ಪಿಕೆಕೆ ಇನಿಷಿಯೇಟಿವ್ಸ್ ವತಿಯಿಂದ ಉದ್ಯೋಗ ಮೇಳ

ರಾಣಿಬೆನ್ನೂರ:

         ದೇಶದಲ್ಲಿ ದಿನೇ ದಿನೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಯುವಕ-ಯುವತಿಯರು ಸಮಾಜದ ಹೊರೆಯಾಗುತ್ತಿರುವುದು ದುರ್ದೈವದ ಸಂಗತಿ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

         ಇಲ್ಲಿನ ಮಹಿಳಾ ಬಿಎಡ್ ಕಾಲೇಜ ಆವರಣದಲ್ಲಿ ಗುರುವಾರ ಪಿಕೆಕೆ ಇನಿಷಿಯೇಟಿವ್ಸ್ ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದು ವರೆಗೂ ಕೇಂದ್ರ ಸರ್ಕಾರವು ವರ್ಷಕ್ಕೆ 2 ಕೋಟಿ ಉದ್ಯೋಗ ದೊರಕಿಸಿ ಕೊಡುತ್ತೇವೆಂದು ಹೇಳಿ 5 ವರ್ಷ ಗತಿಸುತ್ತಾ ಬಂದರೂ ಅದು ಸಾಧ್ಯವಾಗದೇ ಹುಸಿ ಭರವಸೆಯಾಗಿಯೇ ಉಳಿದಿದೆ ಎಂದರು.

         ಆದರೆ ಸರ್ಕಾರ ಮಾಡುವ ಕೆಲಸವನ್ನು ಎನ್‍ಜಿಓ ಸಂಸ್ಥೆಗಳು ಯುವಕ-ಯುವತಿಯರಿಗೆ ವಿಶೇಷ ಕಾಳಜಿ ವಹಿಸಿ ಪ್ರತೀ ವರ್ಷವೂ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಮುನ್ನಡೆಸುತ್ತಾ ಉದ್ಯೋಗ ಕಲ್ಪಿಸಿ ಕೊಡುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು, ಇದರ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು ಎಂದರು.

       ಅನೇಕ ಕಡುಬಡವ ತಂದೆ-ತಾಯಿಗಳು ಪರಿಶ್ರಮದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಹೊಂದಿ ಉನ್ನತ ಹುದ್ದೆ ಅಲಂಕರಿಸಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಬೇಕೆಂದು ಬಯಸುತ್ತಾರೆ, ಆದರೆ ಅವರ ಅಭಿಲಾಷೆಯು ಈಡೇರದೇ ಯುವಕರು ನಿರುದ್ಯೋಗಿಗಳಾಗಿ ಸಮಾಜದಲ್ಲಿ ಅಡ್ಡದಾರಿ ಹಿಡಿದು ಬಯೋತ್ಪಾದನೆಯಂಥಹ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.

        ಪಿಕೆಕೆ ಇನಿಷಿಯೇಟಿವ್ ಅಧ್ಯಕ್ಷ ಪ್ರಕಾಶ ಕೋಳಿವಾಡ, ಇರ್ಫಾನ್ ದಿಡಗೂರ, ಗಂಗಾಧರ ಬಣಕಾರ, ವೀರನಗೌಡ ಪೊಲೀಸ್‍ಗೌಡ್ರ, ಶೇಖಪ್ಪ ಹೊಸಗೌಡ್ರ, ಕೃಷ್ಣಪ್ಪ ಕಂಬಳಿ, ಇಕ್ಬಾಲಸಾಬ್ ರಾಣೇಬೆನ್ನೂರು, ಮೀರಾ ಪ್ರಭಾಕರ, ರಮೇಶ ಬಿಸಲಹಳ್ಳಿ, ಶಶಿಧರ ಬಸೇನಾಯಕ, ರಹೀಮಖಾನ ಯಲ್ಲಾಪುರ ಸೇರಿದಂತೆ ಮತ್ತಿತರರು ಇದ್ದರು.

        ಇದೇ ಸಂದರ್ಭದಲ್ಲಿ 50 ಕ್ಕೂ ಅಧಕ ವಿವಿಧ ಕಂಪನಿಗಳು ಭಾಗವಹಿಸಿ ಸಂದರ್ಶನ ನಡೆಸುವ ಮೂಲಕ 100 ಯುವಕರನ್ನು ಆಯ್ಕೆ ಮಾಡಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link