ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪರಿಕರಗಳು

ಹಾವೇರಿ :

         ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಒದಗಿಸುವ ಪರಿಕರಗಳು ಕಳಪೆ ಗುಣಮಟ್ಟ ಹೊಂದಿದ್ದು .ಎಂಎಸ್ ಪಿಎಸ್ ನಿಂದ ಮಕ್ಕಳಿಗೆ ನೀಡಲಾಗುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೊಡಿದ್ದರೂ ಅಧಿಕಾರಿಗಳ ನಿರ್ಲಕ್ಷೆತೆಯಿಂದ ಅಂಗನವಾಡಿ ಕೇಂದ್ರಗಳ ಸ್ಥಿತಿ ಚಿಂತಾಜನಿಕವಾಗಿದೆ ಎಂದು ಕ ರಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಿಕಿಯರ ಫೇಡರೇಷನ್ ಜಿಲ್ಲಾಧ್ಯಕ್ಷ ಹೊನ್ನಪ್ಪ ಮೆರೆಮ್ಮನವರ ಹೇಳಿದರು.

          ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಂಗನವಾಡಿಗಳು ಅವ್ಯವಸ್ಥೆಯ ಆಗರವಾಗಿದ್ದು, ಅಲ್ಲಿ ನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ, ಕಾರ್ಯಕರ್ತೆಯರಿಗೆ ಸುಮಾರು ನಾಲ್ಕು ತಿಂಗಳಿಂದ ಗೌರವ ಧನ ನೀಡದೇ ಅವರು ಕುಟುಂಬ ನಡೆಸುವುದು ಕಷ್ಟಕರ.ಜಿಲ್ಲೆಯಲ್ಲಿ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇರುವುದರಿಂದ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.

           ಬಾಡಿಗೆ ಕಟ್ಟಡದಲ್ಲಿ ನಡೆಯುವ ಅಂಗನವಾಡಿಗಳಿಗೆ ಬಾಡಿಗೆ ನೀಡಿದೇ ಇರುವುದರಿಂದ ಮಾನಸಿಕ ಕಿರುಕುಳ ಹೆಚ್ಚಾಗಲು ಕಾರಣವಾಗಿದೆ ಇಲ್ಲಿನ ಸಮಸ್ಯೆಗಳನ್ನು ಬೇಗನೆ ಪರಿಹಾರ ಮಾಡಬೆಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

           ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ : ಕೇಂದ್ರ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಮಹಿಳಾ ದಿನಾಚಾರಣೆ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವ ಧನ ಹೆಚ್ಚಳ ಮಾಡುತ್ತೇನೆ ಎಂದು ಹೇಳಿದ್ದರು ಆದರೆ ಆ ಕ್ರಮ ಇನ್ನು ಆಗದೇ ಇರುವುದರಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸದೇ ಇದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸಂಘಟನೆಯಿಂದ ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡ ಜಿಟಿ ಪೂಜಾರ.ವಿಜಯಕುಮಾರ ದೊಡ್ಡಮನಿ.ಸುನಂದಮ್ಮ ರೇವಣಕ್ಕರ.ಶೀವಲಿಲಾ ಹೂಗಾರ.ಗೀತಾ ಶೆಟ್ಟರ ಮುಖಂಡರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link