ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು

       ಶಿವಾಜಿನಗರದ ಕಸಾಯಿಖಾನೆಗೆ ಟೆಂಪೋಗಳಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 32 ಹಸುಗಳನ್ನು ವಶಪಡಿಸಿಕೊಂಡು ಗೋಶಾಲೆಗೆ ಕಳುಹಿಸಿದ್ದಾರೆ.

         ಹಾವೇರಿ ಮೂಲದ ಗಣೇಶ್ ಮೂರ್ತಿ (27) ತುಮಕೂರು ಮೂಲದ ಬಸವರಾಜು (35) ಬಂಧಿತ ಆರೋಪಿಗಳಾಗಿದ್ದಾರೆ , ಹಾವೇರಿಯಿಂದ ಶಿವಾಜಿನಗರಕ್ಕೆ ಟಾಟಾ ಏಸ್‍ನಲ್ಲಿ ಹಸುಗಳನ್ನು ತುಂಬಿಕೊಂಡು ಬರುತ್ತಿದ್ದಾಗ, ಆರ್‍ಎಂಸಿ ಯಾರ್ಡ್ ಮುಖ್ಯರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ಗಣೇಶ್ ಮೂರ್ತಿಯನ್ನು ಬಂಧಿಸಿ ಆರ್‍ಎಂಸಿ ಯಾರ್ಡ್ ಪೊಲೀಸರು 12 ಹಸುಗಳನ್ನು ಗೋಶಾಲೆಗೆ ಕಳುಹಿಸಿದ್ದಾರೆ.

20 ಹಸುಗಳ ವಶ

        ತುಮಕೂರು ಕಡೆಯಿಂದ ಶಿವಾಜಿನಗರಕ್ಕೆ ಲಾರಿಯಲ್ಲಿ ತೆಗೆದುಕೊಂಡು ಬರುತ್ತಿದ್ದ 20 ಹಸುಗಳನ್ನು ಯಶವಂತಪುರ ಪೊಲೀಸರು ವಶಪಡಿಸಿಕೊಂಡು ಆರೋಪಿ.

         ತುಮಕೂರು ಮೂಲದ ಬಸವರಾಜು (35)ಬಂಧಿಸಿದ್ದಾರೆ. ಹಸುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಲು ತರುತ್ತಿದ್ದ ಮಾಹಿತಿ ಆಧರಿಸಿ ವೈಪಿಆರ್ ಮೇಲುಸೇತುವೆ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ, ಹಸುಗಳನ್ನು ಗೋಶಾಲೆಗೆ ಕಳುಹಿಸಿದ್ದಾರೆ ಎಂದು ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link