ದಾವಣಗೆರೆ:
ಓರ್ವ ಬೈಕ್ ಕಳ್ಳನನ್ನು ಬಂಧಿಸಿರುವ ಇಲ್ಲಿನ ಬಡಾವಣೆ ಠಾಣಾ ಪೊಲೀಸರು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಎಸ್.ಎಂ.ಕೃಷ್ಣ ನಗರ ನಿವಾಸಿ ಮಹಾಂತೇಶ ಬಂಧಿತ ಆರೋಪಿಯಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಕೆಲಸ ನಿಮಿತ್ತ ನಗರ ಪಾಲಿಕೆಗೆ ಆಗಮಿಸಿ ಅಲ್ಲಿನ ಆವರಣದಲ್ಲಿ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದ ತಮ್ಮ ಬೈಕನ್ನು ಒಳಗೆ ಹೋಗಿ ಬರುವುದರೊಳಗಾಗಿ ಕಳವಾಗಿತ್ತು ಎಂದು ಜೆ.ಪ್ರಶಾಂತ ಎಂಬುವರು ಬಡಾವಣೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು.
24 ಗಂಟೆಗಳ ಒಳಗಾಗಿ ಪ್ರಕರಣದ ಆರೋಪಿಯನ್ನು ಬಂಧಿಸಿ, ಒಟ್ಟು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಆರ್. ಚೇತನ್ ಹಾಗೂ ಎಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ನಗರ ಉಪವಿಭಾಗದ ಡಿವೈಎಸ್ಪಿ ಎಸ್.ಎಂ. ನಾಗರಾಜ್ ಮತ್ತು ಸಿಪಿಐ ಇ. ಆನಂದ್ ಮುಂದಾಳತ್ವದಲ್ಲಿ ಬಡಾವಣೆ ಪಿಎಸ್ಐ ವೀರಬಸಪ್ಪ ಕುಸಲಾಪುರ ಮತ್ತು ಸಿಬ್ಬಂಧಿಗಳಾದ ವಿ. ರಾಜು, ಬಿ.ಆರ್. ನಾಗರಾಜಪ್ಪ, ಅರುಣ್ಕುಮಾರ್, ಕೆ.ಬಿ. ಹರೀಶ್, ವಿ.ಹೆಚ್. ಮಂಜಪ್ಪ, ಸಿ. ಹನುಮಂತಪ್ಪ, ಮಂಜನಾಯ್ಕ್, ಸೈಯದ್ ಅಲಿ, ಎಂ.ಎಂ. ಖಾನ್, ನಿಂಗರಾಜ್ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ