ಚನ್ನಗಿರಿ:
ಕನ್ನಡ ಭಾಷೆಯನ್ನು ಸದೃಢವಾಗಿಸುವುದರ ಜೊತೆಗೆ ಇನ್ನಷ್ಟು ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.
ಪಟ್ಟಣದ ಚನ್ನಮ್ಮಾಜಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ, ಕನ್ನಡರಾಜೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದೃಡ ಹಾಗೂ ಸಮೃದ ನಾಡನ್ನು ಕಟ್ಟಲು ಶ್ರಮಿಸಿದ ನಾಡಿನ ಕವಿಗಳು, ಕಲಾವಿದರು, ಸಾಹಿತಿಗಳು, ಸಂತರು ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಗಣ್ಯಮಾನ್ಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕರ್ನಾಟಕದಲ್ಲಿರುವ ಕನ್ನಡ ಭಾಷೆಯು ವಿಶ್ವ ಮಾನ್ಯತೆ ಪಡೆದಿರುವ ಶ್ರೀಮಂತ ಭಾಷೆಯಾಗಿದೆ, ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡಾಂಬೆ ಭುವನೇಶ್ವರಿಯನ್ನು ಸ್ಮರಿಸುತ್ತ ಕನ್ನಡ ಹಬ್ಬವನ್ನು ವಿಶ್ವಮಾನ್ಯಗೊಳಿಸಿದ್ದಾರೆ, ಕನ್ನಡನಾಡು ವಿವಿಧ ಧರ್ಮ, ಸಂಸ್ಕತಿಗಳ ಸಮಾಗಮವಾಗಿದೆ, ಮೌರ್ಯರು, ಕದಂಬರು, ತಲಕಾಡಿನ ಗಂಗರು, ಹೊಯ್ಸಳರು, ವಿಜನಗರದ ಅರಸರು, ಚಾಲುಕ್ಯರು, ರಾಷ್ಟ್ರಕೂಟರು, ಮೈಸೂರಿನ ಒಡೆಯರು ಮುಂತಾದ ಅನೇಕ ರಾಜ ಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರ ಎಂದರು.
ಕರ್ನಾಟಕ ಹಿರಿಮೆ ಗರಿಮೆಯಲ್ಲಿ ತಾಲೂಕು ಸದಾ ಭಾಗಿಯಾಗಿದೆ, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಕವಾಗಿ ಶ್ರೀಮಂತವಾಗಿದೆ ಹಾಗೂ ಇಲ್ಲಿನ ಬಹುಸಂಖ್ಯಾತರು ಕನ್ನಡವನ್ನು ಆಡುವವರು, ಅಚ್ಚ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ, ಇದು ಹೆಮ್ಮೆಯ ವಿಚಾರ ಎಂದರು.
ವಿವಿಧೆಡೆ ರಾಜ್ಯೋತ್ಸವ ಆಚರಣೆ: ಪಟ್ಟಣ, ತಾಲೂಕಿನಾದ್ಯಂತ ಅಟೋಚಾಲಕರ ಸಂಘ, ವಿವಿಧ ಸಾಮಾಜಿಕ ಸಂಘಟನೆಗಳು ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು,
ಕಾರ್ಯಕ್ರಮದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಇಬ್ಬರಿಗೆ ಸನ್ಮಾನಿಸಿ ಗೌವರವಿಸಲಾಯಿತು. ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿ ಕಾರ್ಯಕ್ರಗಳು ನಡೆಯಿತು.ತಹಶಿಲ್ದಾರ್ ಎಸ್.ಆರ್. ರವಿ ಧ್ವಜಾರೋಹಣ ನೇರವೇರಿಸಿದರು, ತಾಪಂ ಅಧ್ಯಕ್ಷೆ ರೂಪ, ಉಪಾಧ್ಯಕ್ಷೆ ಗೀತಾ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಡಿ. ನಾಗರಾಜ್, ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೂಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ