆ ಅವಕಾಶ: ಗಾಯತ್ರಿ ಶಾಂತೇಗೌಡ ಸೇರ್ಪಡೆ ಬಹುತೇಕ ಖಚಿತ.
ವದಂತಿಗಳಿಗೆ ತೆರೆ: ಎಚ್.ಸಿ. ಬಾಲಕೃಷ್ಣ, ಚಲುವರಾಯಸ್ವಾಮಿ, ಜಮೀರ್ ಅಹಮದ್, ಬಿ. ನಾಗೇಂದ್ರ ಸೇಫ್.
ಅಸಮಾಧಾನಿತರ ಶಮನ: ಜಯಚಂದ್ರ ಸಮಾಧಾನ, ಪಟ್ಟು ಸಡಿಲಿಸದ ಎಂ. ಕೃಷ್ಣಪ್ಪ; ದೆಹಲಿಯಲ್ಲಿ ಲಾಬಿ ಮುಂದುವರಿಕೆ.
ಖಾತೆ ಹಂಚಿಕೆ ಕಗ್ಗಂಟು: ಮಾಜಿ ಸಿಎಂ ಸಿದ್ದರಾಮಯ್ಯ-ಡಿಕೆಶಿ ಮಹತ್ವದ ಚರ್ಚೆ, ಹೈಕಮಾಂಡ್ ಅಂಕಿತಕ್ಕೆ ದೆಹಲಿಗೆ ಸಿಎಂ.

ಬಾಕ್ಸ್
ಮಹಿಳಾ ಸಚಿವ ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡ ಬಹುತೇಕ ಫಿಕ್ಸ್!

ಬಾಕಿಯಿರುವ ಒಂದು ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡ ನಿಯೋಜನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಮಹಿಳಾ ಕೋಟದ ಆಕಾಂಕ್ಷಿಗಳಾಗಿರುವ ಲಕ್ಷಿ÷್ಮÃ ಹೆಬ್ಬಾಳ್ಕರ್, ರೂಪಕಲಾ, ಕನೀಜ್ ಫಾತಿಮಾ, ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಉಮಾಶ್ರೀ, ಆರತಿ ಕೃಷ್ಣ ಅವರು ಪೈಪೋಟಿ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಸಂಪುಟ ಪುನರ್ ರಚನೆ, ಖಾತೆ ಹಂಚಿಕೆ ವಿಚಾರವಾಗಿ ಚರ್ಚೆಗಳಾಗಿದ್ದವು. ಆದರೆ ಹೈಕಮಾಂಡ್‌ನ ಅಂಕಿತ ಪಡೆಯಲು ಮುಖ್ಯಮಂತ್ರಿಯವರು ಭಾನುವಾರ ಅಥವಾ ಸೋಮವಾರ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಫೋಟೊ :

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪರವರ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಪ್ರತಿಮೆ ಹಾಗೂ ಅವರ ಭಾವಚಿತ್ರಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಪುಷ್ಪ ನಮನ ಸಲ್ಲಿಸಿದರು.

ಫೋಟೊ : 1.1

ಮಾಜಿ ಸಿಎಂ ಸಿದ್ದರಾಮಯ್ಯ-ಡಿಕೆಶಿ ಮಹತ್ವದ ಚರ್ಚೆ

Recent Articles

spot_img

Related Stories

Share via
Copy link